Shivamogga: ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಿಂದ ಶಿವಮೊಗ್ಗ ಜಂಬೂಸವಾರಿ ಅಂತ ನೇತ್ರಾವತಿ ಆನೆಯನ್ನು ಕರೆತರಲಾಗಿತ್ತು. ಒಟ್ಟು ಮೂರು ಆನೆಗಳನ್ನು ಕರೆತರಲಾಗಿತ್ತು. ಕಳೆದ ನಾಲ್ಕು ದಿನದಿಂದ ಆನೆಗಳಿಗೆ ತಾಲೀಮು ಕೊಡಿಸಲಾಗಿತ್ತು. ಈ ತಾಲೀಮು ಪ್ರಕ್ರಿಯೆಯಲ್ಲಿ ನೇತ್ರಾವತಿ ಎಂಬ ಆನೆ ಕೂಡಾ ಭಾಗಿಯಾಗಿತ್ತು. ಅಂಬಾರಿ ಹೊರುವ ಸಾಗರ್ ಆನೆ ಜೊತೆಗೆ ಕುಮ್ಕಿ ಆನೆಗಳಾಗಿ ನೇತ್ರಾ ಹಾಗೂ ಹೇಮಾವತಿಯನ್ನು ಕರೆತರಲಾಗಿತ್ತು.
ಶಿವಮೊಗ್ಗ (Shivamogga) ದಸರಾ ಕಾರಣಕ್ಕಾಗಿ ಮೈಸೂರು ದಸರಾಗೆ ನೇತ್ರಾ ಆನೆ ಕಳಿಸಲು ನಿರಾಕರಿಸಲಾಗಿತ್ತು. ರಾಜ್ಯದ ಎರಡನೇ ಅತಿದೊಡ್ಡ ದಸರಾ ಎಂದರೆ ಶಿವಮೊಗ್ಗದ ದಸರಾ ಜಂಬೂ ಸವಾರಿಗೆ ಬಂದಿದ್ದ ಈ ಆನೆ ಇದೀಗ ಹೆಣ್ಣುಮಗುವಿಗೆ ಜನ್ಮ ನೀಡಿದೆ. ಹೆಣ್ಣು ಮರಿಗೆ ನೇತ್ರ ಆನೆ ಜನ್ಮ ನೀಡಿದ್ದಾಳೆ. ನಿನ್ನೆ ರಾತ್ರಿ ಮರಿಗೆ ಜನ್ಮ ನೀಡಲಾಗಿದೆ. ಸದ್ಯ ನೇತ್ರ ಆನೆಯನ್ನು ಸಕ್ರಬೈಲಿನ ಆನೆ ಬಿಡಾರಕ್ಕೆ ಕಳುಹಿಸಲಾಗಿದೆ. ಪ್ರೆಗ್ನೆನ್ಸಿ ಟೆಸ್ಟ್ ಸಂದರ್ಭ ನೆಗೆಟಿವ್ ಬಂದಿದ್ದರಿಂದ ಜಂಬೂ ಸವಾರಿಗೆ ಆಯ್ಕೆ ಮಾಡಲಾಗಿತ್ತು.
ಇದನ್ನೂ ಓದಿ: Mangaluru: ಹುಲಿಕುಣಿತದ ವೇಳೆ ಹುಲಿವೇಷಧಾರಿಯೊಬ್ಬ ಬಿದ್ದು ಗಾಯ! ತಪ್ಪಿದ ಭಾರೀ ಅನಾಹುತ!!
