Home » Free current Scheme: ‘ಫ್ರೀ ಕರೆಂಟ್’ ಪಡೆಯುವವರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್.. ! ಮತ್ತೊಂದು ಭರ್ಜರಿ ಸಿಹಿ ಸುದ್ದಿ ಕೊಟ್ಟ ಸಚಿವ ಜಾರ್ಜ್ !!

Free current Scheme: ‘ಫ್ರೀ ಕರೆಂಟ್’ ಪಡೆಯುವವರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್.. ! ಮತ್ತೊಂದು ಭರ್ಜರಿ ಸಿಹಿ ಸುದ್ದಿ ಕೊಟ್ಟ ಸಚಿವ ಜಾರ್ಜ್ !!

by ಹೊಸಕನ್ನಡ
0 comments
Free current scheme benefit

Free current scheme benefit: ರಾಜ್ಯದಲ್ಲೀಗ ಉಚಿತ ಯೋಜನೆಗಳ(Free Schemes)ಪರ್ವ. ಸರ್ಕಾರ ನುಡಿದಂತೆ ನಡೆಯಲು ಎಲ್ಲಾ ಯೋಜನೆಗಳ ಜಾರಿಗೆ ಮುಂದಾಗಿದೆ. ಈಗಾಗಲೇ ಗೃಹಜ್ಯೋತಿ ಯೋಜನೆ ಜಾರಿಯಾಗಿದ್ದು, ಜುಲೈ ಒಂದರಿಂದ ಜನರಿಗೆ ಉಚಿತವಾಗಿ ವಿದ್ಯುತ್ ವಿದ್ಯುತ್ ದೊರೆಯುತ್ತದೆ. ಆದರೀಗ ಈ ಬೆನ್ನಲ್ಲೇ ಸರ್ಕಾರವು(Government) ರಾಜ್ಯದ ಜನರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ.

ರಾಜ್ಯಾದ್ಯಂತ ಗೃಹಜ್ಯೋತಿ(Gruha jyothi) ಜಾರಿಯಾಗಿದ್ದು ಜನ ಸಂತೋಷದಲ್ಲಿದ್ದಾರೆ. ಭರದಿಂದ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಈ ನಡುವೆ ‘ಒಂದು ವೇಳೆ ಹಳೆಯ ವಿದ್ಯುತ್ ಬಿಲ್(Bill) ಪಾವತಿಸದಿದ್ದರೂ ಗೃಹಜ್ಯೋತಿ ಯೋಜನೆಯ ಪ್ರಯೋಜನ (Free current scheme benefit) ಪಡೆಯಬಹುದೇ?’ ಎಂಬುದು ಬಹಳಷ್ಟು ಮಂದಿಯನ್ನು ಕಾಡುತ್ತಿರುವ ಅನುಮಾನ. ಆದರೀಗ ಸರ್ಕಾರ ಈ ಗೊಂದಲಕ್ಕೆ ತೆರೆ ಎಳೆದಿದ್ದು ನಾಡಿನ ಜನತೆಗೆ ಸಿಹಿ ಸುದ್ಧಿ ನೀಡಿದೆ.

ಹೌದು, ಒಂದು ವೇಳೆ ಹಿಂದಿನ ವಿದ್ಯುತ್ ಬಿಲ್(Current bill) ಪಾವತಿಸಲು ಬಾಕಿ ಉಳಿದಿದ್ದರೂ ಕೂಡ ನೀವೇನು ಚಿಂತೆಮಾಡಬೇಕಿಲ್ಲ. ಯಾಕೆಂದರೆ ನೀವು ಹಳೇ ಬಾಕಿ ಉಳಿಸಿಕೊಂಡಿದ್ದರೂ ಕೂಡ ಈ ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆಯಬಹುದು. ನಿಮಗೂ ಫ್ರೀ ಕರೆಂಟ್ ಸಿಗುತ್ತದೆ. ಆದರೆ ಎಲ್ಲಾ ಬಾಕಿಗಳನ್ನೂ ಸೆಪ್ಟೆಂಬರ್(September) 30ರೊಲಗೆ ಚುಕ್ತಾಗೊಳಿಸಬೇಕು. ಅದಕ್ಕಾಗಿ ಇನ್ನೂ 3 ತಿಂಗಳು ಕಾಲಾವಕಾಶ ನೀಡಲಾಗಿದೆ.

ಅಲ್ಲದೆ ಗೃಹಜ್ಯೋತಿಗೆ ಅರ್ಜಿ ಹಾಕಲು ಯಾವುದೇ ರೀತಿಯ ಗಡುವು ನೀಡಿಲ್ಲ. ಅಂದರೆ ಕೊನೆಯ ದಿನಾಂಕವನ್ನು ನಿಗದಿ ಮಾಡಿಲ್ಲ. ಅದರೆ ನೀವು ಜುಲೈ 25 ರೊಳಗೆ ಯೋಜನೆಗೆ ನೋಂದಾಯಿಸಿಕೊಂಡಲ್ಲಿ ಆಗಸ್ಟ್(August) ತಿಂಗಳ ಬಿಲ್‌ನಲ್ಲಿ ಯೋಜನೆಯ ಪ್ರಯೋಜನ ದೊರಕಲಿದೆ. ಹಾಗೆಯೇ ಜುಲೈ 25 ರಿಂದ ಆಗಸ್ಟ್ 25 ರೊಳಗೆ ನೋಂದಾಯಿಸಿಕೊಂಡಲ್ಲಿ ಸೆಪ್ಟೆಂಬರ್ ತಿಂಗಳ ಬಿಲ್‌ನಲ್ಲಿ ಯೋಜನೆಯ ಪ್ರಯೋಜನ ದೊರೆಯಲಿದೆ.

