Vehicle tax: ಬೆಳ್ಳಂಬೆಳಗ್ಗೆಯೇ ವಾಹನ ಮಾಲಿಕರಿಗೆ ಬೊಂಬಾಟ್ ಸುದ್ದಿ ಸಿಕ್ಕಿದೆ. ಸಿದ್ದು ಗೌರ್ಮೆಂಟ್ ನಿಂದ ಮಹತ್ವದ ಆದೇಶ (BIGG NEWS) ಬಂದಿದೆ. ಹೌದು, ವಿವಿಧ ವಾಹನ ಸಂಘಗಳ ಬೇಡಿಕೆ ಈಡೇರಿದ್ದು, ವಾಹನಗಳಿಗೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಿಂದಿನ ರೀತಿಯಲ್ಲೇ ವಾಹನಗಳಿಗೆ ಹಳೆ ತೆರಿಗೆ( Vehicle tax)ವ್ಯವಸ್ಥೆ ಮುಂದುವರೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ವಾಹನಗಳಿಗೆ 5ರಿಂದ 15 ಲಕ್ಷ ರೂ.ವರೆಗೆ ಜೀವಿತಾವಧಿ ತೆರಿಗೆ ವಿಧಿಸಲಾಗುತ್ತದೆ. ಹಳದಿ ಬೋರ್ಡ್ ವಾಹನಗಳ ಮಾಲೀಕರು ಸಾಲ ಪಡೆಯುವುದು. ಹಳೆ ವಾಹನ ಖರೀದಿಸುವುದು ಸಾಮಾನ್ಯವಾಗಿದೆ.
ರಾಜ್ಯದಲ್ಲಿ ಹೆಚ್ಚಿನ ತೆರಿಗೆ ಇದೆ ಎಂದು ಜೀವಿತಾವಧಿ ತೆರಿಗೆ ಕಡಿಮೆ ಇರುವ ಬೇರೆ ರಾಜ್ಯಗಳಲ್ಲಿ ವಾಹನ ಖರೀದಿಸಿ ನೋಂದಣಿ ಮಾಡಿಕೊಂಡು ಇಲ್ಲಿ ಓಡಿಸುತ್ತಾರೆ. ಇದರಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಕೈತಪ್ಪುತ್ತದೆ ಎಂದು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಲಾಗಿದೆ. ಹಾಗಾಗಿ ವಾಹನಗಳಿಗೆ ಹಳೆಯ ತೆರಿಗೆ ವ್ಯವಸ್ಥೆ ಮುಂದುವರೆಸಲು ಸಿಎಂ ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ಇದನ್ನೂ ಓದಿ: Health Tips: ರಾತ್ರಿ ತುಂಬಾ ಲೇಟ್ ಆಗಿ ಮಲಗ್ತೀರಾ ?! ಹಾಗಿದ್ರೆ ಈ ಕಾಯಿಲೆ ಬರೋದು ಫಿಕ್ಸ್ ಬಿಡಿ !
