Home » ಜ್ವರದಿಂದ ನರಳುತ್ತಿದ್ದ 3 ತಿಂಗಳ ಕಂದಮ್ಮಗೆ ಇಟ್ಟರು 51 ಬಾರಿ ಕಾದ ಕಬ್ಬಿಣದ ಬರೆ! ಪೋಷಕರ ಮೂಢ ನಂಬಿಕೆಗೆ ಜೀವ ತೆತ್ತ ಮಗು!!!

ಜ್ವರದಿಂದ ನರಳುತ್ತಿದ್ದ 3 ತಿಂಗಳ ಕಂದಮ್ಮಗೆ ಇಟ್ಟರು 51 ಬಾರಿ ಕಾದ ಕಬ್ಬಿಣದ ಬರೆ! ಪೋಷಕರ ಮೂಢ ನಂಬಿಕೆಗೆ ಜೀವ ತೆತ್ತ ಮಗು!!!

0 comments

ಕಾಲ ಎಷ್ಟೇ ಬದಲಾದರೂ ಕೂಡ ಜನರ ಮೂಢನಂಬಿಕೆಗಳು ಬದಲಾಗಿಲ್ಲ. ಈಗಲೂ ಎಷ್ಟೋ ಕಡೆ ನರಬಲಿ ತೆರೆಮರೆಯಲ್ಲಿ ನಡೆಯುತ್ತಿವೆ. ಮಧ್ಯಪ್ರದೇಶದಲ್ಲಿ ಪುಟ್ಟ ಮಗುವಿನ ಮೇಲೆ ಕಾದ ಕಬ್ಬಿಣದಿಂದ ಬರೆ ಎಳೆದ ಪರಿಣಾಮ ಮಗು ಸಾವಿನ ಕದ ತಟ್ಟಿದ ಘಟನೆ ವರದಿಯಾಗಿದೆ.

ನ್ಯೂಮೆನಿಯಾದಿಂದ ಬಳಲುತ್ತಿದ್ದಂತಹ 3 ತಿಂಗಳ ಮಗುವಿಗೆ ಕಾದ ಕಬ್ಬಿಣದಿಂದ ಬರೆ ಎಳೆದ ಪರಿಣಾಮ ಮಗು ಸಾವನ್ನಪ್ಪಿದ ಧಾರುಣ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯ ಪ್ರದೇಶದಲ್ಲಿ ನೆಲೆಸಿರುವ ಬುಡಕಟ್ಟು ಕುಟುಂಬದಲ್ಲಿ ನ್ಯೂಮೆನಿಯಾದಿಂದ ಬಳಲುತ್ತಿದ್ದ ಮಗುವಿಗೆ ಕಾದ ಕಬ್ಬಿಣದಿಂದ ಬರೆ ಎಳೆಯಲಾಗಿದೆ. ಈ ಘಟನೆಯನ್ನು ಗಮನಿಸಿದ ಅಂಗನವಾಡಿ ಶಿಕ್ಷಕಿ ಮಗುವಿಗೆ ಈ ರೀತಿ ಚಿಕಿತ್ಸೆ ನೀಡುವ ಬದಲಿಗೆ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಶಾಧೂಲ್ ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, 3 ತಿಂಗಳ ಮಗುವಿಗೆ 51 ಬಾರಿ ಕಾದ ಕಬ್ಬಿಣದಿಂದ ಸುಟ್ಟ ಹಿನ್ನೆಲೆ ಮಗುವಿಗೆ ತುಂಬಾ ನೋವಾಗಿರುವ ಜೊತೆಗೆ ಗಾಯ ಕಡಿಮೆಯಾಗುವ ಬದಲಿಗೆ ಉಲ್ಬಣಗೊಂಡ ಪರಿಣಾಮ ಮಗು ಮೃತಪಟ್ಟಿದೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡ ವಿಕ್ರಾಂತ್ ಭುನಿಯಾ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮಗುವಿನ ಸ್ಥಿತಿ ಗಂಭೀರವಾದ ಬಳಿಕ ಆಸ್ಪತ್ರೆಗೆ ದಾಖಲಿಸಲಾದ ಹಿನ್ನೆಲೆ ವೈದ್ಯರು ಕೂಡ ಏನು ಮಾಡಲಾಗದ ಸ್ಥಿತಿಯಲ್ಲಿದ್ದರು. ಇಷ್ಟೆ ಅಲ್ಲದೆ, ಮಗುವಿನ ದೇಹದ ಹೆಚ್ಚಿನ ಭಾಗಗಳಲ್ಲಿ ಸುಟ್ಟ ಗಾಯಗಳು ಕಂಡುಬಂದಿದ್ದು, ವೈದ್ಯರು ಮಗುವಿನ ಶವವನ್ನು ಪೋಸ್ಟ್ ಮಾರ್ಟಂಗೆ ರವಾನೆ ಮಾಡಿದ್ದು, ಈ ವರದಿ ಕೈ ಸೇರಿದ ತಕ್ಷಣವೇ ಪೊಲೀಸರಿಗೆ ದೂರು ನೀಡಲಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment