KSRTC: ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಮೂಲಕ ದೇಶಾದ್ಯಂತ KSRTC ಹೆಸರು ಭಾರೀ ಸದ್ದು ಮಾಡಿದೆ. ರಾಜ್ಯದಲ್ಲೂ ಕೂಡ ಈ ಯೋಜನೆಯನ್ನು ನಾರಿಯರು ಶಕ್ತಿ ಮೀರಿ ಬಳಸಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಚೆನ್ನಾಗಿಯೇ ಇದ್ದ ಈ ಯೋಜನೆ ಇದೀಗ ರಾಜ್ಯದ ಬೊಕ್ಕಸಕ್ಕೆ ಕನ್ನ ಹಾಕಲು ರೆಡಿಯಾಗಿದೆ. ಈ ಮೂಲಕ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಫಿಕ್ಸ್ ಆಗಿದೆ.
ಹೌದು, ಶಕ್ತಿಯೋಜನೆಗೆ ಸರ್ಕಾರ ನೀಡಿದ ಅನುದಾನ ಕರಗುತ್ತಾ ಬರುತ್ತಿದೆ. ಟಿಕೆಟ್ ಮೌಲ್ಯ ಹೆಚ್ಚಾಗಿರುವುದರಿಂದ ಈಗಾಗಲೇ ಶಕ್ತಿ ಯೋಜನೆಯ ಫಂಡ್ ಮುಕ್ಕಾಲು ಭಾಗ ಕಾಲಿಯಾಗಿದೆ. ಈ ಯೋಜನೆಗೆ ಆರಂಭದಲ್ಲಿ ಭರ್ಜರಿ ರೆಸ್ಪಾನ್ಸ್ ದೊರೆತಾಗ ಸರ್ಕಾರಕ್ಕೆ ಭಾರೀ ಸಂತೋಷವಾಗಿತ್ತು. ಆದರೀಗ ಇದುವೇ ಸರ್ಕಾರಕ್ಕೆ ಸಂಚಕಾರ ತಂದೊಡ್ಡಿದ್ದು, ಇದರಿಂದ ಕಂಗೆಟ್ಟಿರುವ ಸರ್ಕಾರ ಬಸ್ ಟಿಕೆಟ್ ದರವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಲು ಮುಂದಾಗಿದೆ.
ಅಂದಹಾಗೆ ದಸರಾ ಸಮಯದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸಲ್ಲಿ ಪ್ರಯಾಣ ಬೆಳೆಸಿದರು. KSRTC ಕೂಡ ಹೆಚ್ಚಿನ ಬಸ್ ಸೌಲಭ್ಯ ನೀಡಿ ಜನರಿಗೆ ಅನುಕೂಲ ಮಾಡಿಕೊಟ್ಟಿತ್ತು. ಆದರೀಗ ದಸರಾ ಮುಗಿಯುತ್ತಿದ್ದಂತೆ ಸಂಸ್ಥೆಯು ಮೈಸೂರು-ಬೆಂಗಳೂರು ತಡೆರಹಿತ KSRTC ಬಸ್ ಪ್ರಯಾಣದರವನ್ನು 15ರೂ. ಏರಿಸಿದೆ. ಇದರಿಂದಾಗಿ ಈ ಹಿಂದೆ ಟಿಕೆಟ್ ದರ 185ರೂ. ಇದ್ದದ್ದು ಈಗ 200 ರೂ. ಯಾಗಿದೆ. ಈ ಟಿಕೆಟ್ ದರ ಏರಿಕೆಯ ಎಫೆಕ್ಟ್ ನಿಂದಾಗಿ ಪುರುಷ ಪ್ರಯಾಣಿಕರಿಗಂತೂ ಬರೆ ಎಳೆದಂತಾಗಿದೆ.
ಇನ್ನು ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವ ತಡೆರಹಿತ KSRTC ಬಸ್ ಗಳಿಗೆ ಮಾತ್ರ ಈ ಟಿಕೆಟ್ ಏರಿಕೆಯ ದರ ಅನ್ವಯವಾಗುವುದೇ ಹೊರತು ಬೇರೆ ಯಾವುದೇ ಅಂದರೆ ರಾಜಹಂಸ, ಐರಾವತ, ಇವಿ ಪವರ್ ಪ್ಲಸ್, ಇತರ ಎಸಿ (AC) ಹಾಗೂ ನಾನ್ ಎಸಿ (Non AC) ಬಸ್ ಗಳಿಗೆ ಈ ದರ ಅನ್ವಯವಾಗಲಾರದು ಎಂದು ನಿಗಮವು ಸ್ಪಷ್ಟೀಕರಣ ನೀಡಿದೆ.
ಇದನ್ನೂ ಓದಿ: ಮಹಿಳೆಯರ ಸ್ವಸಹಾಯ ಸಾಲ ಮನ್ನಾ ಮತ್ತು ಪ್ರತಿ ಗ್ಯಾಸ್ ಸಿಲಿಂಡರ್ ಗೆ 500 ರೂಪಾಯಿ ಸಬ್ಸಿಡಿ – ಕಾಂಗ್ರೆಸ್ ನಾಯಕಿಯ ಬಿಗ್ ಹೇಳಿಕೆ !
