Home » Death News: ಶಾಲೆಯಲ್ಲೇ 9ನೇ ತರಗತಿ ವಿದ್ಯಾರ್ಥಿಗೆ ಹೃದಯಾಘಾತ- ಕುಸಿದು ಬಿದ್ದು ಸ್ಥಳದಲ್ಲೇ ಸಾವು !

Death News: ಶಾಲೆಯಲ್ಲೇ 9ನೇ ತರಗತಿ ವಿದ್ಯಾರ್ಥಿಗೆ ಹೃದಯಾಘಾತ- ಕುಸಿದು ಬಿದ್ದು ಸ್ಥಳದಲ್ಲೇ ಸಾವು !

1 comment
Lucknow

Lucknow: ಇತ್ತೀಚೆಗೆ ಹೃದಯಾಘಾತದಿಂದ (Heartattack) ಸಾವನ್ನಪ್ಪುತ್ತಿರುವ (Death News)ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ಅದರಲ್ಲಿಯೂ ಹದಿಹರೆಯದವರಿಗೆ ಕೂಡ ಹೃದಯಾಘಾತ ಕಂಡು ಬರುತ್ತಿರುವುದು ಆತಂಕದ ಬೆಳವಣಿಗೆಯಾಗಿದೆ. ಇದೇ ರೀತಿಯ ಘಟನೆ ವರದಿಯಾಗಿದ್ದು, ಒಂಬತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ತರಗತಿಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಲಕ್ನೋದ (Luknow)ಅಲಿಗಂಜ್ನಲ್ಲಿರುವ ಸಿಟಿ ಮಾಂಟೆಸ್ಸರಿ ಶಾಲೆಯಲ್ಲಿ ವರದಿಯಾಗಿದೆ.

ತಕ್ಷಣವೇ ವಿದ್ಯಾರ್ಥಿಯ ಎದೆಯ ಭಾಗವನ್ನು ಒತ್ತಲು ಪ್ರಯತ್ನಿಸಲಾಗಿದ್ದು, ಇತರ ಮಕ್ಕಳು ಕೂಡ ನದೀಮ್ ಕೈಕಾಲುಗಳನ್ನು ಒತ್ತಿ ನೀರು ಕುಡಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೂ ಕೂಡ ಅವನಿಗೆ ಪ್ರಜ್ಞೆ ಬಾರದ ಹಿನ್ನೆಲೆ ಹತ್ತಿರದ ನರ್ಸಿಂಗ್ ಹೋಂಗೆ ಕರೆದೊಯ್ದಿದ್ದಾರೆ. ಆದರೆ, ಅಲ್ಲಿ ವೈದ್ಯರು ಬಾಲಕ ಹೃದಯಾಘಾತದಿಂದ ಮೃತಪಟ್ಟಿದ್ದನ್ನು ದೃಢಪಡಿಸಿದ್ದಾರೆ.

ವಿದ್ಯಾರ್ಥಿಯ ಮನೆಯವರಿಗೆ ವಿಚಾರ ತಿಳಿಸಲಾಗಿದ್ದು ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಶಾಲಾ ಆಡಳಿತ ಮಂಡಳಿ ಕೂಡ ವಿಚಾರ ತಿಳಿದು ಆಘಾತಕ್ಕೆ ಒಳಗಾಗಿದೆ. ಈ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸದ್ಯದಲ್ಲೇ ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲಿದೆ.

ಇದನ್ನೂ ಓದಿ: PM Kusum Yojana: ರೈತರೇ ಗಮನಿಸಿ, ಕೇಂದ್ರದ ಈ ಯೋಜನೆ ಮೂಲಕ ನಿಮಗೆ ಸಿಗಲಿದೆ ಭರಪೂರ ಪ್ರಯೋಜನ !!

You may also like

Leave a Comment