Home » Tarnsposrt department: ರಾಜ್ಯಾದ್ಯಂತ KSRTC ಟಿಕೆಟ್ ದರದಲ್ಲಿ ಭಾರೀ ಏರಿಕೆ !!

Tarnsposrt department: ರಾಜ್ಯಾದ್ಯಂತ KSRTC ಟಿಕೆಟ್ ದರದಲ್ಲಿ ಭಾರೀ ಏರಿಕೆ !!

1 comment

Tarnsposrt department: ‘ಶಕ್ತಿ ಯೋಜನೆ’ಯನ್ನು ಜಾರಿಗೆ ತಂದು ಕೆಎಸ್ಆರ್ಟಿಸಿ(KSRTC) ನಿಗಮದ ಸುಧಾರಣೆಯಲ್ಲಿ, ನಿರ್ವಹಣೆಯಲ್ಲಿ ಸಂಕಷ್ಟಕ್ಕೀಡಾಗಿರೋ ರಾಜ್ಯ ಸರ್ಕಾರ ಇದೀಗ ಬಸ್ ಟಿಕೆಟ್ ದರ ಏರಿಕೆ ವಿಚಾರದಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಹೌದು, ರಾಜ್ಯ ಸರ್ಕಾರವು ಪ್ರತೀ ವರ್ಷವೂ ವಿದ್ಯುತ್ ದರ ಏರಿಕೆ ಮಾಡುವುದು ಎಲ್ಲರಿಗೂ ತಿಳಿದೇ ಇದೆ. ಇದೀಗ ಇದೇ ಮಾದರಿಯಲ್ಲೂ ಪ್ರತೀ ವರ್ಷವೂ ಸಾರಿಗೆ ಇಲಾಖೆಯು(Tarnsposrt department) ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನಾಲ್ಕೂ ನಿಗಮಗಳ ಬಸ್ ಪ್ರಯಾಣ ದರವನ್ನು ಹೆಚ್ಚಿಸುವ ಕುರಿತು ಚಿಂತನೆ ನಡೆಸಿದ್ದು, ಇದಕ್ಕಾಗಿ ಆಯೋಗವನ್ನೂ ಕೂಡ ರಚಿಸಲು ಮುಂದಾಗಿದೆ.

ಅಂದಹಾಗೆ ಮೊದಲಿಂದಲೂ ಡೀಸೇಲ್ ದರ, ಬಸ್ ಬಿಡಿಬಾಗಗಳ ದರ, ನೌಕರರ ವೇತನ ಹೆಚ್ಚಳ ಸಂಸ್ಥೆಗೆ ಆರ್ಥಿಕವಾಗಿ ಹೊಡೆತ ನೀಡುತ್ತಿತ್ತು. ಆದರೀಗ ಸರ್ಕಾರ ಜಾರಿ ತಂದಾರೋ ಶಕ್ತಿ ಯೋಜನೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಂಸ್ಥೆಗೆ ಬರುತ್ತಿದ್ದ ದೊಡ್ಡ ಆದಾಯದ ಮೂಲವೇ ಕಟ್ ಆದಂತಾಗಿದ್ದು ಸಂಸ್ಥೆಯ ನಿರ್ಹಣೆಗೂ ಪರಿ ತಪಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಇದೆಲ್ಲವನ್ನೂ ಸರಿದೂಗಿ ಸುಧಾರಿಸಲು KSRTC ಬಸ್ ಗಳ ಪ್ರಯಾಣ ದರವನ್ನು ವಿದ್ಯುತ್ ದರದಂತೆ ಪ್ರತಿ ವರ್ಷ ಏರಿಕೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.

ಇನ್ನು ಪುರುಷರು ಯಾವುದೇ ಬಸ್ಸಲ್ಲಿ ಪ್ರಯಾಣಿಸಿದರೂ ಕಿಕೆಟ್ ಗೆ ದುಡ್ಡು ಕೊಡಲೇ ಬೇಕು. ಇನ್ನು ಮಹಿಳೆಯರಿಗೆ ಕೆಂಪು ಬಸ್ ಗಳಲ್ಲಿ ಮಾತ್ರ ಪ್ರಯಾಣ ಇರುವುದು. ಇತರ ಬಸ್ಸಲ್ಲಿ ಅವರು ದುಡ್ಡು ಕೊಟ್ಟೇ ಪ್ರಯಾಣ ಬೆಳೆಸಬೇಕು. ಅಲ್ಲದೆ ಕೆಂಪು ಬಸ್ ಆದರೂ ಹೊರ ರಾಜ್ಯದ ಬಸ್ಸಿನಲ್ಲೂ ಅವರು ದುಡ್ಡು ಕೊಟ್ಟೇ ಓಡಾಡಬೇಕು. ಹೀಗಾಗಿ ಬೆಲೆ ಏಕರಿಕೆ ದರದ ಬಿಸಿ ಪರುಷು ಹಾಗೂ ಮಹಿಳೆಯರಿಬ್ಬರಿಗೂ ತಟ್ಟುವುದು ಪಕ್ಕಾ !!

ಇದನ್ನೂ ಓದಿ: Karnataka CM: ಸಿದ್ದರಾಮಯ್ಯರ ಬಳಿಕ ಡಾ. ಪರಮೇಶ್ವರ್ ರಾಜ್ಯದ ಸಿಎಂ ?!

You may also like

Leave a Comment