Home » ಅಂತ್ಯಕ್ರಿಯೆಗೆ ತೆರಳುತ್ತಿದ್ದವರನ್ನೆ ಅಂತ್ಯ ಮಾಡಿದ ಜವರಾಯ | 15 ಮಂದಿಯ ಕರುಣಾಜನಕ ದುರ್ಮರಣ

ಅಂತ್ಯಕ್ರಿಯೆಗೆ ತೆರಳುತ್ತಿದ್ದವರನ್ನೆ ಅಂತ್ಯ ಮಾಡಿದ ಜವರಾಯ | 15 ಮಂದಿಯ ಕರುಣಾಜನಕ ದುರ್ಮರಣ

0 comments

ಕೋಲ್ಕತಾ: ಮುಂಜಾನೆಯ ಜಾವ ಜವರಾಯ ಮರಣ ಮೃದಂಗ ಭಾರಿಸಿದ್ದಾನೆ. ಒಂದೇ ಘಟನೆಯಲ್ಲಿ ಒಟ್ಟು 15 ಜೀವಗಳು ಬಲಿಯಾಗಿವೆ.

ಕುಟುಂಬದ ವ್ಯಕ್ತಿಯೊಬ್ಬರು ತೀರಿಕೊಂಡ ಕಾರಣ ಕುಟುಂಬಸ್ಥರ ಎಲ್ಲಾ ಸೇರಿ ಅಂತ್ಯಕ್ರಿಯೆ ಯೊಂದಕ್ಕೆ ಹೋಗುತ್ತಿದ್ದರು. ಆಗ ನಿಂತಿದ್ದ ಟ್ರಕ್‌ಗೆ ಇನ್ನೊಂದು ಮಿನಿ ಟ್ರಕ್ ಡಿಕ್ಕಿ ಹೊಡೆದು 15 ಮಂದಿ ದಾರುಣವಾಗಿ ಸಾವನ್ನಪ್ಪಿದ ಭೀಕರ ಅವಘಡ ಭಾನುವಾರ ಬೆಳಗ್ಗೆ ನಡೆದಿದೆ.

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ 35ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ಮಿನಿ ಟ್ರಕ್ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಹಂಸಖಾಲಿ ಎಂಬಲ್ಲಿ ಹೆದ್ದಾರಿಯ ಬದಿಯಲ್ಲಿ ನಿಂತಿದ್ದ ಮತ್ತೊಂದು ಕಲ್ಲು ತುಂಬಿದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಆಗ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತರಲ್ಲಿ ಮಹಿಳೆಯರು ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ ಎಂದು ತಿಳಿದು ಬಂದಿದೆ.

You may also like

Leave a Comment