Gundlupete: ಗುಂಡ್ಲುಪೇಟೆ( Gundlupete) ತಾಲೂಕು ಬೇಗೂರು ಬಳಿ ಶನಿವಾರ ರಾತ್ರಿ ವೇಳೆಗೆ ಹಿರೀಕಾಟ ಗೇಟ್ ಸಮೀಪ ಕಾರು ಮತ್ತು ಗೂಡ್ಸ್ ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಈ ದುರಂತದಲ್ಲಿ ಕಾರು ಚಾಲಕ ಸಜೀವ ದಹನಗೊಂಡ ಘಟನೆ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಶನಿವಾರ ರಾತ್ರಿ 10:45ರ ಸುಮಾರಿಗೆ ಈ ದುರಂತ ನಡೆದಿದ್ದು, ಈ ವೇಳೆ ಕಾರು ಚಾಲಕ ಸಜೀವ ದಹನಗೊಂಡಿದ್ದು, ಮೃತರನ್ನು ಮೈಸೂರಿನ ಮುಝಮ್ಮಿಲ್ ಅಹ್ಮದ್(35) ಎಂದು ಗುರುತಿಸಲಾಗಿದೆ. ಲಾರಿ ವಾಹನ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

ಕಾರು ಮೈಸೂರಿನಿಂದ ಗುಂಡ್ಲುಪೇಟೆಯತ್ತ ಪಯಣ ಬೆಳೆಸಿತ್ತು ಎನ್ನಲಾಗಿದೆ. ಗೂಡ್ಸ್ ಲಾರಿ ಮೈಸೂರು ಕಡೆಗೆ ಸಾಗುತ್ತಿತ್ತು. ಎರಡು ವಾಹನಗಳು ಮುಖಾಮುಖಿ ಢಿಕ್ಕಿಯಾದ ಹಿನ್ನೆಲೆ ಈ ಸಂದರ್ಭ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹತ್ತಿಕೊಳ್ಳಲು ಆರಂಭಿಸುತ್ತಿದ್ದಂತೆ ಗೂಡ್ ವಾಹನದಲ್ಲಿದ್ದ ಪ್ರಯಾಣಿಕರು ಜೀವ ರಕ್ಷಣೆಗೆ ಹೊರಗೆ ಹಾರಿದ್ದು, ಸದ್ಯ ಅಪಾಯದಿಂದ ಪಾರಾಗಿದ್ದಾರೆ. ಆದರೆ ಈ ನಡುವೆ ಕಾರು ಚಾಲಕ ಮಾತ್ರ ಹೊರಬರಲಾಗದೆ ಸಜೀವ ದಹನವಾಗಿದ್ದಾರೆ.
ಈ ಘಟನೆಯ ತೀವ್ರತೆಗೆ ಎರಡೂ ವಾಹನಗಳು ಸಂಪೂರ್ಣವಾಗಿ ಹೊತ್ತಿ ಉರಿದಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ದಳದ ತಕ್ಷಣ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಈ ಘಟನೆಯ ಕುರಿತಂತೆ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ವಿದ್ವಂಸಕ ಕೃತ್ಯಕ್ಕೆ ರೋಬೋಟ್ ಬಳಕೆ: ಕರಾಳ ಸತ್ಯ ಹೊರಕ್ಕೆ !
