Home » ಪ್ರಿಯತಮೆಯನ್ನು ವಸತಿಗೃಹದಲ್ಲಿ ಬರ್ಬರವಾಗಿ ಹತ್ಯೆಗೈದ ಪ್ರಿಯಕರ, ನಂತರ ಪೊಲೀಸರಿಗೆ ಶರಣು!!!

ಪ್ರಿಯತಮೆಯನ್ನು ವಸತಿಗೃಹದಲ್ಲಿ ಬರ್ಬರವಾಗಿ ಹತ್ಯೆಗೈದ ಪ್ರಿಯಕರ, ನಂತರ ಪೊಲೀಸರಿಗೆ ಶರಣು!!!

by Mallika
0 comments
Murder

Murder: ಪ್ರೇಮಿಗಳ ಜಗಳದಿಂದ ಕೊಲೆಯೇ ನಡೆದು ಹೋಗಿರುವ ಘಟನೆಯೊಂದು ಮಂಗಳವಾರ ಕಾಇಂಗಾಡ್‌ನಲ್ಲಿ ನಡೆದಿದೆ. ಬ್ಯೂಟಿಶಿಯನ್‌ರೋರ್ವಳನ್ನು ಈಕೆಯ ಪ್ರಿಯಕರನೆನ್ನಲಾದ ಯುವಕನೋರ್ವ ವಸತಿಗೃಹದಲ್ಲಿ ಕೊಲೆಗೈದ (Murder) ಘಟನೆ ನಡೆದಿದೆ. ಕೃತ್ಯ ನಡೆಸಿದ ಬಳಿಕ ಯುವಕ ಹೊಸದುರ್ಗ ಪೊಲೀಸ್‌ ಠಾಣೆಗೆ ಶರಣಾಗಿದ್ದಾನೆ. ಬೋವಿಕ್ಕಾನದ ಸತೀಶ್‌ ಭಾಸ್ಕರ್‌ (36) ಎಂಬಾತನೇ ಕೊಲೆಗೈದ ಆರೋಪಿ.

ಉದುಮ ಮಾಂಗಾಡ್‌ನ ದೇವಿಕಾ (34)ಹತ್ಯೆಗೀಡಾದ ಯುವತಿ.

ಯುವಕ ಖಾಸಗಿ ಸಂಸ್ಥೆಯಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದು, ಇವರಿಬ್ಬರ ಮಧ್ಯೆ ಸ್ನೇಹ ಬೆಳೆದಿದೆ. ನಂತರ ಉಂಟಾದ ವೈಮನಸ್ಸೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಇಬ್ಬರ ನಡುವೆ ಕೌಟುಂಬಿಕ ಸಮಸ್ಯೆ ಉಂಟಾಗಿದ್ದು, ದೇವಿಕಾ ವಿರುದ್ಧ ಸತೀಶ್‌ ಭಾಸ್ಕರ್‌ ನ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಹಾಗಾಗಿ ಮೇಲ್ಪರಂಬ ಠಾಣಾ ಪೊಲೀಸರು ಎರಡು ಕುಟುಂಬದವರನ್ನು ಕರೆದು ಮಾತುಕತೆ ಮಾಡಿದ್ದರು.

ಸತೀಶ್‌ ಒಂದು ವಾರದಿಂದ ವಸತಿಗೃಹದಲ್ಲಿ ವಾಸವಿದ್ದು, ಇದರ ಮಧ್ಯೆ ಮಧ್ಯಾಹ್ನ ದೇವಿಕಾಳನ್ನು ವಸತಿಗೃಹಕ್ಕೆ ಕರೆದು, ನಂತರ ಈ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಸೋಲು : ಬಿಜೆಪಿಯಿಂದ ಆತ್ಮವಲೋಕನ ಗುಪ್ತ ಸಭೆ, ಕಾರ್ಯಕರ್ತರಿಂದ ಆಕ್ರೋಶ

You may also like

Leave a Comment