KSRTC Booking: ನಾಳೆಯಿಂದ ಕರ್ನಾಟಕ ರಾಜ್ಯದಾದ್ಯಂತ ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯ ದೊರೆಯಲಿದೆ ನಾಳೆ ಬೆಳಿಗ್ಗೆ 11 ಗಂಟೆಯ ನಂತರ ಸಿದ್ದರಾಮಯ್ಯನವರು ಶಕ್ತಿ ಯೋಜನೆಯನ್ನು ಉದ್ಘಾಟಿಸಿ ಮೊತ್ತ ಮೊದಲಾಗಿ ಟಿಕೆಟ್ ಹರಿದು ಮಹಿಳೆಯರಿಗೆ ಉಚಿತ ಟಿಕೆಟ್ ನೀಡಲಿದ್ದಾರೆ. ತದನಂತರ ಮಧ್ಯಾಹ್ನ ಒಂದು ಗಂಟೆಯಿಂದ ಮಹಿಳೆಯರ ಸುಧೀರ್ಘ ಶುಭಪಯಣ ಶುರುವಾಗಲಿದೆ.
ಮಹಿಳೆಯರಿಗೆ ರಾಜ್ಯದ ಎಲ್ಲೆಡೆ ಪ್ರಯಾಣ ಉಚಿತವಾಗಿರುವ ಕಾರಣ ರಾಜ್ಯದ ವಿವಿಧ ಭಾಗಗಳಿಗೆ ಹೊರಡುವ ಬಸ್ಸುಗಳಲ್ಲಿ ಮುಂಗಡ ಟಿಕೆಟ್ ಕಾದಿರಿಸುವಿಕೆಯಲ್ಲಿ(KSRTC Booking) ತೀವ್ರ ಕುಸಿತ ಕಂಡು ಬಂದಿದೆ. ಎಲ್ಲಾ ಸೀಟುಗಳು ಖಾಲಿ ಖಾಲಿ ಬಿದ್ದಿವೆ. ಎಲ್ಲರಿಗೂ ತಿಳಿದಿರುವಂತೆ ಐಷಾರಾಮಿ ಬಸ್ಸುಗಳಾದ ರಾಜಹಂಸ, ಎಸಿ ಮತ್ತು ಐರಾವತ ಮುಂತಾದ ಐಷಾರಾಮಿ ಬಸ್ಸುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸಾಮಾನ್ಯ ಸಾರಿಗೆ ವ್ಯವಸ್ಥೆಯಲ್ಲಿ ಮಹಿಳೆಯರು ನಾಳೆಯಿಂದ ಉಚಿತವಾಗಿ ತಮ್ಮ ಪ್ರಯಾಣ ಕಂಡುಕೊಳ್ಳಬಹುದು. ಆದರೆ ಇವತ್ತು ಬಂದ ಮಾಹಿತಿಯ ಪ್ರಕಾರ, ಸಾಮಾನ್ಯ ಸಾರಿಗೆಯಲ್ಲಿ ಮಾತ್ರವಲ್ಲ ಒಟ್ಟಾರೆ ಇತರ ಬಸ್ಸುಗಳಲ್ಲಿಯೂ ಬುಕ್ಕಿಂಗ್ ನಲ್ಲಿ ತೀವ್ರ ಮಟ್ಟದ ಕುಸಿತ ಕಂಡು ಬಂದಿದೆ.
