Home » ‘ಲವ್ ಜಿಹಾದಿ’ನ ಇನ್ನೊಂದು ಘಟನೆ ಬಹಿರಂಗ | ಹಿಂದೂ ಹುಡುಗಿಯ ಅಪಹರಣ ಮಾಡಿ ಆಕೆಯ ಮತಾಂತರ, ಕೂಡಲೇ ಮದುವೆ

‘ಲವ್ ಜಿಹಾದಿ’ನ ಇನ್ನೊಂದು ಘಟನೆ ಬಹಿರಂಗ | ಹಿಂದೂ ಹುಡುಗಿಯ ಅಪಹರಣ ಮಾಡಿ ಆಕೆಯ ಮತಾಂತರ, ಕೂಡಲೇ ಮದುವೆ

0 comments

ಲವ್ ಜಿಹಾದ್ ಪ್ರಕರಣ ಈಗ ಎಲ್ಲಾ ಕಡೆ ನಡೆಯುತ್ತಲೇ ಇದೆ. ಎಷ್ಟೇ ಮುನ್ನೆಚ್ಚರಿಕೆ ಕೊಟ್ಟರೂ ಈ ಕೆಲಸ ಮಾಡುವ ಮತಾಂಧರರಿಗೆ ಕಮ್ಮಿ ಏನೂ ಇಲ್ಲ.

ಉತ್ತರಪ್ರದೇಶದಲ್ಲಿ ಲವ್ ಜಿಹಾದಿನ ಕಾನೂನು ಇರುವಾಗಲೂ ಉದ್ಧಟ ಮತಾಂಧರು ಹಿಂದೂ ಹುಡುಗಿಯರನ್ನು ಸಿಲುಕಿಸುತ್ತಿದ್ದಾರೆ.

ಉತ್ತರಪ್ರದೇಶದ ಫತೇಹಪೂರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಹಿಂದೂ ಹುಡುಗಿ ( 18 ವರ್ಷ) ಯನ್ನು ಮತಾಂಧ ವ್ಯಕ್ತಿಯೋರ್ವ ಅಪಹರಣ ಮಾಡಿ, ಬಾಂದಾ ಜಿಲ್ಲೆಯಲ್ಲಿನ ಮಸೀದಿಗೆ ಕರೆದುಕೊಂಡು ಹೋಗಿ, ಅಲ್ಲಿ ಮೌಲ್ವಿಯ ಬಲವಂತದಿಂದ ಆಕೆಯನ್ನು ಮತಾಂತರ ಮಾಡಿ, ನಂತರ ಓರ್ವ ತರುಣನೊಂದಿಗೆ ಆಕೆಯ ವಿವಾಹ ಮಾಡಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಹುಡುಗಿಯ ತಂದೆಯು ನೀಡಿದ ದೂರಿನ ಅನುಸಾರ ಪೊಲೀಸರು ಹುಡುಗಿಯನ್ನು ತಂದೆ ತಾಯಿಯರ ವಶಕ್ಕೆ ಕೊಟ್ಟಿದ್ದು, ಆರೋಪಿ ಸಾಬಿರ ಮಿರ್ಝಾನನ್ನು ಬಂಧಿಸಿದ್ದಾರೆ.

ಮಾರ್ಚ್ 31, 2022ರಂದು ಪರೀಕ್ಷೆಗೆಂದು ಮನೆಯಿಂದ ಹೊರಟಿದ್ದ ಹುಡುಗಿಯನ್ನು, ಆಕೆ ಮನೆಗೆ ವಾಪಾಸು ಬರುವಾಗ ಆಕೆಯನ್ನು ಅಪಹರಿಸಿ ಈ ಕೃತ್ಯ ನಡೆಸಲಾಗಿದೆ ಎಂದು ಹುಡುಗಿಯ ತಂದೆ ಗಾಝೀಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ತಮ್ಮ ಮಗಳಿಗೆ ಆಮಿಷವೊಡ್ಡಿ ಅಪಹರಿಸಿರುವ ಸಾಧ್ಯತೆಯನ್ನು ಅವರು ದೂರಿನಲ್ಲಿ ವ್ಯಕ್ತಪಡಿಸಿದ್ದರು.

You may also like

Leave a Comment