Kasaragod: ಮಕ್ಕಳ ಮೇಲೆ ಪೋಷಕರು ಹೆಚ್ಚು ಕಾಳಜಿ ವಹಿಸಬೇಕು. ಸ್ವಲ್ಪ ಏಮಾರಿದರೂ ಅನಾಹುತ ಸಂಭವಿಸುತ್ತದೆ. ಅದರಲ್ಲೂ ಮಕ್ಕಳು ಆಟವಾಡುವ ಜಾಗದಲ್ಲಿ ವಿಷ ಪದಾರ್ಥಗಳನ್ನು ಇಡುವಂತಹ ಸಾಹಸ ಮಾಡಲೇಬಾರದು.
ಆದರೆ ಇಂತಹ ಒಂದು ಅನಾಹುತ ಕೇರಳದ ಕಾಂಞಂಗಾಡ್ ಕಲ್ಲೂರಾವಿ ಎಂಬಲ್ಲಿ ನಡೆದಿದೆ. ಒಂದೂವರೆ ವರ್ಷದ ಮಗುವೊಂದು ಸೊಳ್ಳೆ ನಿವಾರಕ ದ್ರಾವಣವನ್ನು ಸೇವಿಸಿ ಅಸುನೀಗಿದೆ. ಏನೂ ತಿಳಿಯದ ಕಂದಮ್ಮ ವಿಧಿಯ ಕ್ರೂರ ಲೀಲೆಗೆ ಪ್ರಾಣ ಕಳೆದುಕೊಂಡಿದೆ.
ಇದನ್ನು ಓದಿ: Kantara -2: ಕಾಂತಾರಾ-2ಗೆ ರಶ್ಮಿಕಾ ಮಂದಣ್ಣ ಹಿರೋಯಿನ್ ?!
ರಂಶೀದ್-ಅಫಾ ದಂತಪಿಯ ಮಗುವೆ ಜೆಸಾ (1ವರ್ಷ 5 ತಿಂಗಳು) ಮೃತಪಟ್ಟ ಮಗು. ಸೊಳ್ಳೆ ನಿವಾರಕ ದ್ರಾವಣದ ಬಾಟಲಿಯನ್ನು ಮಗು ಆಕಸ್ಮಿಕವಾಗಿ ಹಿಡಿದುಕೊಂಡು ಬಾಯಿಗೆ ಹಾಕಿದ್ದು, ಈ ಸಂದರ್ಭ ದ್ರಾವಣ ದೇಹದೊಳಗೆ ಹೋಗಿದೆ. ನಂತರ ಉಸಿರಾಟದ ತೊಂದರೆ ಮಗುವಲ್ಲಿ ಕಾಣಿಸಿಕೊಂಡಿದೆ. ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಿಸದರ ಮಗು ಮಂಗಳವಾರ ಮೃತಹೊಂದಿದೆ.
