Kodi Mutt Seer: ಲೋಕಸಭಾ ಚುನಾವಣೆಯ(Election)ಕಾವು ಗರಿಗೆದರುವ ಮೊದಲೇ ಕೋಡಿ ಮಠದ ಶಿವಾನಂದ ಶಿವಯೋಗಿ ಸ್ವಾಮೀಜಿಗಳು(Kodi Mutt Swamiji)ರಾಜಕೀಯದ ಕುರಿತಂತೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಈ ಹಿಂದೆ ಬಾಗಲಕೋಟೆಯಲ್ಲಿ ರಾಜಕೀಯ(Politics)ಅಸ್ಥಿರತೆ ಇರುವ ಬಗ್ಗೆ ಮಾತನಾಡಿದ್ದು, ಚುನಾವಣೆವರೆಗೂ ಏನನ್ನು ಹೇಳಲು ಸಾಧ್ಯವಾಗದು. ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದರು. ಇದೀಗ, ರಾಜಕೀಯ ಹಣಾಹಣಿಯ ಬಗ್ಗೆ ಜನರಿಗಿದ್ದ ಕೌತುಕಕ್ಕೆ ತೆರೆ ಎಳೆಯಲು ಮುಂದಾಗಿರುವ ಶ್ರೀಗಳು ರೋಚಕ ಮಾಹಿತಿಯನ್ನು ನೀಡಿದ್ದಾರೆ. ಕೋಡಿಮಠ ಶ್ರೀ(Kodi Mutt seer)ಭವಿಷ್ಯ ನುಡಿದಂತೆ ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದನ್ನು ಭವಿಷ್ಯ ನುಡಿದಿದ್ದರು. ಇದೀಗ ಲೋಕಸಭಾ ಚುನಾವಣೆಯ ಬಗ್ಗೆ ಕೂಡ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಇನ್ನೂ ರಾಜ್ಯ ಸರ್ಕಾರದ ಕುರಿತಂತೆ ಶ್ರೀಗಳು ಮಾಹಿತಿ ನೀಡಿದ್ದು, ‘ಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗುತ್ತಿದೆ. ಆದರೆ, ಏನೂ ಆಗೋದಿಲ್ಲ. ನೋಡೋರಿಲ್ಲ, ಕೇಳೋರಿಲ್ಲ. ಆನಂದ ಪಡುವವರಿಲ್ಲ. ಜೊತೆಗೆ ರಾಜ್ಯ ಸರ್ಕಾರಕ್ಕೆ ಏನೂ ತೊಂದರೆ ಕೂಡ ಆಗುವುದಿಲ್ಲ. ಇದನ್ನು ಹೊರತು ಪಡಿಸಿ ನಾನು ಏನೂ ಹೇಳಲ್ಲ ‘ಎಂದು ಕೂಡ ಶ್ರೀಗಳು ಇದೆ ವೇಳೆ ಮುಂದಾಗುವ ಭವಿಷ್ಯವಾಣಿ ನುಡಿದಿದ್ದಾರೆ.
ಕೋಡಿಮಠ ಶ್ರೀಗಳು ಇತ್ತೀಚೆಗಷ್ಟೆ ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಯುಗಾದಿಯಷ್ಟರಲ್ಲಿ ಅಸ್ಥಿರತೆ ಕಾಡುವ ಕುರಿತು ಸ್ಪೋಟಕ ಭವಿಷ್ಯವನ್ನು ನುಡಿದಿದ್ದರು. ದಾವಣಗೆರೆಯ ಹೊನ್ನಾಳಿಯಲ್ಲಿ ಚುನಾವಣೆಯ ಬಗ್ಗೆ ಮಾತನಾಡಿರುವ ಹಾಸನದ ಅರಸೀಕೆರೆಯ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಈಗ ಲೋಕಸಭಾ ಚುನಾವಣೆಯಲ್ಲಿ ಪಕ್ಷಾಂತರ ಹೆಚ್ಚಾದರೂ ಕೂಡ ಒಂದೇ ಪಕ್ಷ ದೇಶದಲ್ಲಿ ಅಧಿಕಾರಕ್ಕೆ ಬರಲಿದೆ ಎಂಬ ರೋಚಕ ಮಾಹಿತಿಯನ್ನು ಶ್ರೀಗಳು ಬಿಚ್ಚಿಟ್ಟಿದ್ದಾರೆ. ಕರ್ನಾಟಕದಲ್ಲಿ ಅಮಾವಾಸ್ಯೆಯ ಬಳಿಕ ಭಾರೀ ಮಳೆಯಾಗಲಿದ್ದು, ಪ್ರಕೃತಿ ವಿಕೋಪದ ಪರಿಣಾಮ ದೊಡ್ಡ ಸಮಸ್ಯೆ ಎದುರಾಗುವ ಕುರಿತು ಕೂಡ ಕೋಡಿಮಠ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
