Home » ಈ ಐದು ರಾಜ್ಯದ ಗ್ರಾಮೀಣ ಜನತೆಗೆ ಉಜಾಲ ಯೋಜನೆಯಡಿಯಲ್ಲಿ ಸಿಗಲಿದೆ 10 ರೂ.ಗೆ ಎಲ್ ಇಡಿ ಬಲ್ಬ್

ಈ ಐದು ರಾಜ್ಯದ ಗ್ರಾಮೀಣ ಜನತೆಗೆ ಉಜಾಲ ಯೋಜನೆಯಡಿಯಲ್ಲಿ ಸಿಗಲಿದೆ 10 ರೂ.ಗೆ ಎಲ್ ಇಡಿ ಬಲ್ಬ್

0 comments

ನವದೆಹಲಿ : ಕೇಂದ್ರ ಸರ್ಕಾರವು ಗ್ರಾಮೀಣ ಜನತೆಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಗ್ರಾಮ ಉಜಾಲ ಯೋಜನೆಯಡಿಯಲ್ಲಿ ಕರ್ನಾಟಕ ಸೇರಿದಂತೆ ಐದು ರಾಜ್ಯಗಳ ಗ್ರಾಮಗಳಲ್ಲಿ 10 ರೂ.ಗೆ ರಿಯಾಯಿತಿ ದರದಲ್ಲಿ ಎಲ್ ಇಡಿ ಬಲ್ಬ್ ವಿತರಿಸಲಿದೆ.

ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಅಂಗವಾಗಿ ಡಿಸೆಂಬರ್ 14ರಿಂದ ಕೇಂದ್ರ ಸರ್ಕಾರ ಕರ್ನಾಟಕ ಸೇರಿದಂತೆ 5 ರಾಜ್ಯಗಳ ಗ್ರಾಮಗಳಲ್ಲಿ 10 ರೂ. ರಿಯಾಯಿತಿ ದರದಲ್ಲಿ ಎಲ್ ಇಡಿ ಬಲ್ಬ್ ಅನ್ನು ವಿತರಿಸಲಿದೆ. ಈ ಯೋಜನೆಯಡಿ ಕರ್ನಾಟಕ, ಆಂಧ್ರಪ್ರದೇಶ,ತೆಲಂಗಾಣ ಸೇರಿ 5 ರಾಜ್ಯಗಳಲ್ಲಿ ಒಟ್ಟು 2,579 ಹಳ್ಳಿಗಳಲ್ಲಿ ಬಲ್ಬ್ ಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಿದೆ.ಎಲ್ ಇಡಿ ಬಲ್ಪ್ ಮೂರು ವರ್ಷ ಗ್ಯಾರಂಟಿವುಳ್ಳ 7 ವ್ಯಾಟ್ ಹಾಗೂ 12 ವ್ಯಾಟ್ ಸಾಮಾರ್ಥ್ಯ ಹೊಂದಿದ್ದು, ಬಲ್ಪ್ ಗಳನ್ನು ಸರ್ಕಾರಿ ಸ್ವಾಮ್ಯದ ಸಿ.ಎಸ್.ಇ.ಎಲ್ ಕಂಪನಿ ಒದಗಿಸಲಿದೆ.

You may also like

Leave a Comment