Shakti scheme effect : ರಾಜ್ಯದಲ್ಲಿ ಜಾರಿಯಾಗಿರೋ ಶಕ್ತಿ ಯೋಜನೆಗೆ (ಮಹಿಳೆಯರ ಉಚಿತ ಬಸ್ ಪ್ರಯಾಣ) ಭರ್ಜರಿಯಾದ ರೆಸ್ಪಾನ್ಸ್ ಸಿಗುತ್ತಿದೆ. ರಾಜ್ಯಾದ್ಯಂತ ಮಹಿಳೆಯರು ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೀಗ ಚಾಮರಾಜನಗರದಲ್ಲಿ (Chamarajanagar) ಬಸ್ ಒಂದು ರಶ್ ಆಗಿ ಪ್ರಯಾಣಿಕರು ಬಸ್ಸಿನ ಬಾಗಿಲನ್ನೇ ಮುರಿದು ಹಾಕಿದ ಘಟನೆ ನಡೆದಿದೆ.
ಹೌದು, ಕಾಂಗ್ರೆಸ್ನ(Congress) ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ಕಲ್ಪಿಸುವ ‘ಶಕ್ತಿ ಯೋಜನೆ’ (Shakti scheme effect) ಜಾರಿಗೆ ಬಂದು ಒಂದು ವಾರ ಕಳೆಯುವಷ್ಟರಲ್ಲಿ ನಾನಾ ಅವಾಂತರಗಳು ನಡೆದುಹೋಗಿವೆ. ಪ್ರಯಾಣ ಫ್ರೀ ಫ್ರೀ ಎನ್ನುತ್ತಾ ಅಜ್ಜಿಯೊಬ್ಬರು ಇಡೀ ಒಂದು ಬಸ್ ಅನ್ನು ಬುಕ್ ಮಾಡಲು ಹೋದಂತಹ ಘಟನೆ ನಿನ್ನೆ ದಿನ ಬೆಂಗಳೂರಿನಲ್ಲಿ ನಡೆದು ಭಾರೀ ಸುದ್ದಿಯಾಗಿತ್ತು. ಆದರೆ ಈ ಬೆನ್ನಲ್ಲೇ ಚಾಮರಾಜನಗರದಲ್ಲಿ (Chamarajanagar) ರಶ್ ಆಗಿ ಪ್ರಯಾಣಿಕರು ಬಸ್ಸಿನ ಬಾಗಿಲನ್ನೇ ಮುರಿದು ಹಾಕಿದ ಘಟನೆ ನಡೆದಿದೆ.
ವಾರದ ಹಿಂದಷ್ಟೆ ಸಾರಿಗೆ ನಿಗಮ ಬಾಗಿಲು ಹಾಕದೇ ಬಸ್ ಓಡಿಸದಂತೆ ಆದೇಶ ನಿಡಿತ್ತು. ಆದರೆ ಇಲ್ಲಿ ಪ್ರಯಾಣಿಕರೇ ಸೇರಿ ಬಸ್ ಡೋರ್ ಕಿತ್ತು ಹಾಕಿದ್ದಾರೆ. ಹೌದು, ವಾರಾಂತ್ಯ ಹಾಗೂ ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಮಹಿಳೆಯರು ತೋರಿದ ಶಕ್ತಿಗೆ ಬಸ್ವೊಂದರ ಬಾಗಿಲು ಕಳಚಿ ಹೋಗಿದೆ.
ಸೋಮವಾರ ಅಮವಾಸ್ಯೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಮಲೆ ಮಹದೇಶ್ವರ (Male Mahadeshwara) ಬೆಟ್ಟದ ದರ್ಶನಕ್ಕೆ ಹೊರಟಿದ್ದರು. ಈ ವೇಳೆ ಬಂದ ಬಸ್ ಏರಲು ನೂಕು ನುಗ್ಗಲು ಉಂಟಾಗಿದೆ. ಅಲ್ಲದೇ ಪ್ರಯಾಣಿಕರು ಬಸ್ ಏರುವಾಗ ಬಸ್ಸಿನ ಡೋರ್ ಮುರಿದು ಬಿದ್ದಿದೆ. ಇದರಿಂದಾಗಿ ಕಂಡಕ್ಟರ್ ಪರದಾಡೋ ಪರಿಸ್ಥಿತಿ ಕೂಡ ಉಂಟಾಗಿದೆ.
ಅಂದಹಾಗೆ ಈಗಾಗಲೇ ಬಸ್ನಲ್ಲಿ ಮಹಿಳೆಯರು ಉಚಿತ ಪ್ರಯಾಣಕ್ಕಾಗಿ ಧಾವಿಸುತ್ತಿದ್ದು, ನಿರ್ವಾಹಕರು ಉಳಿದವರಿಗೆ ಟಿಕೆಟ್ ನೀಡಲಿಕ್ಕೂ ಪರದಾಡಬೇಕಾದಂಥ ಘಟನೆಗಳೂ ಜರುಗಿವೆ. ಪುರುಷರು ಟಿಕೆಟ್ಗೆ ದುಡ್ಡು ಕೊಟ್ಟೂ ನಿಂತುಕೊಂಡೇ ಪ್ರಯಾಣಿಸಬೇಕಾದ ಪರಿಸ್ಥಿತಿ, ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಂದ ಸೀಟ್ಗಾಗಿ ಕಿತ್ತಾಟ ಮುಂತಾದವು ಕೂಡ ನಡೆದಿವೆ. ಇನ್ನು ಬೆಳಗ್ಗೆಯಿಂದ ಕಾದರೂ ಕೆಲವರಿಗೆ ರಷ್‍ನಿಂದ ಬಸ್ ಹತ್ತಲು ಆಗಿರಲಿಲ್ಲ. ನಿಲ್ದಾಣದಲ್ಲೇ ಕಾದು ನಿಲ್ಲುವಂತಾಗಿದೆ ಎಂದು ಕೆಲವರು ಗೋಳಾಡಿದ್ದಾರೆ. ಬಸ್‍ಗಳಲ್ಲಿ ಮಹಿಳೆಯರೇ ತುಂಬಿಕೊಳ್ಳುತ್ತಿದ್ದಾರೆ. ನಾವು ಹೇಗೆ ಹೋಗೋದು ಎಂದು ಪುರುಷರು ಅಳಲು ತೋಡಿಕೊಂಡಿದ್ದಾರೆ.
