Home » Murder Case: ನಡುರಸ್ತೆಯಲ್ಲಿ ವ್ಯಕ್ತಿಯೋರ್ವನನ್ನು ಅಟ್ಟಾಡಿಸಿ ಹೊಡೆದು ಕೊಲೆ, ಭೀಕರ ಮರ್ಡರ್‌ ಕೇಸ್‌!!!

Murder Case: ನಡುರಸ್ತೆಯಲ್ಲಿ ವ್ಯಕ್ತಿಯೋರ್ವನನ್ನು ಅಟ್ಟಾಡಿಸಿ ಹೊಡೆದು ಕೊಲೆ, ಭೀಕರ ಮರ್ಡರ್‌ ಕೇಸ್‌!!!

0 comments
Murder case

Murder Case: ತುಮಕೂರು: ತಿಪಟೂರು ನಗರದ ಕೆ.ಆರ್.ಬಡಾವಣೆಯ ಮೂರನೇ ಮುಖ್ಯ ರಸ್ತೆಯಲ್ಲಿ ವ್ಯಕ್ತಿಯೋರ್ವನನ್ನು ಯಾರೋ ಅಟ್ಟಾಡಿಸಿಕೊಂಡು ಕೊಲೆ ಮಾಡಿರುವ (Murder Case) ಘಟನೆಯೊಂದು ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಸಕೆರೆ ಗ್ರಾಮದ ಮಹೇಂದ್ರ (34) ಎಂಬಾತನೇ ಮೃತ ವ್ಯಕ್ತಿ. ಇವರ ಬಳಿ ಇದ್ದ ಡ್ರೈವಿಂಗ್‌ ಲೈಸೆನ್ಸ್‌ (Driving Licence) ಆಧಾರದಲ್ಲಿ ವ್ಯಕ್ತಿಯನ್ನು ಗುರುತು ಹಿಡಿಯಲಾಗಿದೆ.

ಬೆಳಗ್ಗೆ ಐದು ಗಂಟೆ ಸುಮಾರಿಗೆ ಜನ ರಸ್ತೆಯಲ್ಲಿ ಓಡಾಡಲು ಪ್ರಾರಂಭ ಮಾಡಿದಾಗ, ಶವ ಪತ್ತೆಯಾಗಿದ್ದು, ನಂತರ ಅವರ ಬಳಿ ಇದ್ದ ಆಧಾರ್‌ ಕಾರ್ಡ್‌ನ್ನು ಯಾರೋ ಗಮನಿಸಿದ್ದು ಇವರು ಮದ್ದೂರಿನ ಮಹೇಂದ್ರ ಎಂದು ತಿಳಿದು ಬಂದಿದೆ.

ಶವ ಬಿದ್ದ ಕಡೆಯಲ್ಲಿ ರಕ್ತಸಿಕ್ತ ಕಾಲುಗಳೊಂದಿಗೆ ರಸ್ತೆ ತುಂಬ ಓಡಾಡಿರುವ ಗುರುತಗಳು ಇದೆ. ಹೀಗಾಗಿ ಅಟ್ಟಾಡಿಸಿಕೊಂಡು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಸಾಧ್ಯತೆ ಇದೆ. ಆರೋಪಿಗಳು ಎಲ್ಲಿಂದಲೋ ಬೆನ್ನಟ್ಟಿಕೊಂಡು ಬಂದಿದ್ದು, ನಂತರ ಕತ್ತರಿಸಿ ಹಾಕಿ ಬಳಿಕ ಅಲ್ಲಿಂದ ಪರಾರಿಯಾಗಿರುವ ಸಾಧ್ಯತೆ ಇದೆ. ಮಹೇಂದ್ರ ಗಾಯಗೊಂಡು ರಕ್ತದಲ್ಲೇ ಓಡಾಡಿ ಪ್ರಾಣ ಬಿಟ್ಟಿರುವ ಶಂಕೆ ಇದೆ.

ಅರೆ ನಗ್ನಾವಸ್ಥೆಯಲ್ಲಿದ್ದ ವ್ಯಕ್ತಿಯ ಬಳಿ ಬ್ಯಾಗ್‌, ಮೊಬೈಲ್‌, ಡಿಎಲ್‌ ಪತ್ತೆಯಾಗಿದೆ. ಸ್ಥಳಕ್ಕೆ ತಿಪಟೂರು ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ, ತಿಪಟೂರು ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ ಭೇಟಿ ನೀಡಿದ್ದು, ಮೃತದೇಹವನ್ನು ತಿಪಟೂರು ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ: AIUDF: ರೇಪ್, ಕಳ್ಳತನ ಮಾಡೋದ್ರಲ್ಲಿ ಮುಸ್ಲಿಮರೇ ಮೊದಲಿಗರು- ಶಾಕಿಂಗ್ ಹೇಳಿಕೆ ನೀಡಿದ ಮುಸ್ಲಿಂ ನಾಯಕ

You may also like

Leave a Comment