Bidar: ಹಿಂದೂ ಮುಸ್ಲಿಂ ಬಣಗಳ ನಡುವೆ ಆಗಾಗ ಗಲಾಟೆ ನಡೆಯುವುದು ಮುನ್ನಲೆಗೆ ಬರುತ್ತಲೇ ಇರುತ್ತದೆ.ಬೀದರಿನ (Bidar)ಮಸೀದಿ ಮೇಲೆ ಸೆ. 20ರಂದು ರಾತ್ರಿ ವೇಳೆ ಭಗವಾಧ್ವಜವನ್ನು ಹಾರಿಸಿ ಪುಂಡಾಟ ಮೆರೆದ ಘಟನೆ ವರದಿಯಾಗಿದೆ. ಬಸವಕಲ್ಯಾಣ ತಾಲ್ಲೂಕಿನ ಧನ್ನೂರಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಸೆಪ್ಟೆಂಬರ್ 20ರಂದು ತಡರಾತ್ರಿ ನಾಲ್ವರು ಯುವಕರು ಕುಡಿದ ಮತ್ತಿನಲ್ಲಿ ಧ್ವಜ ಹಾರಿಸಿದ್ದಾರೆ(Hindu youths hoisted saffron flag on Bidar Masjid)ಎಂದು ಸ್ಥಳೀಯ ಮಸೀದಿಯ ಮುಖಂಡರು ದೂರು ನೀಡಿದ್ದರು.
ಸೆಪ್ಟಂಬರ್ 20ರಂದು ತಡರಾತ್ರಿ ಗ್ರಾಮದ ಹನುಮಾನ್ ದೇವಸ್ಥಾನದ ಮೇಲಿದ್ದ ಭಗವಾಧ್ವಜ ತೆಗೆದುಕೊಂಡು ಹೋಗಿ, ಸ್ವಲ್ಪ ದೂರದಲ್ಲಿದ್ದ ಜಾಮಾ ಮಸೀದಿ ಮೇಲೆ ಕಟ್ಟಲಾಗಿದೆ. ಮಸೀದಿಯ ಚಾಂದಸಾಬ್ ಎಂಬುವವರು ನೀಡಿದ್ದ ದೂರಿನ ಮೇರೆಗೆ ಬಸವಕಲ್ಯಾಣ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮದ ಜಾಮಾ ಮಸೀದಿ ಮೇಲೆ ನಾಲ್ವರು ಯುವಕರು ಭಗವಾಧ್ವಜ ಹಾರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಧ್ವಜವನ್ನು ಹಾರಿಸಿದ ನಾಲ್ವರನ್ನು ವೀರೇಶ ಸೂರ್ಯ, ಕಲ್ಯಾಣಿ ಸೂರ್ಯ, ಸುಶೀಲ ಬಿರಾದಾರ ಹಾಗೂ ಅಭಿಷೇಕ ಚಂದ್ರಕಾಂತ ಎಂದು ಗುರುತಿಸಲಾಗಿದ್ದು, ಇವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
