koppal: ಇತ್ತೀಚೆಗೆ ಮಂಗಳೂರಿನ(Mangalore) ವ್ಯಕ್ತಿಯೊಬ್ಬರಿಗೆ ಒಂದು ತಿಂಗಳಿಗೆ ಏಳುವರೆ ಲಕ್ಷ ಕರೆಂಟ್ ಬಿಲ್(Current bill) ಬಂದು ಇಡೀ ರಾಜ್ಯದ್ಯಂತ ಸುದ್ಧಿಯಾಗಿತ್ತು. ಆದರೆ ಈ ಬೆನ್ನಲ್ಲೇ ಇದೀಗ 2 ಬಲ್ಬ್ ಇರುವ ತಗಡಿನ ಶೆಡ್‍ನಲ್ಲಿ ವಾಸಿಸುವ ವೃದ್ಧೆಯೊಬ್ಬರ ಮನೆಗೆ ಜೆಸ್ಕಾಂ ಸಿಬ್ಬಂದಿ ಲಕ್ಷಗಟ್ಟಲೆ ವಿದ್ಯುತ್ ಬಿಲ್ ನೀಡಿದ್ದಾರೆ.
ಹೌದು, ಕರ್ನಾಟಕ ಸರ್ಕಾರ ಗೃಹ ಜ್ಯೋತಿ ಯೋಜನೆ(Gruha jyothi scheme) ಅಡಿಯಲ್ಲಿ 200 ಯುನಿಟ್ ವಿದ್ಯುತ್ ಫ್ರೀ ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯದ ಹಲವೆಡೆ ಮನೆ ವಿದ್ಯುತ್ ಬಿಲ್ (Electricity bill) ಲಕ್ಷ ಲಕ್ಷ ಬರುತ್ತಿರುವುದು ವರದಿಯಾಗುತ್ತಿವೆ. ಅಂತೆಯೇ ಇದೀಗ ಕೊಪ್ಪಳದ (Koppal) ವೃದ್ದೆಯ ಮನೆಗೆ ಲಕ್ಷ ಲಕ್ಷ ಬಿಲ್ ಬಂದಿದೆ. ಹೌದು.. ಎರಡೇ ಎರಡು ಲೈಟ್ ಹೊಂದಿರುವ ಕೊಪ್ಪಳದ 90 ವರ್ಷದ ಗೀರಿಜಮ್ಮ ಎನ್ನುವ ವೃದ್ಧೆ ಮನೆಗೆ ಜೆಸ್ಕಾಂ, 1 ಲಕ್ಷದ 3 ಸಾವಿರದ 315 ರೂ. ಬಿಲ್ ನೀಡಿ ಶಾಕ್ ನೀಡಿದ್ದಾರೆ.
ಇದರಿಂದ ಆತಂಕಕ್ಕೊಳಗಾದ ವ್ರದ್ಧೆ ಹಾಗೂ ಆಕೆಯ ಮಗ ಈ ಮನೆ ಮಾರಿದರೂ ಅಷ್ಟು ಬಿಲ್ (Electricity Bill) ಕಟ್ಟಲು ಸಾಧ್ಯವಿಲ್ಲ ಎಂದು ಗೋಳಾಡಿದ್ದಾರೆ. ಗಿರಿಜಮ್ಮ ಮನೆಯಲ್ಲಿ ಎರಡು ಬಲ್ಬ್ ಇವೆ. ಆದರೂ 6 ತಿಂಗಳಲ್ಲಿ ಬರೋಬ್ಬರಿ 1 ಲಕ್ಷ ರೂ. ಬಿಲ್ ಬಂದಿದೆ. ಈ ಅಜ್ಜಿ ಭಾಗ್ಯ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದರು. ಹೀಗಾಗಿ ಜೆಸ್ಕಾಂ, ಪ್ರತಿ 70 ರಿಂದ 80 ರೂ ಬೀಲ್ ನೀಡುತ್ತಿತ್ತು. ಆದ್ರೆ, ಆರು ತಿಂಗಳ ಹಿಂದೆ ವೃದ್ದೆಯ ಮನೆಗೆ ಜೆಸ್ಕಾಂ ಸಿಬ್ಬಂದಿ ಮೀಟರ್ ಅಳವಡಿಸಿದ್ದು, ಇದೀಗ 6 ತಿಂಗಳಲ್ಲಿ ಅಜ್ಜಿ ಮನೆಗೆ ಬರೋಬ್ಬರಿ 1,03,315 ರೂ. ವಿದ್ಯುತ್ ಬಿಲ್ ನೀಡಲಾಗಿದ್ದು, ಇದರಿಂದ ಅಜ್ಜಿ ಶಾಕ್ ಆಗಿದ್ದಾಳೆ.
ಅಂದಹಾಗೆ ಭಾಗ್ಯ ಜ್ಯೋತಿ (Bhagya Jyothi) ಯೋಜನೆಯ ಪ್ರಕಾರ 18 ಯೂನಿಟ್ ಸರ್ಕಾರವೇ ಪಾವತಿ ಮಾಡುತ್ತಿತ್ತು. ಆದರೆ ಕಳೆದ ಆರು ತಿಂಗಳ ಹಿಂದೆ ಈ ಮನೆಗೆ ಜೆಸ್ಕಾಂ ಸಿಬ್ಬಂದಿ ಮೀಟರ್ ಅಳವಡಿಕೆ ಮಾಡಿದ್ದಾರೆ. ಮೀಟರ್ ಹಾಕಿದಾಗಿಂದ ಹತ್ತರಿಂದ ಇಪ್ಪತ್ತು ಸಾವಿರ ರೂ. ಬಿಲ್ ಬರುತ್ತಿದೆ. ಆದರೆ ಬಿಲ್ ಕೊಟ್ಟು ಹೋಗುವ ಸಿಬ್ಬಂದಿ ಹಣ ಕೇಳಲು ಮಾತ್ರ ಬರುತ್ತಿಲ್ಲ. ಒಂದು ವೇಳೆ ಬಂದರೆ ಎಂಬ ಭಯದಲ್ಲಿ ವೃದ್ಧೆ ಈ ಸಮಸ್ಯೆ ಬಗೆಹರಿಸುವಂತೆ ಸಿಕ್ಕ ಸಿಕ್ಕವರಲ್ಲಿ ಕೇಳಿಕೊಳ್ಳುತ್ತಿದ್ದಾರೆ.
