Home » Belgavi: ಜೈನ ಮುನಿ ಕೊಲೆ ಬೆನ್ನಲ್ಲೇ ಬೆಳಗಾವಿಯಲ್ಲಿ ಮತ್ತೊಂದು ‘ಡಬಲ್ ಮರ್ಡರ್’!! ದಂಪತಿಗಳನ್ನು ಕೊಚ್ಚಿ ಬರ್ಬರವಾಗಿ ಕೊಂದ ಪಾಪಿಗಳು !!

Belgavi: ಜೈನ ಮುನಿ ಕೊಲೆ ಬೆನ್ನಲ್ಲೇ ಬೆಳಗಾವಿಯಲ್ಲಿ ಮತ್ತೊಂದು ‘ಡಬಲ್ ಮರ್ಡರ್’!! ದಂಪತಿಗಳನ್ನು ಕೊಚ್ಚಿ ಬರ್ಬರವಾಗಿ ಕೊಂದ ಪಾಪಿಗಳು !!

by ಹೊಸಕನ್ನಡ
0 comments
Belagavi

Belagavi: ಇಡೀ ದೇಶವೇ ಕಂಬನಿ ಮಿಡಿದ ಬೆಳಗಾವಿ(Belagavi) ಜೈನಮುನಿ ಕಾಮಕುಮಾರ ಸ್ವಾಮೀಜಿ(Kamakumara swamy) ಯವರ ಕೊಲೆಯ ಪ್ರಕರಣ ನಡೆದು ಇನ್ನೂ ನಾಲ್ಕು ದಿನಗಳೂ ಕಳೆದಿಲ್ಲ. ಈ ಬೆನ್ನಲ್ಲೇ, ದುಷ್ಕರ್ಮಿಗಳು ಸ್ವಂತ ಮನೆಗೆ ಹೊಕ್ಕು ಮಾರಕಾಸ್ತ್ರಗಳಿಂದ ಕೊಚ್ಚಿ ದಂಪತಿಯನ್ನು ಕೊಲೆ ಮಾಡಿ ಹೇಯ ಕೃತ್ಯ ಎಸಗಿದ್ದಾರೆ.

ಹೌದು, ಜೈನ ಮುನಿಯ ಸಾವಿನ ದುಃಖವನ್ನು ಮರೆಯುವ ಮುನ್ನವೇ ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಡಬಲ್ ಮರ್ಡರ್(Dubl murdere) ಪ್ರಕರಣ ಬೆಳಕಿಗೆ ಬಂದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ದಂಪತಿಯ ಬರ್ಬರ ಹತ್ಯೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಾವನೂರ ಗ್ರಾಮದಲ್ಲಿ ದಂಪತಿ ಭೀಕರ ಹತ್ಯೆ ನಡೆದಿದೆ. ಮೃತರನ್ನು ಗಜೇಂದ್ರ ವಣ್ಣೂರೆ (60) ಹಾಗೂ ದ್ರಾಕ್ಷಾಯಿಣಿ ವಣ್ಣೂರು (48) ಎಂದು ಗುರುತಿಸಲಾಗಿದೆ.

ಅಂದಹಾಗೆ ಜುಲೈ 7 ರ ಮಧ್ಯರಾತ್ರಿ ದುಷ್ಕರ್ಮಿಗಳು ಕೊಲೆ ಮಾಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಿನ್ನೆಯಿಂದ ಮನೆಯ ಬಾಗಿಲು ತೆರೆಯದ ಹಿನ್ನೆಲೆ ಸ್ಥಳೀಯರು ಇಂದು ಅನುಮಾನಗೊಂಡು ಪೊಲೀಸರಿಗೆ(Police) ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಓಪನ್ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಯಮಕನಮರಡಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: Anna bhagya: ಇಂದಿನಿಂದ ‘ಅನ್ನಭಾಗ್ಯ’ ಜಾರಿ – ನಿಮಗೂ ಅಕ್ಕಿ ಹಣ ಸಿಗುತ್ತಾ? ಕೂಡಲೇ ಚೆಕ್ ಮಾಡಿಕೊಳ್ಳಿ !!

You may also like

Leave a Comment