Cancelled ration Card list: ರಾಜ್ಯ ಸರಕಾರ ಗ್ಯಾರಂಟಿ ಯೋಜನೆ ಜಾರಿಯಾದ ಬಳಿಕ ಬಿಪಿಎಲ್ ಕಾರ್ಡ್ (BPL Card Holder) ಹೊಂದಿರುವವರ ಸಂಖ್ಯೆ ಹೆಚ್ಚಾಗಿದೆ. ಬಡತನ ರೇಖೆಗಿಂತ ಕೆಳಗಿರುವ (BPL )ಕಾರ್ಡ್ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಈ ರೇಷನ್ ಕಾರ್ಡ್ (Ration Card) ಮೂಲಕ ಬಿಪಿಎಲ್ ಕಾರ್ಡ್ ಅನ್ನಭಾಗ್ಯ ಮತ್ತು ಗೃಹ ಲಕ್ಷ್ಮಿಯಂತಹ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.
ಕಳೆದ 6 ತಿಂಗಳಿನಿಂದ ಪಡಿತರ ಪಡೆಯದವರಿಗೆ ಆಹಾರ ಇಲಾಖೆ ಬಿಗ್ ಶಾಕ್ ನೀಡಿದ್ದು, ರಾಜ್ಯಾದ್ಯಂತ 3 ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ. ಈ ನಡುವೆ, ಗೃಹಲಕ್ಷ್ಮಿ ಯೋಜನೆ, ಕಿಸಾನ್ ಯೋಜನೆ, ಅನ್ನಭಾಗ್ಯ ಯೋಜನೆ ಸೇರಿದಂತೆ ಎಲ್ಲಾ ಯೋಜನೆಗೆ ಪಡಿತರ ಹಣ ಬರಬೇಕೆಂದರೆ ರೇಷನ್ ಕಾರ್ಡ್ ಸರಿ ಇರಬೇಕಾಗುತ್ತದೆ. ಇದಕ್ಕಾಗಿ, ಇ – ಕೆವೈಸಿ (E-KYC) ಮಾಡಿಸಬೇಕು. ರೇಷನ್ ಪಡೆಯದವರ ರೇಷನ್ ಕಾರ್ಡ್ ರದ್ದು ಮಾಡಲು ಆಹಾರ ಇಲಾಖೆ ತೀರ್ಮಾನ ಕೈಗೊಂಡಿದೆ.
ಯಾರು ಪ್ರತಿ ತಿಂಗಳು ರೇಷನ್ ಪಡೆಯುತ್ತಿಲ್ಲವೋ ಅಂತಹವರ ಕಾರ್ಡ್ ರದ್ದತಿಗೆ ಆಹಾರ ಇಲಾಖೆ ತೀರ್ಮಾನ ಕೈಗೊಂಡಿದ್ದು, ಅನರ್ಹ ಫಲಾನುಭವಿಗಳ ರೇಷನ್ ಕಾರ್ಡ್ ಅನ್ನು ರದ್ದು ಮಾಡಲಾಗಿದೆ. ಸದ್ಯ, ರದ್ದಾದ ರೇಷನ್ ಕಾರ್ಡ್ ಲಿಸ್ಟ್( Cancelled ration Card list) ಬಿಡುಗಡೆ ಮಾಡಲಾಗಿದ್ದು, ಕೆಳಗಿನ ವಿಧಾನಗಳನ್ನು ಅನುಸರಿಸಿ ಚೆಕ್ ಮಾಡಬಹುದು.
ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೇ ಎಂಬುದನ್ನು ಈ ರೀತಿ ಚೆಕ್ ಮಾಡಿ:
# ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೇ ಇಲ್ಲವೇ ಎಂಬುದನ್ನು ತಿಳಿಯಲು https://ahara.kar.nic.in/Home/Home 3 ಗೆ ಭೇಟಿ ನೀಡಿ.
# ನೀವು ಮೊಬೈಲ್ ನಲ್ಲಿ ನೋಡುತ್ತಿದ್ದರೆ ಡೆಸ್ಕ್ ಟಾಪ್ ವ್ಯೂ (desk top view) ಎನ್ನುವ ಆಯ್ಕೆಯನ್ನು ಸೆಲೆಕ್ಟ್ (select) ಮಾಡಿ.
# ವೆಬ್ ಸೈಟ್ ಗೆ ಭೇಟಿ ನೀಡಿದ ಬಳಿಕ ನೀವು ಪಡಿತರ ಚೀಟಿಯ ಆಯ್ಕೆಯನ್ನು ಆರಿಸಬೇಕು.
# ನೀವು ‘ರಾಜ್ಯ ಪೋರ್ಟಲ್ಗಳಲ್ಲಿ ಪಡಿತರ ಚೀಟಿ ವಿವರಗಳು’ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
# ನಿಮ್ಮ ಪಡಿತರ ಚೀಟಿ ಇರುವ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಿ.
# ನೀವು ನಿಮ್ಮ ಜಿಲ್ಲೆಯನ್ನು ಹಾಗೂ ನಿಮ್ಮ ಬ್ಲಾಕ್ ಅನ್ನು ಅದೇ ರೀತಿ ನಿಮ್ಮ ಪಂಚಾಯತ್ ಅನ್ನು ಕೂಡ ಆಯ್ಕೆ ಮಾಡಬೇಕು.
# ಈಗ ನೀವು ನಿಮ್ಮ ಪಡಿತರ ಅಂಗಡಿಯ ಹೆಸರು ಮತ್ತು ಪಡಿತರ ಚೀಟಿಯ ಪ್ರಕಾರವನ್ನು ಕೂಡ ಹೇಳಬೇಕು.
# ಈಗ ನಿಮಗೆ ಒಂದು ಪಟ್ಟಿ ನಿಮ್ಮ ಮುಂದೆ ಕಾಣಿಸಿಕೊಳ್ಳಲಿದ್ದು, ಈ ಪಟ್ಟಿಯಲ್ಲಿ ಪಡಿತರ ಚೀಟಿದಾರರ ಹೆಸರುಗಳಿವೆ.
# ಈಗ ನೀವು ನಿಮ್ಮ ರೇಷನ್ ಕಾರ್ಡ್ ಅನ್ನು ಇಲ್ಲಿ ಹುಡುಕಿದಾಗ ಹೆಸರು ಪಟ್ಟಿಯಲ್ಲಿ ಹೆಸರು ಇದ್ದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಸೇರ್ಪಡೆಯಾಗಿದೆ ಎಂಬುದು ತಿಳಿಯುತ್ತದೆ.
# ಪಡಿತರ ಚೀಟಿಯಲ್ಲಿ ಹೆಸರು ಇಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದು ಮಾಡಲಾಗಿದೆ ಎಂಬುದು ತಿಳಿಯುತ್ತದೆ.
