Home » Wrestlers withdraw protest: ಜೂನ್ 15 ರವರೆಗೂ ಧರಣಿ ಸ್ಥಗಿತಗೊಳಿಸಿದ ಕುಸ್ತಿ ಪಟುಗಳು, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸಂಧಾನ ಸಫಲ

Wrestlers withdraw protest: ಜೂನ್ 15 ರವರೆಗೂ ಧರಣಿ ಸ್ಥಗಿತಗೊಳಿಸಿದ ಕುಸ್ತಿ ಪಟುಗಳು, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸಂಧಾನ ಸಫಲ

by ಹೊಸಕನ್ನಡ
0 comments
Wrestlers withdraw protest

Wrestlers withdraw protest: ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್​​ (Brij Bhushan Sharan Singh) ಬಂಧನ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟು ಪ್ರತಿಭಟಿಸುತ್ತಿದ್ದ ಕುಸ್ತಿಪಟುಗಳೊಂದಿಗಿನ ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್ (Sports Minister Anurag Thakur) ಸಭೆ ಯಶಸ್ಸು ಕಂಡಿದೆ.

ಬ್ರಿಜ್ ಭೂಷಣ್ ಸಿಂಗ್​ ರವರ ಬಂಧನಕ್ಕೆ ಒತ್ತಾಯಿಸಿ ಹಲವು ವಾರಗಳಿಂದ ಧರಣಿ.ನಡೆಸುತ್ತಿರುವ ಖ್ಯಾತನಾಮ ಕುಸ್ತಿಪಟುಗಳ ಧರಣಿಗೆ (Wrestlers withdraw Protest) ನಿನ್ನೆಯಿಂದ ತಾತ್ಕಾಲಿಕ ವಿರಾಮ ಸಿಕ್ಕಿದೆ. ಪ್ರತಿಭಟನೆಯಲ್ಲಿ ತೊಡಗಿಕೊಂಡ ಹಲವು ಕುಸ್ತಿಪಟುಗಳೊಂದಿಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ (Central Sports Minister Anurag Thakur) ಸುದೀರ್ಘ ಮಾತುಕತೆ ನಡೆಸಿದರು. ಅವರು ಸಕಾರಾತ್ಮಕ ಭರವಸೆ ನೀಡಿರುವ ಪರಿಣಾಮ, ಒಂದು ವಾರಗಳ ಕಾಲ ಈ ಧರಣಿಯನ್ನು ಹಿಂದಕ್ಕೆ ಪಡೆಯಲಾಗಿದೆ.
ಹಾಗಾಗಿ ಜೂನ್​ 15 ರವರೆಗೆ ಪ್ರತಿಭಟನೆ ರದ್ದಾಗಿದೆ.

ಕ್ರೀಡಾ ಸಚಿವರ ಆಹ್ವಾನ ನೀಡಿದ್ದರ ಪರಿಣಾಮ ಮಾತುಕತೆಗೆ ಕುಸ್ತಿಪಟುಗಳು ತೆರಳಿದ್ದರು. ಈ ವೇಳೆ ಕ್ರೀಡಾಪಟುಗಳು ಹಲವು ಬೇಡಿಕೆಗಳ್ನು ಮುಂದಿಟ್ಟಿದ್ದರು. ನಿನ್ನೆ ಕ್ರೀಡಾಪಟುಗಳ ಭೇಟಿಯ ವೇಳೆ, ಜೂನ್ 15 ರೊಳಗೆ ಬ್ರಿಜ್ ಭೂಷಣ್ ಸಿಂಗ್​ ವಿರುದ್ಧದ ತನಿಖೆ ಮುಕ್ತಾಯಗೊಳ್ಳಲಿದೆ ಎಂದು ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಅವರು ಭರವಸೆ ನೀಡಿದ್ದಾರೆ. ಹಾಗಾಗಿ ಕುಸ್ತಿಪಟುಗಳು ಜೂನ್ 15 ರ ತನಕ ಪ್ರತಿಭಟನೆ ನಡೆಸದಿರಲು ನಿರ್ಧರಿಸಿದ್ದಾರೆ.

