Home » Ujjain Rape Case: 12 ವರ್ಷದ ಅಮಾಯಕ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌; ಪ್ರಕರಣದ ಕುರಿತು ದೊಡ್ಡ ಮಾಹಿತಿ ನೀಡಿದ ಎಸ್ಪಿ!!!

Ujjain Rape Case: 12 ವರ್ಷದ ಅಮಾಯಕ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌; ಪ್ರಕರಣದ ಕುರಿತು ದೊಡ್ಡ ಮಾಹಿತಿ ನೀಡಿದ ಎಸ್ಪಿ!!!

by Mallika
0 comments
Ujjain Rape Case

Ujjain Rape Case: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 12 ವರ್ಷದ ಅಮಾಯಕ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ (Ujjain Rape Case)ದೊಡ್ಡ ಅಪ್ಡೇಟ್‌ ಬೆಳಕಿಗೆ ಬಂದಿದೆ. ಈ ಘಟನೆಯ ನಂತರ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿ ಯುಪಿಯ ಪ್ರಯಾಗ್‌ರಾಜ್‌ನವಳಲ್ಲ, ಆಕೆ ಸತ್ನಾ ನಿವಾಸಿ ಎಂದು ಪೊಲೀಸರಿಗೆ ಮಾಹಿತಿ ದೊರಕಿದೆ.

ಈ ಬಾಲಕಿ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿತ್ತು ಎಂದು ಬಾಲಕಿಯ ಮನೆಯವರು ಜೈತ್ವಾರಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಐದು ಮಂದಿ ಆಟೋ ಚಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಇಡೀ ಘಟನೆಯ ವಿಷಯ ಬಹಿರಂಗವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಸೆಪ್ಟೆಂಬರ್ 25 ರಂದು 12 ವರ್ಷದ ಬಾಲಕಿ ಬಾದ್‌ನಗರ ರಸ್ತೆಯ ದಂಡಿ ಆಶ್ರಮದ ಬಳಿ ಪತ್ತೆಯಾಗಿದ್ದಳು. ಈ ವಿಷಯ ತಿಳಿದ ಪೊಲೀಸರು ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದಾಗ, ಅತ್ಯಾಚಾರ ನಡೆದಿರುವುದು ದೃಢಪಟ್ಟಿತ್ತು.

ಬಾಲಕಿ ನಾಪತ್ತೆಯಾದ ಬಳಿಕ ಆಕೆಯ ಮನೆಯವರು ಅಪಹರಣ ಪ್ರಕರಣ ದಾಖಲಿಸಿದ್ದರು. ಇದೀಗ ಪೊಲೀಸರು ಈ ಪ್ರಕರಣದಲ್ಲಿ 5 ಆಟೋ ಚಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆಟೋದಲ್ಲಿ ಕೆಲವು ರಕ್ತದ ಕಲೆಗಳೂ ಪತ್ತೆಯಾಗಿವೆ. ಅದನ್ನೂ ತನಿಖೆಗೆ ಕಳುಹಿಸಲಾಗಿದೆ.

ಬಾಲಕಿಯ ತಾಯಿ ಬಾಲ್ಯದಲ್ಲಿಯೇ ಆಕೆಯನ್ನು ಬಿಟ್ಟು ಹೋಗಿದ್ದರು ಎಂದು ಜೈತ್‌ಪುರ ಪೊಲೀಸ್ ಠಾಣೆಯ ಎಎಸ್‌ಐ ಮನೋಕಾಮ್ನಾ ಪ್ರಸಾದ್ ತಿಳಿಸಿದ್ದಾರೆ. ಅವಳು ತನ್ನ ಅಜ್ಜ ಮತ್ತು ಅಣ್ಣನೊಂದಿಗೆ ವಾಸಿಸುತ್ತಿದ್ದಾಳೆ. ಅಪ್ರಾಪ್ತ ಬಾಲಕಿ ಅಜ್ಜ ಆಡುಗಳನ್ನು ಮೇಯಿಸುತ್ತಾನೆ. ಸೆಪ್ಟೆಂಬರ್ 24 ರಂದು ಬಾಲಕಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಅವರ ಅಜ್ಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ: ಕಾವೇರಿಗಾಗಿ ಕರ್ನಾಟಕ ಬಂದ್ ಹಿನ್ನೆಲೆ!! ಕರಾವಳಿಗೂ ತಟ್ಟಲಿದ್ಯಾ ಬಂದ್ ಬಿಸಿ-ಪ್ರಮುಖರು ಹೇಳಿದ್ದೇನು??

You may also like

Leave a Comment