Tiruvananthapura: ಬಿಜೆಪಿ ಕೇರಳದಲ್ಲಿ ಕ್ರಿಶ್ಚಿಯನ್ನರ ವಿಶ್ವಾಸ ಗಳಿಸಲು ಸ್ನೇಹ ಯಾತ್ರೆ ಕಾರ್ಯಕ್ರಮ ಆಯೋಜಿಸಿರುವಂತೆ ಓರ್ವ ಪಾದ್ರಿ ಸೇರಿ 50 ಕ್ರಿಶ್ಚಿಯನ್ ಕುಟುಂಬಗಳು ರವಿವಾರ ಬಿಜೆಪಿಗೆ ಸೇರ್ಪಡೆಗೊಂಡಿರುವುದು ವರದಿಯಾಗಿದೆ.
ಈ ಕುರಿತು ಬಿಜೆಪಿ ಕೇರಳ ಘಟಕವು ತಮ್ಮ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ಕೇಂದ್ರ ಖಾತೆ ಸಹಾಯಕ ಸಚಿವರಾದ ವಿ.ಮುರಳೀಧರನ್ ಅವರ ನೇತೃತ್ವದಲ್ಲಿ ಕೇರಳದ ಪತ್ತನಂತಿಟ್ಟ ಜಿಲ್ಲೆ ನೀಲಕ್ಕಲ್ ಭದ್ರಾಸನಂನ ಅರ್ಥೋಡಾಕ್ಸ್ ಚರ್ಚ್ ಕಾರ್ಯದರ್ಶಿ ಫಾದರ್ ಶೈಜು ಕುರಿಯನ್ ಹಾಗೂ 50 ಕ್ರಿಶ್ಚಿಯನ್ ಕುಟುಂಬಗಳು ಬಿಜೆಪಿ ಸೇರಿಕೊಂಡಿದ್ದಾರೆ ಎಂದು ವರದಿ ಮಾಡಿದೆ.
ಆದರೆ ಈ ಕುರಿತು ಜಾಲತಾಣದಲ್ಲಿ ಕ್ರಿಶ್ಚಿಯನ್ನರಿಗೆ ಕಾಂಗ್ರೆಸ್ ಹಾಗೂ ಸಿಪಿಎಂ ಬೆಂಬಲಿಗರು ಕಾಮೆಂಟ್‌ಗಳಲ್ಲಿ ಬೆದರಿಕೆ ಹಾಕಿರುವ ಕುರಿತು ಬಿಜೆಪಿ ಆರೋಪ ಮಾಡಿದೆ. ಹಾಗೂ ಇದು ಹೀಗೆ ಮುಂದುವರಿಗೆ ತಕ್ಕ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದೆ ಎಂದು ವರದಿಯಾಗಿದೆ.
