Home » ಲಾರಿ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ವ್ಯಕ್ತಿ ಸಾವು | ‘ಅಪ್ಪ’ನ ಅರಸುತ್ತಾ ಹೋದ ಮಗ ಹೆಣವಾಗಿ ಮರಳಿ ಮನೆಗೆ!!

ಲಾರಿ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ವ್ಯಕ್ತಿ ಸಾವು | ‘ಅಪ್ಪ’ನ ಅರಸುತ್ತಾ ಹೋದ ಮಗ ಹೆಣವಾಗಿ ಮರಳಿ ಮನೆಗೆ!!

0 comments

ಬಳ್ಳಾರಿ:ವಿಧಿಯ ಆಟ ಏನಿತ್ತೋ ಏನು!? ಇತ್ತ ಮಗ ತಂದೆ ಮನೆಗೆ ಬಂದಿಲ್ಲ ಕಾಣೆಯಾಗಿದ್ದಾರೆ ಎಂದು ಅಪ್ಪನ ಸುಳಿವಿಗಾಗಿ ಹುಡುಕುತ್ತಾ ಹೊರಟಾಗ ಭೀಕರ ಅಪಘಾತಕ್ಕೆ ತುತ್ತಾಗಿ ಮಗನೇ ಹೆಣವಾಗಿ ಮರಳುವಂತಾಗಿದೆ.

ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದ ಬಳಿ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ,ಬಳ್ಳಾರಿಯ 35ನೇ ವಾರ್ಡ್ ನಿವಾಸಿ ತಿಪ್ಪೇಸ್ವಾಮಿ ( 40) ಮೃತ ಪಟ್ಟವರಾಗಿದ್ದಾರೆ.

ತಂದೆಯನ್ನು ಹುಡುಕುವ ಸಲುವಾಗಿ ಮಗ ಮತ್ತು ಪತ್ನಿ ಹೊರಟಿದ್ದ ವೇಳೆ,ಲಾರಿ ಹಾಗೂ ಬೈಕ್‌ ನಡುವೆ ಅಪಘಾತ ಸಂಭವಿಸಿದೆ.ಗಂಡ ಚಕ್ರದಡಿಗೆ ಸಿಲುಕಿ ಮೃತಪಟ್ಟರೆ, ಬೈಕ್‌ನಲ್ಲಿ ಹಿಂದೆ ಕುಳಿತಿದ್ದ ಪತ್ನಿ ಚಂದ್ರೇಶ್ವರಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಮೃತರ ತಂದೆ ದೊರೆಸ್ವಾಮಿ ಏಕಾಏಕಿ ಮನೆಯಿಂದ ಕಾಣೆಯಾಗಿದ್ದರಿಂದ ವಿಚಲಿತಗೊಂಡಿದ್ದ ಪುತ್ರ, ತಂದೆಯನ್ನು ಹುಡುಕಲೆಂದು ಪತ್ನಿಯೊಂದಿಗೆ ಕೊಳಗಲ್ ಗ್ರಾಮಕ್ಕೆ ತೆರಳಿದ್ದ. ಕಾಣೆಯಾದವರು ಎಲ್ಲಿದ್ದಾರೆ ಎಂಬ ಜಾಡನ್ನು ಹೇಳುವ ಸ್ವಾಮೀಜಿಯೊಬ್ಬರನ್ನು ಭೇಟಿಯಾಗಿ ಮರಳಿ ಬಳ್ಳಾರಿಗೆ ಬರುವಾಗ ಅಪಘಾತ ಸಂಭವಿಸಿದೆ.

ಜೊತೆಗಿದ್ದ ಪತ್ನಿ ಪಾರಾದರೂ ಪತ್ನಿ ಆಕೆಯ ಬಾಳೀಗ ಗೋಳು ಎಂಬಂತಾಗಿದೆ.ಇವರಿಗೆ ಇಬ್ಬರು ಗಂಡು ಮತ್ತು ಒಂದು ಹೆಣ್ಣು ಮಗಳಿದ್ದಾರೆ.ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment