Home » Deepavali 2023 Guidelines:ದೀಪಾವಳಿಗೆ ಮಾಲಿನ್ಯ ಮಂಡಳಿಯಿಂದ ಬಂತು ಹೊಸ ಗೈಡ್ ಲೈನ್ಸ್ !!

Deepavali 2023 Guidelines:ದೀಪಾವಳಿಗೆ ಮಾಲಿನ್ಯ ಮಂಡಳಿಯಿಂದ ಬಂತು ಹೊಸ ಗೈಡ್ ಲೈನ್ಸ್ !!

2 comments
Deepavali 2023 Guidelines

Deepavali 2023 Guidelines: ರಾಜ್ಯದಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಕಳೆ ಕಟ್ಟುತ್ತಿದೆ. ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗೈಡ್ ಲೈನ್ಸ್(Deepavali 2023 Guidelines) ಬಿಡುಗಡೆ ಮಾಡಿದೆ. ಪಟಾಕಿ ಮಾರಾಟ ಹಾಗೂ ಬಳಕೆ ನಿಯಂತ್ರಿಸುವ ಕುರಿತು ಸುಪ್ರೀಂಕೋರ್ಟ್(Supreme Court)ಆದೇಶವನ್ನು ಜಾರಿಗೊಳಿಸಲು ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ.

ನವೆಂಬರ್ 11ರಿಂದ 15 ರವರೆಗೆ ದೀಪಾವಳಿ ಹಬ್ಬ (Deepavali Festival)ಆಚರಣೆ ನಡೆಯಲಿರುವ ಹಿನ್ನೆಲೆ ಈ ಸಂದರ್ಭದಲ್ಲಿ ಶಬ್ದ ಮಾಲಿನ್ಯ (Noise Pollution)ಹಾಗೂ ವಾಯುಮಾಲಿನ್ಯ(air Pollution)ಉಂಟಾಗುವ ಸಾಧ್ಯತೆಯ ಕಾರಣದಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕೆಲ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ.ಜಿಲ್ಲಾ ಪರಿಸರ ಸಂರಕ್ಷಣಾ ಪ್ರಾಧಿಕಾರಕ್ಕೆ ಶಬ್ದ ಮಾಲಿನ್ಯ ನಿಯಂತ್ರಿಸುವ ಜವಾಬ್ದಾರಿ ನೀಡಲಾಗಿದೆ. ಹೊರರಾಜ್ಯಗಳಿಂದ ಅನಧಿಕೃತವಾಗಿ ನಿಷೇಧಿತ ಪಟಾಕಿ ಸಾಗಾಟ ಮಾಡಿದ್ದಲ್ಲಿ ಅದನ್ನು ಮುಟ್ಟುಗೋಲು ಹಾಕಲು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

* ರಾತ್ರಿ 8ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಹಚ್ಚಲು ಅವಕಾಶ ನೀಡಲಾಗಿದೆ.
* ಉಳಿದ ಸಮಯದಲ್ಲಿ ಪಟಾಕಿ ಬಳಕೆಗೆ ಅವಕಾಶ ನೀಡಿಲ್ಲ.
* ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಪಟಾಕಿಗಳ ಮಾರಾಟ ಹಾಗೂ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
* ಸ್ಥಳೀಯ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಪಟಾಕಿ ಸ್ಪೋಟಿಸಲು ಅವಕಾಶವಿಲ್ಲ.
* ಹಸಿರು ಪಟಾಕಿಗಳ ಶಬ್ದಮಾಲಿನ್ಯವನ್ನು ಮಾಪನ‌ ಮಾಡಬೇಕು. ಒಂದು ವೇಳೆ ಗುಣಮಟ್ಟ ಇಲ್ಲದಿದ್ದರೆ ಪಟಾಕಿ ಮುಟ್ಟುಗೋಲು‌ ಹಾಕಬೇಕು.
* ಹಸಿರು ಪಟಾಕಿಗಳನ್ನು ಬಳಸುವಾಗ ಪ್ರಾಣಿ,ಪಕ್ಷಿ,ಮಕ್ಕಳು ಹಾಗೂ ವೃದ್ದರಿಗೆ ತೊಂದರೆಯಾಗದಂತೆ ಜಾಗ್ರತೆ ವಹಿಸಬೇಕು.
* ನ್ಯಾಯಾಲಯದ ನಿರ್ದೇಶನವನ್ನು ಜನರಿಗೆ ತಲುಪಿಸಲು ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ‌ಹಾಕಿಕೊಳ್ಳಬೇಕು.
* ಎಲ್ಲಾಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೆಟ್‌ ಮೇಲೆ ಹಸಿರು ಪಟಾಕಿಯ ಚಿಹ್ನೆ, ಕ್ಯು ಆರ್‌ ಕೋಡ್‌ ಇರುವುದನ್ನು ಜಿಲ್ಲೆಯ ಪರಿಸರ ಅಧಿಕಾರಿಗಳಿಂದ ಖಚಿತಪಡಿಸಿಕೊಳ್ಳಬೇಕು.
*ಯಾವುದೇ ಹಸಿರು ಪಟಾಕಿಗಳ ಪ್ಯಾಕೆಟ್‌ಗಳನ್ನು ರ್ಯಾಂಡಮ್‌ ಆಗಿ ಸಂಗ್ರಹಿಸಿ, ನಿಗದಿತ ವಿಧಿ ವಿಧಾನಗಳ ಮೂಲಕ ಶಬ್ದ ಮಟ್ಟವನ್ನು ಮಾಪನ ಮಾಡಬೇಕು. ನಿಗದಿತ ಗುಣಮಾಪನಗಳಿಗೆ ಸರಿಹೊಂದಿದ್ದಲ್ಲಿ ಅವುಗಳನ್ನು ಕೂಡಲೇ ಮುಟ್ಟುಗೋಲು ಹಾಕಬೇಕು.

ಇದನ್ನೂ ಓದಿ: Housing Scheme:ಸ್ವಂತ ಮನೆಯ ಕನಸು ಕಂಡವರಿಗೆ ಭರ್ಜರಿ ಸುದ್ದಿ- ದೀಪಾವಳಿಗೆ ಮೋದಿ ಸರ್ಕಾರದಿಂದ ಸಿಗ್ತಿದೆ ಬಿಗ್ ಗಿಫ್ಟ್ !!

You may also like

Leave a Comment