ಆದರೆ, ಕ್ರೀಡಾ ಸಚಿವರ ಮುಂದಿಟ್ಟ ಕ್ರೀಡಾಳುಗಳು ಮುಂದಿಟ್ಟ ಬೇಡಿಕೆಗಳ ಪೈಕಿ ಪ್ರಮುಖವಾದದ್ದು ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಜೈಲಿಗೆ ಹೋಗುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವ ಮಾತೇ ಎಂದು ಖಡಕ್​ ನಿರ್ಧಾರ. ಬ್ರಿಜ್ ಭೂಷಣ್ ವಿರುದ್ಧದ ತನಿಖೆ ಮುಗಿಯಲಿದೆ. ಚಾರ್ಜ್‌ಶೀಟ್ ಕೂಡ ಜೂನ್ 15ಕ್ಕೆ ಸಲ್ಲಿಕೆ ಆಗಲಿದೆ. ಜೂನ್ 15ರೊಳಗೆ ಕಾನೂನು ರೀತಿಯಲ್ಲಿ ಏನೇ ಇದ್ದರೂ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಅನುರಾಗ್ ಠಾಕೂರ್ ಭರವಸೆ ಕೊಟ್ಟಿದ್ದಾರೆ. ಈಗ ಲಭ್ಯವಿರುವ ಮಾಹಿತಿಯ ಪ್ರಕಾರ ಕುಸ್ತಿಪಟುಗಳ ಬಳಿ ಬ್ರಿಜ್ ಭೂಷಣ್ ವಿರುದ್ದವಾಗಿ ಯಾವುದೇ ಸೂಕ್ತ ಸಾಕ್ಷಿಗಳಿಲ್ಲ. ತಾಂತ್ರಿಕ ಸಾಕ್ಷಿಗಳಾಗಲೀ, ಘಟನೆಯನ್ನು ನೋಡಿದ ಭೌತಿಕ ಸಾಕ್ಷಿಗಳಾಗಲೀ ಇಲ್ಲ. ಅದುವೇ ಬ್ರಿಜ್ ವಿರುದ್ಧ ಕೇಸು ದಾಖಲಿಸಿ ಆತನನ್ನು ಬಂಧಿಸಲು ತೊಡಕಾಗಿರೋದು. ಏನೇನೂ ಸಾಕ್ಷಿಗಳು ಇಲ್ಲದೆ ಹೋದರೆ, ಒಂದು ವೇಳೆ ಬಂಧಿಸಿದರೂ, ಆಗ ಕೇಸು ಉಲ್ಟಾ ಹೊಡೆಯುತ್ತದೆ. ಪೊಲೀಸರ ಅಥವಾ ಬಂಧನದ ವಿರುದ್ಧವೇ ಪ್ರಕರಣ ದಾಖಲು ಮಾಡಬಹುದು. ಯಾಕೆಂದರೆ ಬ್ರಿಜ್ ಭೂಷಣ್ ಏನೂ ಕಾನೂನು ಅರಿಯದ ಸಾಮಾನ್ಯ ವ್ಯಕ್ತಿಯಲ್ಲ. ಬಿಜೆಪಿ ಸಂಸದ ಕೂಡಾ ಆಗಿರುವ ಬ್ರಿಜ್ ಭೂಷಣ್ ತುಂಬಾ ಪವರ್ ಫುಲ್ ವ್ಯಕ್ತಿ.

