Home » Kerala: ಹಸಿವು ತಾಳಲಾರದೆ ಬೆಕ್ಕಿನ ಹಸಿ ಮಾಂಸ ತಿಂದ ಯುವಕ; ವೀಡಿಯೋ ವೈರಲ್‌

Kerala: ಹಸಿವು ತಾಳಲಾರದೆ ಬೆಕ್ಕಿನ ಹಸಿ ಮಾಂಸ ತಿಂದ ಯುವಕ; ವೀಡಿಯೋ ವೈರಲ್‌

4 comments
Kerala

ತಿರುವನಂತಪುರ: ಹೊಟ್ಟೆ ಹಸಿವನ್ನು ತಾಳಲಾರದೆ ಯುವಕನೊಬ್ಬ ಬೆಕ್ಕಿನ ಹಸಿ ಮಾಂಸವನ್ನು ಸೇವಿಸಿರುವ ಘಟನೆ ಕೇರಳ ಜಿಲ್ಲೆಯ ಕುಟ್ಟಿಪುರಂನಲ್ಲಿ ಸಂಭವಿಸಿದೆ.

ಇದನ್ನೂ ಓದಿ: H C Balakrishna: ರಾಜ್ಯದ ಬಿಜೆಪಿ MP ಗಳು ಗಂಡಸರಲ್ಲ – ಕಾಂಗ್ರೆಸ್ ಶಾಸಕ ಎಚ್. ಸಿ ಬಾಲಕೃಷ್ಣ ಹೇಳಿಕೆ!!

ಬೆಕ್ಕಿನ ಹಸಿ ಮಾಂಸವನ್ನು ಸೇವಿಸಿದ ವ್ಯಕ್ತಿ ಅಸ್ಸಾಂನ ದುಬ್ರಿ ಜಿಲ್ಲೆಯ ನಿವಾಸಿಯಾಗಿದ್ದಾರೆ. ಜನನಿಬಿಡ ಸ್ಥಳವಾದ ಕುಟ್ಟಿಪುರಂನ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ.

ಯುವಕನು ಸುಮಾರು 5 ದಿನಗಳಿಂದ ಆಹಾರವಿಲ್ಲದೆ, ಗಂಗೆಟ್ಟಿದ್ದ. ಆದರೆ ಇವತ್ತು ಹಸಿ ಮಾಂಸವನ್ನು ಸೇವಿಸಿದ್ದಾನೆ . ಇದನ್ನು ನೋಡಿದ ಸ್ಥಳೀಯರು, ಪೋಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರ ವಿಚಾರಣೆಯ ಬಳಿಕ ಹೇಳಿಕೆ ನೀಡಿದ ಯುವಕರ ನಾನೂ ಅಸ್ಸಾಂನ ಕಾಲೇಜು ವಿದ್ಯಾರ್ಥಿ. ತಂದೆ ತಾಯಿ ಗೆ ಹೇಳದೆ ಕೇರಳಕ್ಕೆ ರೈಲು ಅತ್ತಿ ಬಂದೆ. 5 ದಿನದಿಂದ ಏನನ್ನೂ ತಿಂದಿಲ್ಲ ಎಂದು ಹೇಳಿದ್ದಾನೆ.

ಆತ ಚೆನೈ ನಲ್ಲಿರುವ ಅವನ ಗೆಳೆಯನ ನಂಬರ್ ನೀಡಿದ್ದು. ಪೊಲೀಸರು ಸಂಪರ್ಕಿಸಿದಾಗ ಇದು ಸತ್ಯ ಎಂದು ಸಾಬೀತಾಗಿದೆ. ಆತನಿಗೆ ಯಾವುದೇ ಮಾನಸಿಕ ಸಮಸ್ಯೆ ಇಲ್ಲ. ಆತನ ಕುಟುಂಬದವರು ಬಂದಾಗ ಅವನನ್ನು ಕಳುಹಿಸಿ ಕೊಡುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

You may also like

Leave a Comment