Home » Shobha Karandlaje: ಚಾಮುಂಡಿ ಬೆಟ್ಟದ 1,008 ಮೆಟ್ಟಲು ಸವೆಸಿದ ಶೋಭಾ ಕರಂದ್ಲಾಜೆ ! ಅದ್ಯಾವ ಇಷ್ಟಾರ್ಥ ಸಿದ್ಧಿಗೆ ನಡೆಯಿತು ಈ ಪ್ರಾರ್ಥನೆ ?

Shobha Karandlaje: ಚಾಮುಂಡಿ ಬೆಟ್ಟದ 1,008 ಮೆಟ್ಟಲು ಸವೆಸಿದ ಶೋಭಾ ಕರಂದ್ಲಾಜೆ ! ಅದ್ಯಾವ ಇಷ್ಟಾರ್ಥ ಸಿದ್ಧಿಗೆ ನಡೆಯಿತು ಈ ಪ್ರಾರ್ಥನೆ ?

0 comments

Shobha Karandlaje: ಆಷಾಢ ಶುಕ್ರವಾರದಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ (Shobha ) ಅವರು ಚಾಮುಂಡಿ ಬೆಟ್ಟದ 1,008 ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನ ಪಡೆದಿದ್ದಾರೆ. ಅಷ್ಟೇ ಅಲ್ಲ ದೇವರ ಬಳಿ ವಿಶೇಷ ಕೋರಿಕೆ ಇಟ್ಟಿದ್ದಾರೆ. ಏನದು ಗೊತ್ತಾ? ಮುಂದಿನ ವರ್ಷದ ಆಷಾಢ ಮಾಸ ಬರುವ ವೇಳೆಗೆ 3ನೇ ಬಾರಿ ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿ ಆಗಬೇಕು ಎಂದು ಶೋಭಾ ಕರಂದ್ಲಾಜೆ ಕೇಳಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು 9 ವರ್ಷ ಅಧಿಕಾರ ಪೂರೈಸಿದ್ದಾರೆ. ಈ ದೇಶದ ರಕ್ಷಣೆ, ಅಭಿವೃದ್ಧಿಗೆ ವಿಶ್ವ ಮಟ್ಟದಲ್ಲಿ ಭಾರತದ ಧ್ವಜವನ್ನು ಎತ್ತಿ ಹಿಡಿಯಲು ನರೇಂದ್ರಮೋದಿ ಅವರು ಮತ್ತೊಮ್ಮೆ ಈ ದೇಶದ ಪ್ರಧಾನಿ ಆಗಬೇಕು ಎಂಬ ಕೋರಿಕೆ ಹೊತ್ತು ಚಾಮುಂಡಿ ಬೆಟ್ಟ ಹತ್ತಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯದಲ್ಲಿ ಹಲವು ದುರ್ಘಟನೆಗಳು ನಡೆದಿವೆ. ಜೈನ ಮುನಿಗಳ ಹತ್ಯೆ, ಟಿ. ನರಸೀಪುದಲ್ಲಿ ಯುವಕನ ಹತ್ಯೆ, ಬೆಂಗಳೂರಿನಲ್ಲೂ ಹಲವು ಹತ್ಯೆಗಳಾಗಿವೆ. ಮನುಷ್ಯರ ಜೀವಗಳನ್ನು ಬಲಿ ತೆಗೆದುಕೊಳ್ಳುವ ದುಷ್ಟಶಕ್ತಿಗಳು ತಲೆ ಎತ್ತುತ್ತಿವೆ. ತಾಯಿ ಚಾಮುಂಡೇಶ್ವರಿ ಇಂತಹ ದುಷ್ಟಶಕ್ತಿಗಳನ್ನು ಸಂಹಾರ ಮಾಡಿ, ಭಕ್ತರಿಗೆ ರಕ್ಷಣೆ ಕೊಡಬೇಕು ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ಅವರು ಹೇಳಿದರು.

ಟಿ. ನರಸೀಪುರದಲ್ಲಿ ಹತ್ಯೆಯಾದ ಯುವಕನನ್ನು ಕಾಂಗ್ರೆಸ್‌ ನಾಯಕರ ಜೊತೆಯಲ್ಲಿರುವವರು ಸಂಧಾನಕ್ಕೆ ಕರೆದು ಹತ್ಯೆ ಮಾಡಿದ್ದಾರೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಈಗ ಆ ಕುಟುಂಬಕ್ಕೆ ಆಧಾರವೇ ಇಲ್ಲದಾಗಿದೆ. ಅವರ ಕುಟುಂಬದ ದುಃಖ ಕೇಳೋರು ಯಾರು ಎಂದು ಭಾವುಕ ನುಡಿ ನುಡಿದರು.

ಸದ್ಯ ದೇಶದಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದೆ. ಕೆಲವೆಡೆ ಭಾರೀ ಮಳೆಯಾದರೆ, ಇನ್ನೂ ಕೆಲವೆಡೆ ಭೂಮಿ ಬರಡಾಗಿದೆ. ರಾಜ್ಯದಲ್ಲಿ ಶೇ. 70 ಮಳೆ ಕೊರತೆಯಾಗಿದೆ. ಇನ್ನು ಆರೋಪ, ಪ್ರತ್ಯಾರೋಪವನ್ನು ಬಿಟ್ಟು ಜನರ ಬದುಕನ್ನು ಉಳಿಸಲು ಪ್ರತಿಯೊಬ್ಬರೂ ಮುಂದಾಗಬೇಕಿದೆ. ಪಕ್ಷಾತೀತವಾಗಿ ಎಲ್ಲರೂ ಜನರ ರಕ್ಷಣೆಗೆ ಮುಂದಾಗಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು.

 

ಇದನ್ನು ಓದಿ: Karadi Sanganna: ಬಸ್ಸಲ್ಲಿ ಫ್ರೀ ಬೇಡ, ಪುರುಷ, ಸ್ತ್ರೀ ಇಬ್ರಿಗೂ ಅರ್ಧ ಚಾರ್ಜ್‌ ಮಾಡಿ ಬಿಡಿ: ಬ್ಯೂಟಿಫುಲ್ ಸಲಹೆ ನೀಡಿದ್ದು ಯಾರ್ ಗೊತ್ತಾ ? 

You may also like

Leave a Comment