ಪ್ರಕರಣ ವಾಪಸ್​ ಪಡೆಯಿರಿ ಎಂದ ಪ್ರತಿಭಟನಾಕಾರರು

ನೂತನ ಸಂಸತ್ ಭವನದ ಉದ್ಘಾಟನೆಯ ದಿನ, ಮೇ 28 ರಂದು ಪ್ರತಿಭಟನಾಕಾರರು, ನೂತನ ಸಂಸತ್​ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ಘಟನೆಗೆ ಸಂಬಂಧಿಸಿ ದೆಹಲಿ ಪೊಲೀಸರು ಕುಸ್ತಿಪಟುಗಳನ್ನು ಬಂಧಿಸಿ, ಬಳಿಕ ಎಫ್​ಐಆರ್​​ ದಾಖಲಿಸಲಾಗಿತ್ತು. ನಮ್ಮ ಮೇಲೆ ಅಂದು ದಾಖಲಿಸಿದ್ದ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಕುಸ್ತಿಪಟುಗಳು ಸಚಿವರಲ್ಲಿ ಕೇಳಿಕೊಂಡಿದ್ದು, ಅದಕ್ಕೆ ಕ್ರೀಡಾ ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಮಹಿಳಾ ಕುಸ್ತಿಪಟುಗಳ ಸುರಕ್ಷತೆಗೂ ಆದ್ಯತೆ ನೀಡುವ ಬಗ್ಗೆಯೂ ಭರವಸೆ ನೀಡಿದ್ದಾರೆ. ಆ ಬಳಿಕ ಜೂನ್​ 15 ರವರೆಗೆ ಕುಸ್ತಿಪಟುಗಳು ಧರಣಿ ಕೈಬಿಡುವುದಾಗಿ ನಿರ್ಧರಿಸಿದ್ದಾರೆ.

ಗೃಹ ಸಚಿವರ ಭೇಟಿ ಬಳಿಕ ಚುರುಕು ಪಡೆದುಕೊಂಡ ತನಿಖೆ

ಇತ್ತೀಚೆಗೆ ಸಂತ್ರಸ್ತ ಕುಸ್ತಿಪಟುಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭೇಟಿಯಾಗಿ ಚರ್ಚಿಸಿದ್ದರು. ಆದರೆ ಆ ಭೇಟಿ ಯಾವುದೇ ಫಲ ನೀಡಲು ವಿಫಲವಾಗಿತ್ತು. ಆದರೆ ಗೃಹ ಸಚಿವರು ಸೂಕ್ತ ತನಿಖೆ ನಡೆಸುತ್ತೇನೆ ಎಂದು ಭರವಸೆ ನೀಡಿದ್ದರೂ, ಕುಸ್ತಿಪಟುಗಳು ತಮ್ಮ ಪ್ರತಿಭಟನೆಯಿಂದ ಹಿಂದೆ ಸರಿದಿರಲಿಲ್ಲ. ಈ ಮಧ್ಯ ಬ್ರಿಜ್ ಭೂಷಣ್ ವಿರುದ್ಧದ ತನಿಖೆ ಬಿರುಸಾಗಿದೆ ಎನ್ನಲಾಗಿದೆ. ಈಗಾಗಲೇ ತಿಳಿಸಿರುವಂತೆ ಯಾವುದೇ ಸೂಕ್ತ ಸಾಕ್ಷಾಧಾರಗಳು ಈತನಕ ದೊರೆತಿಲ್ಲ .ಆದುದರಿಂದ ತನಿಖೆಯ ವೇಗಕ್ಕೆ ಅಡ್ಡಿಯಾಗುತ್ತಿದೆ. ಆರೋಪಿ ಸಂಸದ ಬ್ರಿಜ್ ಭೂಷಣ್.ನ ವಿವಿಧ ನೌಕರರು, ಮನೆ ಕೆಲಸದವರು ಮತ್ತು ಸಹವರ್ತಿಗಳ ಜೊತೆ ಪೊಲೀಸರು ಸಂವಾದ ನಡೆಸಿದ್ದಾರೆ. ತಮ್ಮ ನೌಕರರ ಜೊತೆ ಬ್ರಿಜ್ ಭೂಷಣ್ ಯಾವ ರೀತಿ ನಡೆದುಕೊಳ್ಳುತ್ತಾರೆ ಎನ್ನುವ ಬಗ್ಗೆ ಪೊಲೀಸ್ ತಂಡ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Shilpa Shetty Birthday: 48ರ ಹರೆಯದಲ್ಲೂ ಚಿರಯೌವ್ವನೆ ಶಿಲ್ಪಾ ಶೆಟ್ಟಿ ! ಕೋಟಿ ಕೋಟಿಯ ಒಡತಿ ಈ ಸುಂದರಿ ಈ ಒಂದು ಕೆಲಸ ಮಾಡಲು ಈಗಲೂ ಹೆದರುತ್ತಾರೆ, ಏನದು?

You may also like

Leave a Comment