Home » ಹುಟ್ಟುಹಬ್ಬದ ದಿನವೇ ನೇಣಿಗೆ ಶರಣಾದ ಉಪನ್ಯಾಸಕಿ | ಡೆತ್ ನೋಟ್ ಪತ್ತೆ

ಹುಟ್ಟುಹಬ್ಬದ ದಿನವೇ ನೇಣಿಗೆ ಶರಣಾದ ಉಪನ್ಯಾಸಕಿ | ಡೆತ್ ನೋಟ್ ಪತ್ತೆ

0 comments

ಆಕೆ ಕಾಲೇಜು ಉಪನ್ಯಾಸಕಿ, ಆದರೆ ಏನಾಯ್ತೋ ಏನೋ ತನ್ನ ಹುಟ್ಟುಹಬ್ಬದಂದೇ ತನ್ನ ಸಾವನ್ನು ತಾನೇ ಬರಮಾಡಿಕೊಂಡಿದ್ದಾಳೆ. ಕಾಲೇಜು ಉಪನ್ಯಾಸಕಿಯೊಬ್ಬರು ಹಾಸ್ಟೆಲ್‌ನಲ್ಲಿ ನೇಣುಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ಸಂಭವಿಸಿದೆ. ಸಾವಿಗೂ ಮುನ್ನ ಆಕೆ ಬರೆದ ಡೆತ್‌ನೋಟ್ ಸಿಕ್ಕಿದೆ.

ಚಂದನಾ(26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಚಂದನಾ, ಚಾಮರಾಜನಗರದ ಜೆಎಸ್ಎಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಅವಿವಾಹಿತೆಯಾಗಿದ್ದ ಚಂದನಾ, ಯಳಂದೂರು ತಾಲ್ಲೂಕು ಅಂಬಳೆ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕ ಮಹದೇವಸ್ವಾಮಿ ಎಂಬುವರ ಪುತ್ರಿ. ಇವರು ನಗರದ ಜೆಎಸ್ಎಸ್ ಕಾಲೇಜಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕಿಯಾಗಿದ್ದರು.

ಇಂದು ಬೆಳಿಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಘಟನೆ ನಡೆದಿರಬಹುದೆಂದು ಹೇಳಲಾಗಿದೆ. ಬೆ. 11.30 ಆದರೂ ಚಂದನಾ ಅವರು ಹಾಸ್ಟೆಲ್ ರೂಮಿನಿಂದ ಹೊರಬಾರದ ಕಾರಣ ವೆಂಟಿಲೇಟರ್ ಮೂಲಕ ನೋಡಿದಾಗ ನೇಣು ಹಾಕಿಕೊಂಡಿರುವುದು ಕಂಡು ಬಂದಿದೆ.

ಇಂದು(ಆ.9) ಅವರ ಬರ್ತ್ ಡೇ. ಈ ದಿನವೇ ಜೆಎಸ್ಎಸ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇಂದು ಅವರ ಜನ್ಮದಿನವಾಗಿದ್ದು ಹಾಸ್ಟೆಲ್ ಸಹೋದ್ಯೋಗಿಗಳು ಬೆಳಗ್ಗೆ ಶುಭ ಕೋರಿದ್ದಾರೆ. ತಿಂಡಿಗೆ ಕರೆದಾಗ ನನ್ನ ಮೂಡ್ ಚೆನ್ನಾಗಿಲ್ಲ ಆಮೇಲೆ ಬರುತ್ತೇನೆ ಎಂದು ಹೇಳಿದ್ದಾರೆ. ಕೆಲ ಸಮಯದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಆಕೆಯ ಡೆತ್‌ನೋಟ್ ಪತ್ತೆಯಾಗಿದ್ದು, ‘ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆಯಲಾಗಿದೆ. ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

You may also like

Leave a Comment