Home » Post office Deposit Scheme: ಪೋಸ್ಟ್ ಆಫೀಸ್ ನಲ್ಲಿ ಬಂದಿದೆ ಭರ್ಜರಿ ಲಾಭ ತರುವ ಹೊಸ ಸ್ಕೀಮ್ – ಕೆಲವೇ ತಿಂಗಳಲ್ಲಿ ಕೈತುಂಬಾ ದುಡ್ಡು ಗುರೂ.. ,ಹೂಡಿಕೆಗಾಗಿ ಮುಗಿಬಿದ್ದ ಜನ !!

Post office Deposit Scheme: ಪೋಸ್ಟ್ ಆಫೀಸ್ ನಲ್ಲಿ ಬಂದಿದೆ ಭರ್ಜರಿ ಲಾಭ ತರುವ ಹೊಸ ಸ್ಕೀಮ್ – ಕೆಲವೇ ತಿಂಗಳಲ್ಲಿ ಕೈತುಂಬಾ ದುಡ್ಡು ಗುರೂ.. ,ಹೂಡಿಕೆಗಾಗಿ ಮುಗಿಬಿದ್ದ ಜನ !!

366 comments
Post office Deposit Scheme

Post office Deposit Scheme: ಅಂಚೆ ಕಛೇರಿಯ ಮೂಲಕ ನಿಮ್ಮ ಹಣವನ್ನು ಸುರಕ್ಷಿತವಾಗಿರಿಸಲು ಉತ್ತಮ ಮಾರ್ಗವಾಗಿದೆ. ಇಲ್ಲಿ ಹಲವಾರು ರೀತಿಯ ಸಣ್ಣ ಉಳಿತಾಯ ಯೋಜನೆಗಳು (Post office Deposit Scheme) ಮತ್ತು FD ಗಳನ್ನು ಹೊಂದಿದೆ. ಮುಖ್ಯವಾಗಿ ಎಸ್‌ಬಿಐಗಿಂತ ಹೆಚ್ಚಿನ ಬಡ್ಡಿಯನ್ನು ನೀಡುವ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ಅಂತಹ ಒಂದು ಯೋಜನೆ ಇದೆ. ಇಲ್ಲಿ ಹೂಡಿಕೆದಾರರು ಈ ಯೋಜನೆಯಲ್ಲಿ 1 ವರ್ಷ, 2 ವರ್ಷ, 3 ವರ್ಷ ಮತ್ತು 5 ವರ್ಷಗಳವರೆಗೆ ಹಣವನ್ನು ಠೇವಣಿ ಮಾಡಬಹುದು.

ಅದರಲ್ಲೂ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ಅಡಿಯಲ್ಲಿ, 5 ವರ್ಷಗಳ ಠೇವಣಿಗಳನ್ನು 7.5 ಪ್ರತಿಶತ ವಾರ್ಷಿಕ ಬಡ್ಡಿಯಲ್ಲಿ ನೀಡಲಾಗುತ್ತದೆ. ಪ್ರತಿಯೊಬ್ಬರೂ ಈ ಯೋಜನೆಯ ಲಾಭವನ್ನು ಪಡೆಯಬಹುದು. ಇದರಲ್ಲಿ 1-3 ವರ್ಷ ಹೂಡಿಕೆ ಮಾಡಿದರೆ ಶೇ.6.90 ಬಡ್ಡಿ ಸಿಗುತ್ತದೆ. ಇದಲ್ಲದೇ 5 ವರ್ಷ ಠೇವಣಿ ಇಟ್ಟರೆ ಶೇ.7.5 ಬಡ್ಡಿ ಸಿಗುತ್ತದೆ. ಹೂಡಿಕೆದಾರರು ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಮತ್ತು ಶೇಕಡಾ 7.5 ರ ಬಡ್ಡಿಯನ್ನು ಗಳಿಸಿದರೆ, ಅವರ ಹಣ ದ್ವಿಗುಣಗೊಳ್ಳಲು ಸುಮಾರು 9 ವರ್ಷ ಮತ್ತು 6 ತಿಂಗಳುಗಳು ಅಥವಾ 114 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ.

ಈ ಯೋಜನೆಯು – ಠೇವಣಿ: 5 ಲಕ್ಷಗಳು, ಬಡ್ಡಿ: ಶೇಕಡಾ 7.5, ಮೆಚುರಿಟಿ ಅವಧಿ: 5 ವರ್ಷಗಳು, ಮೆಚ್ಯೂರಿಟಿ ಮೊತ್ತ: ರೂ. 7,24,974, ಬಡ್ಡಿ ಲಾಭ: ರೂ.2,24,974 ನೀಡುತ್ತದೆ.

ಈ ಯೋಜನೆಯು ಟೈಮ್ ಡೆಪಾಸಿಟ್ ಸ್ಕೀಮ್ ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯ ಪ್ರಯೋಜನವನ್ನು ಒದಗಿಸುತ್ತದೆ. ಖಾತೆ ತೆರೆಯುವಾಗ ನಾಮಿನಿಯನ್ನು ಮಾಡುವ ಸೌಲಭ್ಯವೂ ಇದೆ. ಒಂದು ವೇಳೆ ಅವಧಿಪೂರ್ವದಲ್ಲೇ ಠೇವಣಿಯನ್ನು ಹಿಂಪಡೆಯುವುದು ಈ ಯೋಜನೆಯಲ್ಲಿ ದಂಡಕ್ಕೆ ಒಳಪಟ್ಟಿರುತ್ತದೆ.

ಇದನ್ನು ಓದಿ: Infosys,TCS Salary: ದೇಶದ ಈ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗಿಗಳಿಗೆ ಕೊಡೋ ಸಂಬಳ ಎಷ್ಟು ಗೊತ್ತಾ?! ಅಬ್ಬಬ್ಬಾ.. ಕೇಳಿದ್ರೆ ಶಾಕ್ ಆಗ್ತೀರಾ

You may also like

Leave a Comment