Free Bus: ರಾಜ್ಯ ಕಾಂಗ್ರೆಸ್ ಪಕ್ಷ (Congress) ಬಹುಮತದಿಂದ ಚುನಾವಣೆ ಯಲ್ಲಿ ಗೆದ್ದು, 5 ಗ್ಯಾರಂಟಿಗಳ (5 guarantees) ಭರವಸೆ ನೀಡಿರುವ ಪ್ರಕಾರ, ಇದೀಗ ಐದು ಭಾರವಸೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ ನೀಡುವ ಯೋಜನೆ ಬಗ್ಗೆ ಅಧಿಕೃತ ಘೋಷಣೆ ಕೂಡ ಆಗಿದೆ.
ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ (Free Bus) ಜಾರಿಗೊಂಡ ಬೆನ್ನಲ್ಲೇ ಮಹಿಳೆಯರ ಸಂಚಾರ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ. ಮಹಿಳೆಯರಿಗೆ ಈ ಯೋಜನೆಯಿಂದ ಅನುಕೂಲವಾಗಿದ್ದು, ಸರ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಈ ಯೋಜನೆಯ ಲಾಭವನ್ನು ಪಡೆಯುವ ಹಿನ್ನೆಲೆಯಲ್ಲಿ ಮಹಿಳೆಯರು ತಮ್ಮ ಡಬಲ್ ಗೇಮ್ ಬುದ್ಧಿಯನ್ನು ತೋರಿಸಿ ದಾಖಲಾತಿಗಳನ್ನೇ ಬದಲಿಸಿಕೊಂಡಿದ್ದಾರೆ.
ಹೌದು, ಈಗಾಗಲೇ ರಾಜ್ಯಾದ್ಯಂತ ಹೊರ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವ ಮಹಿಳೆಯರು ಉಚಿತವಾಗಿ ಬಸ್‌ನಲ್ಲಿ ಪ್ರಯಾಣ ಮಾಡಲು ಹೊಸ ತಂತ್ರ ಮಾಡಿದ್ದಾರೆ.
ಸದ್ಯ, ಕರ್ನಾಟಕದಲ್ಲಿ ವಾಸವಾಗಿರುವ ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಇತರೆ ರಾಜ್ಯಗಳ ಮಹಿಳೆಯರು ತಮ್ಮ ಮೂಲ ಆಧಾರ್‌ಕಾರ್ಡ್ ಪ್ರತಿಯಲ್ಲಿ ತಮ್ಮದೇ ರಾಜ್ಯದ ಅಧಿಕೃತ ಭಾಷೆಯ ಬದಲಾಗಿ ಕನ್ನಡದಲ್ಲಿ ಮುದ್ರಣವನ್ನು ಪಡೆದುಕೊಂಡಿದ್ದಾರೆ. ಮೂಲ ವಿಳಾಸ ಬಂಗಾಳ, ತಮಿಳುನಾಡಿನ ಗ್ರಾಮದ ವಿಳಾಸವನ್ನು ಹೊಂದಿದ್ದರೂ, ಆ ಹೆಸರು ಮತ್ತು ವಿಳಾಸವನ್ನು ಕನ್ನಡದಲ್ಲಿ ಮುದ್ರಣ ಪಡೆಯಲಾಗಿದೆ. ಇಂತಹ ದಾಖಲೆಗಳನ್ನು ಬಸ್‌ನಲ್ಲಿ ತೋರಿಸಿ ಪ್ರಯಾಣ ಮಾಡುತ್ತಿರುವುದು ಕಂಡಕ್ಟರ್‌ಗಳ ಗಮನಕ್ಕೆ ಬಂದಿರುತ್ತದೆ.
ಈಗಾಗಲೇ ತಮಿಳುನಾಡಿನ ಹಾಗೂ ಪಶ್ಚಿಮ ಬಂಗಾಳದ ಆಧಾರ್ ಕಾರ್ಡ್ ಕನ್ನಡ ಅಕ್ಷರಗಳಲ್ಲಿ ಪ್ರಿಂಟ್ ಮಾಡಲಾಗಿದೆ. ಇಂತಹ ಆಧಾರ್ ಕಾರ್ಡ್ ತೋರಿಸಿದ ಇಬ್ಬರೂ ಮಹಿಳೆಯರು, ಕಂಡಕ್ಟರ್ ಬಳಿ ಸಿಕ್ಕಿಕೊಂಡಿದ್ದಾರೆ. ಈ ಬಗ್ಗೆ ಫೊಟೋಗಳನ್ನು ತೆಗೆದುಕೊಂಡು ಸಾರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸದ್ಯ ಮಹಿಳೆಯರ ತಂತ್ರ ದಿಂದ ಎಚ್ಚೆತ್ತುಕೊಂಡು ದಾಖಲೆಗಳನ್ನು ಎರಡೆರಡು ಬಾರಿ ಪರಿಶೀಲನೆ ಮಾಡಿ ಕಂಡಕ್ಟರ್ ಟಿಕೆಟ್ ವಿತರಣೆ ಮಾಡುತ್ತಿದ್ದಾರೆ. ಒಂದು ವೇಳೆ ಸರಿಯಾಗಿ ಪರಿಶೀಲನೆ ಮಾಡದೇ ಟಿಕೆಟ್ ನೀಡಿದಲ್ಲಿ ಕಂಡಕ್ಟರ್‌ಗಳಿಗೆ ದಂಡ ಬೀಳುವುದು ಗ್ಯಾರಂಟಿಯಾಗಿದೆ.
ಇದನ್ನೂ ಓದಿ: ಮುರ್ಡೇಶ್ವರದಲ್ಲಿ ಸಮುದ್ರ ಪಾಲಾದ ಇಂಜಿನಿಯರಿಂಗ್ ವಿದ್ಯಾರ್ಥಿ : ಇಬ್ಬರ ರಕ್ಷಣೆ
