Home » Self Harming: ಕೊಡಗಿನ ರೆಸಾರ್ಟ್ ನಲ್ಲಿ ಮನ ಮಿಡಿಯುವ ಘಟನೆ !! ಮಗುವನ್ನು ಕೊಂದು ಅಪ್ಪ-ಅಮ್ಮ ಆತ್ಮಹತ್ಯೆ

Self Harming: ಕೊಡಗಿನ ರೆಸಾರ್ಟ್ ನಲ್ಲಿ ಮನ ಮಿಡಿಯುವ ಘಟನೆ !! ಮಗುವನ್ನು ಕೊಂದು ಅಪ್ಪ-ಅಮ್ಮ ಆತ್ಮಹತ್ಯೆ

0 comments
Self Harming

Self Harming : ಕೊಡಗು ಜಿಲ್ಲೆ ಮಡಿಕೇರಿ ಸಮೀಪದ ಖಾಸಗಿ ರೆಸಾರ್ಟ್‌ನಲ್ಲಿ (Madikeri Resort) ಕೇರಳದ ಕೊಲ್ಲಂನಿಂದ ಮಡಿಕೇರಿಗೆ ಆಗಮಿಸಿದ್ದ ಕುಟುಂಬವೊಂದು ಮಗುವನ್ನು ಕೊಂದು ಗಂಡ, ಹೆಂಡತಿ ಸಾಮೂಹಿಕವಾಗಿ ಆತ್ಮಹತ್ಯೆಗೆ (Self Harming) ಶರಣಾದ ದಾರುಣ ಘಟನೆ ವರದಿಯಾಗಿದೆ.

ಕೇರಳ ಮೂಲದ ದಂಪತಿಗಳು ಶುಕ್ರವಾರ ರೆಸಾರ್ಟ್‌ಗೆ ಬಂದಿದ್ದರೆನ್ನಲಾಗಿದೆ. ಶನಿವಾರ ಬೆಳಗ್ಗೆ ಚೆಕ್‌ಔಟ್‌ ಮಾಡುವುದಾಗಿ ಸಿಬ್ಬಂದಿಗೆ ಹೇಳಿದ್ದರಂತೆ. ಆದರೆ, ಶನಿವಾರ ಬೆಳಗ್ಗೆಯಾದರೂ ಕೂಡ ಚೆಕ್‌ಔಟ್‌ ಮಾಡಲು ಬಾರದೇ ಇದ್ದಾಗ ರೆಸಾರ್ಟ್‌ ಸಿಬ್ಬಂದಿ ರೂಂಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಕರೆ ಸ್ವೀಕರಿಸದ ಹಿನ್ನೆಲೆ ರೆಸಾರ್ಟ್ ಸಿಬ್ಬಂದಿ ಕೊಠಡಿಯತ್ತ ಬಂದಿದ್ದು, ಆಗ ನೇಣುಬಿಗಿದ(Suicide Case)ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿದೆ ಎನ್ನಲಾಗಿದೆ. ಈ ಕುರಿತಂತೆ ಕೂಡಲೇ ಮಡಿಕೇರಿ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿದೆ. ಮಗುವನ್ನು ಉಸಿರು ಕಟ್ಟಿಸಿ ಕೊಂದು ಪೋಷಕರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಇದನ್ನು ಓದಿ: Crime: ದೇವರ ಕೋಣೆ ಎದುರು ಕಳ್ಳ ಮಾಡಿಕೊಂಡ ವಿಚಿತ್ರ ಎಡ್ವಟ್- ಮಾಲೀಕನ ಕೈಗೆ ತಗಲಾಕ್ಕೊಂಡ್ಬಿಟ್ಟ

ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿನೋದ್‌ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದ್ದು, ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಮೃತರ ಕುಟುಂಬದವರಿಗೆ ಈಗಾಗಲೇ ಮಾಹಿತಿಯನ್ನು ನೀಡಲಾಗಿದ್ದು, ಅವರು ಬಂದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಒಳಗೊಂಡಂತೆ ಮುಂದಿನ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

You may also like

Leave a Comment