Dharwad: ತಾನು ಹೆತ್ತ ಕರುಳಬಳ್ಳಿಯನ್ನೇ ಹೆತ್ತ ತಾಯಿಯೋರ್ವಳು ನಿರ್ದಯಿಯಾಗಿ ಗದ್ದೆಯಲ್ಲಿ ಎಸೆದು ಹೋಗಿರುವ ಘಟನೆಯೊಂದು ನಡೆದಿದೆ. ಈ ಘಟನೆ ನಡೆದಿರುವುದು ಧಾರವಾಡ( Dharwad) ಜಿಲ್ಲೆ ಕಲಘಟಗಿ ನಗರದ ಹೊರವಲಯದಲ್ಲಿ.
ಕಲಘಟಗಿ ಪಟ್ಟಣದ ಹೊರ ವಲಯದ ಕೆಇಬಿ ಗ್ರೀಡ್ ಬಳಿಯ ಕಬ್ಬಿನ ಗದ್ದೆಯೊಂದರಲ್ಲಿ ಮಂಗಳವಾರ ಮಧ್ಯಾಹ್ನ ನವಜಾತ ಶಿಶು ಪತ್ತೆಯಾಗಿದೆ. ಅಂದಾಜು ಮೂರು ಕೆ.ಜಿ ತೂಕದ ಗಂಡು ಶಿಶುವಿದು. ಶಿಶುವಿಗೆ ಇರುವೆಗಳು ಕಚ್ಚಲು ಆರಂಭಿಸಿದಾಗ ಮಗು ಅಳಲು ಆರಂಭಿಸಿದೆ. ಶಿಶುವಿನ ಧ್ವನಿ ಕೇಳಿಸಿಕೊಂಡ ಕಬ್ಬಿನ ಗದ್ದೆಯ ಪಕ್ಕದ ಮನೆಯವರು ಶಿಶು ರಕ್ಷಿಸಿ ಆರೈಕೆ ನೀಡಿದರು.
ಎರಡು ಗಂಟೆ ಸುಮಾರಿಗೆ ಅಪರಿಚಿತ ತುಂಬು ಗರ್ಭಿಣಿಯೋರ್ವಳು ಕಬ್ಬಿಣ ಗದ್ದೆಯಲ್ಲಿ ಮಗುವಿಗೆ ಜನ್ಮ ನೀಡಿ, ಕರುಳು ಬಳ್ಳಿ ಕತ್ತರಿಸಿ, ಮಗುವನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾಳೆ. ಏಕೆಂದರೆ ಶಿಶು ದೊರಕಿದ ಜಾಗದಲ್ಲಿ ತುಂಬಾ ರಕ್ತ ಇತ್ತು.
ಕಬ್ಬಿನ ಗದ್ದೆಯ ಪಕ್ಕದ ಮನೆಯ ಹೆಣ್ಣು ಮಗಳು ತನ್ನ ಮನೆಗೆ ಆ ಪುಟ್ಟ ಕಂದನನ್ನು ಕರೆದುಕೊಂಡು ಹೋಗಿ ಆರೈಕೆ ಮಾಡಿದ್ದಾರೆ. ಓರ್ವ ಹೆಣ್ಣಿಗೆ ಬೇಡದ ಮಗುವನ್ನು ಇನ್ನೋರ್ವ ಹೆಣ್ಣು ಆರೈಕೆ ಮಾಡಿದ್ದಾಳೆ.
ಮನೆಗೆ ತಂದು ಹಾಲು ಕುಡಿಸಿ ಆರೈಕೆ ಮಾಡಿದ ಆ ಮಹಿಳೆ ನಂತರ ಸ್ಥಳೀಯರಿಗೆ ತಿಳಿಸಿ ಮಗುವನ್ನು ಶಿಶುಪಾಲನಾ ಕೇಂದ್ರಕ್ಕೆ ರವಾನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮಗುವಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ. ನಂತರ ಶಿಶುಪಾಲನಾ ಕೇಂದ್ರಕ್ಕೆ ಕಳುಹಿಸಿದ್ದಾರೆ. ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪೋಷಕರೇ ಎಚ್ಚರ, ಜೋಕಾಲಿ ಆಡುವಾಗ ಕುತ್ತಿಗೆಗೆ ಹಗ್ಗ ಸಿಲುಕಿ 10 ವರ್ಷದ ಬಾಲಕ ದಾರುಣ ಸಾವು!!!
