Kitchen Hacks: ಅಡುಗೆ ಮಾಡಿ ತಿನ್ನುವುದಕ್ಕಿಂತ ಪಾತ್ರ ತೊಳೆಯುವುದು ದೊಡ್ಡ ಕೆಲಸವಾಗುತ್ತೆ. ಪಾತ್ರೆ ತೊಳೆಯಲು
ಅನೇಕ ರೀತಿಯ ಪಾತ್ರೆ ಬ್ರಷ್ಗಳನ್ನು ಬಳಸುತ್ತೇವೆ. ಆದರೂ ಪಾತ್ರೆ ತೊಳೆಯುವಲ್ಲಿ ಸೋತು ಹೋಗುತ್ತೇವೆ.
ಸಾಮಾನ್ಯವಾಗಿ ಅಡುಗೆ ಮಾಡಲು ಪ್ಯಾನ್ ಅನ್ನು ಬಳಸಲಾಗುತ್ತದೆ. ಎಲ್ಲಾ ರೀತಿಯ ಆಹಾರ ಬೇಯಿಸಿದ ನಂತರ ಪ್ಯಾನ್ ಸೀದು ಹೋಗುವುದು ಮತ್ತು ಎಣ್ಣೆ ಅಂಟಿಕೊಂಡು ಜಿಡ್ಡು ಅಂಟಿಕೊಳ್ಳುವುದು ಸಹಜ. ಆದರೆ ಇದನ್ನು ಹೋಗಲಾಡಿಸುವುದು ಸುಲಭದ ಮಾತಲ್ಲ. ಸೀದು ಹೋದ ಕಲೆ ತೆಗೆದು ಹಾಕಲು ಸಾಕಷ್ಟು ಕಷ್ಟಪಡಬೇಕಾಗಿರುತ್ತದೆ. ಆದರೆ ಇನ್ಮುಂದೆ ಮಹಿಳೆಯರಿಗಂತೂ ಪಾತ್ರೆ ತೊಳೆಯುವ ಟೆನ್ಷನ್ ಇಲ್ಲ ಬಿಡಿ. ಹೌದು, ಕೆಲವು ಗೃಹೋಪಯೋಗಿ ವಸ್ತುಗಳನ್ನು ಬಳಸಿ ನೀವು ಸುಲಭವಾಗಿ ಪ್ಯಾನ್ ಅನ್ನು ಸ್ವಚ್ಛಗೊಳಿಸಬಹುದು.
ಪ್ಯಾನ್ ಮೇಲಿನ ಸೀದು ಹೋದ ಕಲೆಗಳನ್ನು ಸ್ವಚ್ಛಗೊಳಿಸಲು ನಿಂಬೆ, ಉಪ್ಪು ಮತ್ತು ಬಿಸಿನೀರಿನ ಅಗತ್ಯವಿರುತ್ತದೆ. ಮೊದಲಿಗೆ, ಪೇಪರ್ ಟವೆಲ್ನಿಂದ ಪ್ಯಾನ್ ಅನ್ನು ಸ್ವಚ್ಛಗೊಳಿಸಿ. ನಂತರ ಅದರ ಮೇಲೆ ಉಪ್ಪನ್ನು ಹಚ್ಚಿ 10 ನಿಮಿಷಗಳ ಕಾಲ ಬಿಡಿ. ಬಳಿಕ ನಿಂಬೆಯನ್ನು ಎರಡು ಹೋಳುಗಳಾಗಿ ಕತ್ತರಿಸಿ. ಆ ಸ್ಲೈಸ್ನಿಂದ ಪ್ಯಾನ್ ಅನ್ನು ಚೆನ್ನಾಗಿ ಉಜ್ಜಿ. ಪ್ಯಾನ್ ಅನ್ನು ಸ್ಕ್ರಬ್ ಮಾಡಿದ ನಂತರ, ಅದನ್ನು ಬಿಸಿ ನೀರಿನಿಂದ ತೊಳೆಯಿರಿ. ಕೊನೆಗೆ ಸಾಮಾನ್ಯ ಡಿಶ್ ವಾಶಿಂಗ್ ಡಿಟರ್ಜೆಂಟ್ನೊಂದಿಗೆ ಪ್ಯಾನ್ ಅನ್ನು ಚೆನ್ನಾಗಿ ಉಜ್ಜಿ. ಹೀಗೆ ಮಾಡುವುದರಿಂದ ಪ್ಯಾನ್ ಸ್ವಚ್ಛವಾಗಿರುತ್ತದೆ.
ನೀವು ಪ್ಯಾನ್ ಮೇಲಿನ ಸೀದು ಹೋದ ಕಲೆಯನ್ನು ಸುಲಭವಾಗಿ ಸ್ವಚ್ಛಗೊಳಿಸಲು 2 ರಿಂದ 3 ಟೇಬಲ್ ಸ್ಪೂನ್ ಶಾಂಪೂ ಹಾಕಿ. ನಂತರ ಅದರ ಮೇಲೆ ಒಂದು ಕಪ್ ಬಿಸಿ ನೀರನ್ನು ಸುರಿಯಿರಿ. ಹಳೆಯ ಮಣ್ಣಿನ ದೀಪದ ಪುಡಿಯನ್ನು ತೆಗೆದುಕೊಂಡು ಅದನ್ನು ಪ್ಯಾನ್ ಮೇಲಿನ ಸೀದು ಹೋದ ಕಲೆ ಹೊರಬರುವವರೆಗೆ ಪ್ಯಾನ್ ಅನ್ನು ಉಜ್ಜಿ. ನಂತರ ಸೀದು ಹೋದ ಕಲೆ ಹೋದ ಬಳಿಕ ಪ್ಯಾನ್ ಅನ್ನು ಲಿಕ್ವಿಡ್ ವಾಶ್ ಅಥವಾ ಸಾಮಾನ್ಯ ಸೋಪ್ನಿಂದ ಸ್ಕ್ರಬ್ ಮಾಡಬೇಕು. ಆಗ ಪ್ಯಾನ್ ಕಲೆ ಮಾಯ.
ನಿಂಬೆ ಮತ್ತು ಅಡಿಗೆ ಸೋಡಾದ ಸಹಾಯದಿಂದ ಕೂಡ ನೀವು ಪ್ಯಾನ್ ಅನ್ನು ಸ್ವಚ್ಛಗೊಳಿಸಬಹುದು. ಇದಕ್ಕಾಗಿ, 1 ನಿಂಬೆ ರಸ, 1 ಚಮಚ ಅಡಿಗೆ ಸೋಡಾ ಮತ್ತು ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಒಂದು ಬಟ್ಟಲಿನಲ್ಲಿ ಅಡಿಗೆ ಸೋಡಾ ಮತ್ತು ಬಿಸಿ ನೀರನ್ನು ಮಿಕ್ಸ್ ಮಾಡಿ ಗಟ್ಟಿ ಪೇಸ್ಟ್ ಮಾಡಿ. ನಂತರ ಈ ಪೇಸ್ಟ್ ಅನ್ನು ಪ್ಯಾನ್ಗೆ ಹಚ್ಚಿ, 15 ನಿಮಿಷಗಳ ಕಾಲ ಬಿಡಿ. ಸ್ವಲ್ಪ ಸಮಯದ ನಂತರ ಪ್ಯಾನ್ ಅನ್ನು ನಿಂಬೆಯೊಂದಿಗೆ ಉಜ್ಜಿ ಮತ್ತೆ ಬಿಸಿ ನೀರಿನಿಂದ ತೊಳೆಯಿರಿ.
