Snake Viral Video: ಹಾವು ಕಂಡ್ರೆ ಯಾರಿಗೆ ಭಯ ಇಲ್ಲ ಹೇಳಿ. ಎಲ್ಲರೂ ಹಾವು ಅಂದ ತಕ್ಷಣ ಮಾರುದ್ದ ಓಡುತ್ತಾರೆ. ಆದರೆ, ಇಲ್ಲೊಬ್ಬ ಹಾವಿನ ಜೊತೆನೇ ಆಟವಾಡುತ್ತಿದ್ದಾನೆ. ತನ್ನ ಗುಂಗುರು ಕೂದಲಿನಲ್ಲಿ ಪುಟ್ಟದಾದ ಬಿಳಿ ಹಾವಿಗೆ ಆಟವಾಡಲು ಅವಕಾಶ ಕೊಟ್ಟಿದ್ದಾನೆ. ಸದ್ಯ ಈ ವಿಡಿಯೋ ಸಖತ್ ವೈರಲ್ (Snake Viral Video) ಆಗಿದೆ.
ಸಾಕು ನಾಯಿ, ಬೆಕ್ಕಿನ ಜೊತೆಗೆ ಆಟವಾಡುವುದು ಸಾಮಾನ್ಯ. ಆದರೆ, ಹಾವಿನ ಜೊತೆಗೆ ಸರಸ ಸಲ್ಲದು ಅಲ್ಲವೇ?! ಹಾವುಗಳು ವಿಷದಿಂದ ಕೂಡಿದ್ದು, ಮುಟ್ಟಿದರೆ ಕಚ್ಚಿಬಿಡುತ್ತದೆ. ಅಂತಹದ್ರಲ್ಲಿ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಇಲ್ಲೊಬ್ಬ ಹಾವಿನ ಜೊತೆಗೆ ಆಟವಾಡುತ್ತಾ, ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ.
ಹೌದು, ವಿಡಿಯೋದಲ್ಲಿ ಸಣ್ಣದಾದ ತೆಳ್ಳಗಿನ ಬಿಳಿ ಹಾವು ಕಾಣಬಹುದು. ನೋಡಲು ಸುಂದರವಾಗಿರುವ ಈ ಹಾವನ್ನು ವ್ಯಕ್ತಿಯು ತನ್ನ ತಲೆಯ ಮೇಲೆ ಏರಿಸಿಕೊಂಡಿದ್ದಾನೆ. ಆತನ ಗುಂಗುರು ಕೂದಲಿನಲ್ಲಿ ಹಾವು ಹರಿದಾಡುತ್ತಿದೆ. ವ್ಯಕ್ತಿ ಹಾವನ್ನು ಕೂದಲಿನಿಂದ ತೆಗೆಯಲು ಸಾಕಷ್ಟು ಪ್ರಯತ್ನ ಪಡುತ್ತಾನೆ ಆದರೆ ಅವನಿಗೆ ಸಾಧ್ಯವಾಗಲ್ಲ. ಗುಂಗುರು ಕೂದಲಿನಲ್ಲಿ ಹಾವು ಸಿಕ್ಕಿಹಾಕಿಕೊಳ್ಳುತ್ತದೆ. ಆತನ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತದೆ. ಎಷ್ಟು ಎಳೆದರೂ ಹೊರಬರೋದೇ ಇಲ್ಲ.
ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ವಿಭಿನ್ನ ಕಾಮೆಂಟ್ ಮಾಡಿದ್ದಾರೆ. ಹಲವರು ಕೊಂಡಾಡಿದರೆ, ಕೆಲವರು ಆಶ್ಚರ್ಯಚಕಿತರಾಗಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು “ ಈ ವಿಡಿಯೋವನ್ನು 20 ಸಲ ನೋಡಿದೆ, ಆದರೂ ಸಾಕಾಗುತ್ತಿಲ್ಲ” ಎಂದು ಬರೆದಿದ್ದಾರೆ. “ಇಂತಹ ಸುಂದರ ಕೂದಲನ್ನು ಬಿಟ್ಟು ಆಕೆಗೆ ಹೊರಬರಲು ಮನಸ್ಸಿಲ್ಲ” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