ಅಂದರೆ, ಬಹುಶ: ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಲು ಬಯಸುತ್ತಿದ್ದು ಮಹಿಳೆಯರ ಜೊತೆ ಸಹ ಪ್ರಯಾಣ ಮಾಡಲು ಹೊರಡುವ ಗಂಡಸರು ಕೂಡ ಐಶಾರಾಮಿ ಬಸ್ಸುಗಳನ್ನು ತೊರೆದು, ಸಾಮಾನ್ಯ ಬಸ್ಸುಗಳಲ್ಲಿ ಹೊರಡಲು ನಿರ್ಧರಿಸಿದ್ದಾರೆ, ಎನ್ನಲಾಗಿದೆ. ಹೇಗೂ ಸಾಮಾನ್ಯ ಸಾವಿಗೆ ಬಸ್ಸುಗಳಲ್ಲಿ 50% ಸೀಟುಗಳನ್ನು ಗಂಡಸರಿಗೆ ಕಾದಿರಿಸಲಾಗಿದೆ. ಈ ಮೂಲಕ ಪ್ರಯಾಣ ಹೊರಡುವ ಮನೆ ಮಂದಿ, ತಮ್ಮ ಮನೆಯ ಹೆಂಗಸರು ಸಾಗುವ ಬಸ್ಸುಗಳಲ್ಲಿಯೆ ಗಂಡಸರು ಹೋಗಲು ಇಚ್ಚಿಸುತ್ತಿದ್ದು ಸಾಮಾನ್ಯ ಸಾರಿಗೆಯ ಮೇಲೆ ತೀವ್ರ ಒತ್ತಡ ಉಂಟು ಉಂಟಾಗಲಿದೆ ಎನ್ನುವುದು ಅಭಿಪ್ರಾಯ. ಎಲ್ಲಾ ಕೆಳ ವರ್ಗ ಮತ್ತು ಮಧ್ಯಮ ವರ್ಗದವರು ಇನ್ನು ಮುಂದೆ ಉಚಿತ ಸಾರಿಗೆ ವ್ಯವಸ್ಥೆಯ ಬಸ್ಸುಗಳಲ್ಲಿ ಸಂಚರಿಸುವ ಮುನ್ಸೂಚನೆ ಈಗಾಗಲೇ ಸಿಕ್ಕಿದೆ.
ಆದುದರಿಂದ ನಾಳೆ ಮಧ್ಯಾಹ್ನದ ನಂತರ ಸಾಮಾನ್ಯ ಬಸ್ಸುಗಳಲ್ಲಿ ವಿಪರೀತ ರಶ್ ಉಂಟಾಗಲಿದೆ ಎನ್ನಲಾಗುತ್ತಿದೆ. ಒಂದು ವೇಳೆ ಹೆಂಗಸರು ಗಂಡಸರು ಎಲ್ಲರೂ ಸಾಮಾನ್ಯ ಬಸುಗಳಲ್ಲಿ ಪ್ರಯಾಣಕ್ಕೆ ಹೊರಟರೆ, ಕೆಎಸ್ಆರ್ಟಿಸಿಯ ಐಷಾರಾಮಿ ಬಸ್ಸುಗಳಿಗೆ ಬೇಡಿಕೆ ಕುಸಿದು ನಿಗಮಕ್ಕೆ ವಿಪರೀತ ನಷ್ಟವಾಗಲಿದ್ದು, ಆ ನಷ್ಟವನ್ನು ಈಗಾಗಲೇ ನಿರ್ಧರಿಸಿದಂತೆ ಸರ್ಕಾರವೇ ಭರಿಸಬೇಕಾಗಿದೆ. ಇದು ಇನ್ನಷ್ಟು ಆರ್ಥಿಕ ಹೊರೆಯನ್ನು ಸರ್ಕಾರದ ಮೇಲೆ ಹೊರಿಸಲಿದೆ. ಇವೆಲ್ಲದರ ಪರಿಣಾಮ ಈಗಾಗಲೇ ಊಹಿಸಿದಂತೆ ರಾಜ್ಯದ ಅಭಿವೃದ್ಧಿಯ ಮೇಲೆ ಅಗಲಿದೆ ಎನ್ನುವುದು ಆರ್ಥಿಕ ಪಂಡಿತರ ಅಭಿಪ್ರಾಯ.
ಇದನ್ನೂ ಓದಿ: ಬೀದಿ ಬದಿ ವ್ಯಾಪಾರಿಗಳ ಸುಂಕ ನಾನು ಭರಿಸುವೆ – ಶಾಸಕ ಪ್ರದೀಪ್ ಈಶ್ವರ್
