Home » ಕುಕ್ಕೇ ಸುಬ್ರಹ್ಮಣ್ಯ: ನಾಲ್ಕು ದಿನಗಳ ಹಿಂದೆ ಕುಮಾರಧಾರೆಯಲ್ಲಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಪತ್ತೆ!!

ಕುಕ್ಕೇ ಸುಬ್ರಹ್ಮಣ್ಯ: ನಾಲ್ಕು ದಿನಗಳ ಹಿಂದೆ ಕುಮಾರಧಾರೆಯಲ್ಲಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಪತ್ತೆ!!

0 comments

ಸುಬ್ರಹ್ಮಣ್ಯ: ಆ. 21 ರಂದು ಕುಕ್ಕೆ ಕ್ಷೇತ್ರಕ್ಕೆ ಬಂದ ಪ್ರವಾಸಿಗನೊಬ್ಬ ಕುಮಾರಧಾರ ನದಿಯಲ್ಲಿ ಸ್ನಾನ ಮಾಡಲು ಇಳಿದು ನಾಪತ್ತೆಯಾದ ಘಟನೆ ದುರಂತ ಅಂತ್ಯ ಕಂಡಿದ್ದು ಇಂದು ಯುವಕನ ಶವ ಪತ್ತೆಯಾಗಿದೆ.

ನೀರಿನಲ್ಲಿ ಕೊಚ್ಚಿ ಹೋದ ಯುವಕನನ್ನು ಮೂಲತಃ ಮಂಡ್ಯದ ಯುವಕ ಶಿವು(25) ಎನ್ನಲಾಗಿದೆ . ಈತ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಬೆಂಗಳೂರು ದೀಪಾಂಜಲಿ ನಗರದಲ್ಲಿ ವಾಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

21 ಜನರ ತಂಡ ವಿವಿಧ ಕ್ಷೇತ್ರಗಳ ಭೇಟಿಗೆ ಬಂದಿದ್ದು ಕುಕ್ಕೆಗೂ ಆಗಮಿಸಿ ಕುಮಾರಧಾರ ಸ್ನಾನಘಟ್ಟಕ್ಕೂ ಬಂದಿದ್ದರು. ಈ ವೇಳೆ ನದಿಗೆ ಇಳಿಯದಂತೆ ಸ್ನೇಹಿತರೂ ಸೂಚಿಸಿದರೂ ತಡೆಹಗ್ಗ ದಾಟಿ ನದಿ ನೀರಿಗೆ ಇಳಿದಿದ್ದಾನೆ ಎಂದು ಆತನ ಸ್ನೇಹಿತರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದು ರಕ್ಷಣಾ ತಂಡ ಹಗಲು ಇರುಳೆನ್ನದೆ ಕಾರ್ಯಚರಣೆ ನಡೆಸಿತ್ತು. ಆದರೆ ನಿರಂತರ ಮಳೆಯಿಂದ ಕಾರ್ಯಚರಣೆ ವಿಳಂಬವಾಗಿತ್ತು.

You may also like

Leave a Comment