Home » ಸಿನಿಮಾ ನಟನ ಲೈಂಗಿಕ ದೌರ್ಜನ್ಯ ಪ್ರಕರಣ, ನಿರೀಕ್ಷಣಾ ಜಾಮೀನು ರದ್ದುಮಾಡಲು ಸುಪ್ರೀಂ ನಕಾರ

ಸಿನಿಮಾ ನಟನ ಲೈಂಗಿಕ ದೌರ್ಜನ್ಯ ಪ್ರಕರಣ, ನಿರೀಕ್ಷಣಾ ಜಾಮೀನು ರದ್ದುಮಾಡಲು ಸುಪ್ರೀಂ ನಕಾರ

0 comments

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳಂ ನಟ ಹಾಗೂ ನಿರ್ಮಾಪಕ ವಿಜಯ್ ಬಾಬು ಅವರಿಗೆ ಕೇರಳ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.

ನ್ಯಾಯಾಲಯವು ಕೇರಳ ಹೈಕೋರ್ಟ್ ಆದೇಶದ ವಿಚಾರಣೆಯ ಭಾಗವನ್ನು ಮಾರ್ಪಡಿಸಿತು. ಅಗತ್ಯವಿದ್ದರೆ ಜುಲೈ 3, 2022 ರ ನಂತರ ನಟನನ್ನು ವಿಚಾರಣೆಗೆ ಒಳಪಡಿಸಬಹುದು ಎಂದು ಹೇಳಿದೆ. ಜೂನ್ 27 ರಂದು ಎರ್ನಾಕುಲಂ ಸೌತ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದಾಗ ವಿಜಯ್ ಬಾಬು ಅವರನ್ನು ಬಂಧಿಸಲಾಗಿತ್ತು. ಜೂನ್ 22 ರಂದು ವಿಜಯ್ ಬಾಬು ಅವರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು.

ನಟಿಯೋರ್ವರು ಚಲನಚಿತ್ರ ಪಾತ್ರಗಳಿಗಾಗಿ ತನ್ನನ್ನು ಲೈಂಗಿಕವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ವಿಜಯ್ ಬಾಬು ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿದ್ದರು.

You may also like

Leave a Comment