Seema haider: ಉತ್ತರ ಪ್ರದೇಶದ ಲಕ್ನೋದಲ್ಲಿ ಆನ್ಲೈನ್ ಗೇಮ್ (PUBG) ಆಡುತ್ತಾ ಆಡುತ್ತಾ ಪಾಕಿಸ್ತಾನದಿಂದ ತನ್ನ ಪ್ರೇಮಿಯನ್ನು ಹುಡುಕಿಕೊಂಡು ತನ್ನ 4 ಮಕ್ಕಳೊಂದಿಗೆ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ್ದಳಲ್ಲ ಸೀಮಾ ಹೈದರ್. ಪಾಕಿಸ್ತಾನದ ಈ (Pakistani National) ಮಹಿಳೆ ಸೀಮಾ ಹೈದರ್ (Seema Haider) ಪ್ರಕರಣ ಈಗ ದಿನೇ ದಿನೇ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.
ಪಬ್ಜಿ ಆಡುತ್ತಾ ಆಡುತ್ತಾ ತನ್ನ ಗೆಳೆಯನೊಂದಿಗೆ ಪ್ರೀತಿ ಉಂಟಾಗಿ ಆಕೆ ಭಾರತದ ಗಡಿ ದಾಟಿ ತನ್ನ ಪ್ರೇಮಿಯನ್ನು ಭೇಟಿಯಾಗಲು ಉತ್ತರಪ್ರದೇಶದ ಲಕ್ನೋಗೆ ಬಂದಿದ್ದಳು. ಅ0ದು ನಾಲ್ಕು ಮಕ್ಕಳ ತಾಯಿ ತನ್ನ ಮಕ್ಕಳನ್ನು ಕಟ್ಟಿಕೊಂಡು ಪಾಕಿಸ್ತಾನದಿಂದ ಹಲವು ದೇಶಗಳನ್ನು ದಾಟಿಕೊಂಡು ಹೇಗೋ ಉತ್ತರ ಪ್ರದೇಶದ ಲಕ್ನೋಗೆ ಬಂದು ತನ್ನ ಪ್ರೇಮಿ ಸಚಿನ್ ಅನ್ನೋ ಸೇರಿಕೊಂಡಿದ್ದಳು. ಮೊದಮೊದಲು ಪ್ರೀತಿಗಾಗಿ ತನ್ನ ಹುಟ್ಟೂರನ್ನು ಹೆತ್ತವರನ್ನು ಮತ್ತು ಗಂಡನನ್ನು ಬಿಟ್ಟು ಬಂದ ಹುಡುಗಿಯ ಅಮರ ಪ್ರೇಮದ ಕಥೆಯ ಬಗ್ಗೆ ಹೇಳಲಾಗುತ್ತಿತ್ತು. ಆದರೆ ಇದೀಗ ಪ್ರಕರಣವು ಆಕೆಗೆ ಪಾಕಿಸ್ತಾನದ ಐಎಸ್ಐ ಗಂಟು ಇರುವ ಬಗ್ಗೆ ಸುದ್ದಿಗಳು ಹಬ್ಬುತ್ತಿವೆ. ಗಡಿ ದಾಟಿ ಬಂದ ಈ ಮಹಿಳೆಯ ಕಥೆಗೆ ಈಗ ಐಎಸ್‌ಐ ನಂಟು ತಳಕು ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ಘಟನೆಯ ಸತ್ಯತೆ ತಿಳಿದುಕೊಳ್ಳಲು ಉತ್ತರ ಪ್ರದೇಶ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ತನಿಖೆಗೆ ಪೂರಕ ಸಾಕ್ಷಿ ಎಂಬಂತೆ ಪೊಲೀಸರು ಮತ್ತೊಂದು ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ. ಈ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಈಗ ಸೀಮಾ ಸಚಿನ್ ಆಗಿರುವ ಈಕೆ ಹಿಂದೆ ಭಾರತೀಯ ಸೇನಾ ಯೋಧರಿಗೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಕೆಗೆ ಪಾಕಿಸ್ತಾನದ ಸೇನೆ ಮತ್ತು ಅಲ್ಲಿನ ಗುಪ್ತಚರ ಸಂಸ್ಥೆ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್‌ನೊಂದಿಗೆ (ISI) ಸಂಬಂಧ ಇರಬಹುದಾದ ಶಂಕೆಯ ಹಿನ್ನೆಲೆಯಲ್ಲಿ ಎಟಿಎಸ್ ಹಾಗೂ ಇಂಟೆಲಿಜೆನ್ಸ್ ಬ್ಯೂರೋ ವಿಚಾರಣೆಗೆ ಒಳಪಡಿಸಿದೆ. ಮಾತ್ರವಲ್ಲದೇ ಸೀಮಾ ಹೈದರ್‌ನ ಈ ಹಿಂದೆ ಡಿಲೀಟ್ ಆಗಿರುವ ಮೊಬೈಲ್ ಡೇಟಾ ರಿಕವರಿ ಮಾಡಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಅಲ್ಲದೆ ಆಕೆಯ ಸೋಷಿಯಲ್ ಮೀಡಿಯಾ ಖಾತೆಗಳ ತನಿಖೆ ಕೂಡಾ ನಡೆದಿದೆ.
ಆನ್ ಲೈನ್ ಗೇಮ್ ಪಬ್ಜಿ ಮೂಲಕ 30 ವರ್ಷದ ಸೀಮಾಗೆ ಭಾರತದ ನಿವಾಸಿ ಸಚಿನ್ ಪರಿಚಯವಾಗಿ, ಬಳಿಕ ಅದು ಪ್ರೇಮಕ್ಕೆ ತಿರುಗಿದ್ದು, ಆತನೊಂದಿಗೆ ಜೀವಿಸುವ ಸಲುವಾಗಿ ತನ್ನ 4 ಮಕ್ಕಳೊಂದಿಗೆ ಮೇ ತಿಂಗಳಿನಲ್ಲಿ ನೇಪಾಳದ ಮೂಲಕ ಭಾರತ ಪ್ರವೇಶಿಸಿದ್ದಳು. ಆನಂತರ ಉತ್ತರಪ್ರದೇಶದ ಲಕ್ನೋ ತಲುಪಿ ತನ್ನ ಗೆಳೆಯ ಸಚಿನ್ ನನ್ನು ಸೇರಿಕೊಂಡಿದ್ದಳು. ಈಗ ಈ ಇಂಡೋ -ಪಾಕ್ ಜೋಡಿಯು ಉತ್ತರ ಪ್ರದೇಶದ ಗೌತಮ್ ಬುದ್ಧನಗರ ಜಿಲ್ಲೆಯ ಗ್ರೇಟರ್ ನೋಯ್ಡಾದಲ್ಲಿ ವಾಸಿಸುತ್ತಿದ್ದು, ಇದೀಗ ಅವರ ಪ್ರೀತಿಯ ಬಗ್ಗೆ ಜನರಿಗೆ ಅನುಮಾನಗಳು ಕಾಡಿವೆ. ಆಕೆ ಅನುಮಾನ ಪೊಲೀಸರಿಗೆ. ಅದಕ್ಕಾಗೇ ಮುನ್ನೆಚ್ಚರಿಕೆ.
