Jaipur : ಪತ್ನಿಗೆ (wife) ಜೀವನಾಂಶ ನೀಡಲು ಗಂಡ 280 ಕೆಜಿ ನಾಣ್ಯಗಳ ಮೂಟೆ ಸಮೇತ ಕೋರ್ಟ್ ಗೆ ಹಾಜರ್ ಆದ ಘಟನೆ ರಾಜಸ್ಥಾನದ ಜೈಪುರದಲ್ಲಿ (Jaipur) ನಡೆದಿದೆ. ಕೇವಲ ನಾಣ್ಯದಿಂದಲೇ 55 ಸಾವಿರ ರೂ. ಒಟ್ಟುಗೂಡಿಸಿ, ಪತ್ನಿಯ ಜೀವನಾಂಶವನ್ನು ನೀಡಿರುವುದು ವಿಭಿನ್ನವಾಗಿದೆ.
ದಶರಥ್ ಕುಮಾವತ್ ಹಾಗೂ ಸೀಮಾ ಹತ್ತು ವರ್ಷಗಳ ಹಿಂದೆ ವಿವಾಹವಾಗಿದ್ದರು. ನಂತರ ಈ ದಂಪತಿ ವಿಚ್ಛೇದನ ಪಡೆದಿದ್ದು, ನ್ಯಾಯಾಲಯವು ವಿಚ್ಛೇದನವಾಗಿ ಸೀಮಾಗೆ ಮಾಸಿಕ 5 ಸಾವಿರ ನೀಡುವಂತೆ ಆದೇಶ ಹೊರಡಿಸಿತ್ತು. ಆದರೆ ದಶರಥ್ ಹಣ ನೀಡಿರಲಿಲ್ಲ. ಹಾಗಾಗಿ ಆತನನ್ನು ಜೂನ್ 17 ರಂದು
ಬಂಧಿಸಲಾಗಿತ್ತು.
ನಂತರದಲ್ಲಿ ಈತ ತನ್ನ ವಿಚ್ಛೇದಿತ (divorce) ಪತ್ನಿಗೆ 11 ತಿಂಗಳ ಜೀವನಾಂಶವನ್ನು ಒಟ್ಟಿಗೆ ನೀಡಿದ್ದಾನೆ. 11 ತಿಂಗಳ 55 ಸಾವಿರ ರೂ. ಹಣವನ್ನು ನಾಣ್ಯಗಳ ರೂಪದಲ್ಲಿ ನೀಡಿದ್ದಾನೆ. ಒಂದು ಹಾಗೂ ಎರಡು ರೂಪಾಯಿಯ ನಾಣ್ಯಗಳನ್ನು ಒಟ್ಟು 7 ಚೀಲಗಳಲ್ಲಿ ತುಂಬಿಸಿ ಮೂಟೆ ಸಮೇತ ಕೋರ್ಟ್ ಗೆ ಹಾಜರ್ ಆಗಿದ್ದಾನೆ.
ದಶರಥ್’ನ ಈ ವರ್ತನೆಗೆ ಮನೆಯವರು ಸೇರಿದಂತೆ ಕೋರ್ಟ್ ನಲ್ಲಿದ್ದವರೇ ಶಾಕ್ ಆಗಿದ್ದಾರೆ. ಅಲ್ಲದೆ, ಪತ್ನಿ ಸೀಮಾ ಕಡೆ ವಕೀಲರು ಇದು ಒಂದು ರೀತಿಯ ಹಿಂಸೆ ಎಂದು ಆರೋಪಿಸಿದ್ದಾರೆ. ಅದಕ್ಕಾಗಿ ನ್ಯಾಯಾಲಯ, ಜೂ.26 ರಂದು ಕೋರ್ಟನಲ್ಲಿಯೇ ಈ ಎಲ್ಲ ನಾಣ್ಯಗಳನ್ನು ದಶರಥ್ ಕಡೆಯವರೇ ಎಣಿಕೆ ಮಾಡಿ ವಿಚ್ಚೇದಿತ ಪತ್ನಿಗೆ ನೀಡಬೇಕು ಎಂದು ಆದೇಶಿಸಿದೆ.
