Kasaragod : ದಿನಂಪ್ರತಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಕುರಿತಂತೆ ಅನೇಕ ಸುದ್ದಿಗಳು ವರದಿಯಾಗುತ್ತಲೇ ಇರುತ್ತವೆ. ಇದೀಗ, ಕೇರಳದ ಕಾಸರಗೋಡು (Kasaragod )ಜಿಲ್ಲೆಯ ನೀಲೇಶ್ವರಂನಲ್ಲಿ ಬೆತ್ತಲೆ ವಿಡಿಯೋ ಕಾಲ್ಗಳನ್ನು (Video Call)ಮಾಡುವಂತೆ ಪತಿ ಒತ್ತಡ ಹೇರಿ ದೈಹಿಕ ಹಿಂಸೆ ನೀಡುತ್ತಿರುವ ಕುರಿತು ಮಹಿಳೆಯೊಬ್ಬಳು(Women raised Complaint)ದೂರು ದಾಖಲಿಸಿರುವ ಘಟನೆ ನಡೆದಿದೆ.
ಸಂತ್ರಸ್ತ ಮಹಿಳೆ 20ರ ಹರೆಯದವರಾಗಿದ್ದು, ಆಕೆಯ ಪತಿ ಬಂಕಲಂ ಮೂಲದವರು ಎನ್ನಲಾಗಿದೆ. ಈ ಜೋಡಿ ಪಾಲಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ. ಮಹಿಳೆ ನೀಡಿದ ದೂರಿನ ಅನುಸಾರ, ಆರೋಪಿ ಪತಿ ಕೆಲವು ವ್ಯಕ್ತಿಗಳಿಂದ ಹಣ( Money)ಪಡೆದಿದ್ದಾನೆ. ಹಣವನ್ನು ಹಿಂತಿರುಗಿಸುವ ಬದಲಿಗೆ ಪತ್ನಿಯನ್ನು(Wife )ನಗ್ನವಾಗಿ ಕಾಣಿಸಿಕೊಳ್ಳಲು ಜೊತೆಗೆ ನಗ್ನವಾಗಿ ವಿಡಿಯೋ ಕರೆ ಮಾಡಲು ಒತ್ತಾಯ ಮಾಡಿದ್ದು,ಮಹಿಳೆಗೆ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ಮಹಿಳೆ ಪೊಲೀಸ್ ಠಾಣೆಯ(Police complaint)ಮೆಟ್ಟಿಲೇರಿದ ಘಟನೆ ನಡೆದಿದೆ. ಮಹಿಳೆ ನೀಡಿದ ದೂರಿನ ಅನ್ವಯ, ನೀಲೇಶ್ವರಂ ಪೊಲೀಸರು ವ್ಯಕ್ತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