ಪ್ರಕಟಣೆಯಲ್ಲಿ ಏನಿದೆ?
• ಗ್ರಾಹಕರು ವಿದ್ಯುತ್ ಬಿಲನ ಹಿಂಬಾಕಿ ಉಳಿಸಿಕೊಂಡಿದ್ದರೂ ಅವರಿಗೆ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಸಿಗಲಿದೆ. ಹಿಂಬಾಕಿಯನ್ನು ಸೆ.30 ರೊಳಗೆ ಪಾವತಿಸಬೇಕು (ಮೂರು ತಿಂಗಳು ಕಾಲಾವಕಾಶ ಇದೆ).
• ನೀವು ಜುಲೈ 25 ರೊಳಗೆ ಯೋಜನೆಗೆ ನೋಂದಾಯಿಸಿಕೊಂಡಲ್ಲಿ, ಆಗಸ್ಟ್ ತಿಂಗಳ ಬಿಲ್​ನಲ್ಲಿ ಯೋಜನೆಯ ಪ್ರಯೋಜನ ದೊರಕಲಿದೆ. ಹಾಗೆಯೇ, ಜುಲೈ 25 ರಿಂದ ಆಗಸ್ಟ್ 25 ರೊಳಗೆ ನೋಂದಾಯಿಸಿಕೊಂಡಲ್ಲಿ, ಸೆಪ್ಟೆಂಬರ್ ತಿಂಗಳ ಬಿಲ್​ನಲ್ಲಿ ಯೋಜನೆಯ ಪ್ರಯೋಜನ ದೊರೆಯಲಿದೆ (ಬಿಲಿಂಗ್ ಅವಧಿ ಪ್ರತಿ ತಿಂಗಳ 25 ನೇ ತಾರೀಖಿನಿಂದ ಮುಂದಿನ ತಿಂಗಳ 25 ತಾರೀಖಿನವರೆಗೆ).
• ಈ ಪ್ರಯೋಜನ ಪಡೆಯಲು ನಿಮ್ಮ ವಿದ್ಯುತ್ ಬಳಕೆಯ ಸರಾಸರಿ 200 ಯೂನಿಟ್​ಮೀರಿರಬಾರದು.
• ಗೃಹ ಜ್ಯೋತಿ ಯೋಜನೆಗೆ ಗ್ರಾಹಕರು ಜುಲೈ 25 ರ ನಂತರ ಅರ್ಜಿ ಸಲ್ಲಿಸಿದರೆ ಅವರಿಗೆ ಆಗಸ್ಟ್ ತಿಂಗಳಲ್ಲಿ ಬರುವ ಬಿಲ್​ನಲ್ಲಿ ಪ್ರಯೋಜನ ಸಿಗುವುದಿಲ್ಲ. ಆದರೆ ಯೋಜನೆಯ ಪ್ರಯೋಜನವನ್ನು ಅವರು ಸೆಪ್ಟೆಂಬರ್ ತಿಂಗಳಲ್ಲಿ ಪಡೆಯಲಿದ್ದಾರೆ. ಯೋಜನೆಯ ನೋಂದಣಿಗೆ ವಿಳಂಬ ಬೇಡ. ಇಂದೇ ನೋಂದಾಯಿಸಿಕೊಳ್ಳಿ ಎಂದು ಬೆಸ್ಕಾಂ ಮನವಿ ಮಾಡಿದೆ.

ಅಂದಹಾಗೆ ಅಧಿಕೃತ ಅಂಕಿಅಂಶಗಳ ಪ್ರಕಾರ ಜುಲೈ 2ರವರೆಗೆ ಒಟ್ಟು 9250157 ನೋಂದಣಿಯಾಗಿದೆ. ಅದರಲ್ಲಿ ಬೆಸ್ಕಾಂನಲ್ಲಿ ಅತಿ ಹೆಚ್ಚು 3801649 ನೋಂದಣಿಯಾಗಿದ್ದರೆ, ಸೆಸ್ಕ್ ನಲ್ಲಿ 1427064, ಜೆಸ್ಕಾಂನಲ್ಲಿ 973170, ಹೆಸ್ಕಾಂನಲ್ಲಿ 1924336, ಎಚ್ ಆರ್ ಇ ಸಿಎಸ್ ನಲ್ಲಿ 45184, ಮೆಸ್ಕಾಂನಲ್ಲಿ 1078757 ಮಂದಿ ನೋಂದಣಿ ಮಾಡಿದ್ದಾರೆ.

ಇದನ್ನೂ ಓದಿ: Gruha Lakshmi Scheme: ಗೃಹ ಲಕ್ಷೀ ಯೋಜನೆ ಬಗ್ಗೆ ಬಿಗ್ ಅಪ್ಡೇಟ್.. !! ಈ ದಾಖಲೆ ಇಲ್ಲಾಂದ್ರೆ ಯಾವುದೇ ಕಾರಣಕ್ಕೂ ಸಿಗಲ್ಲ 2000 ರೂ!!

You may also like

Leave a Comment