Hassan : ಕುಡಿದರೆ ಅದೆಷ್ಟೋ ಜನರಿಗೆ ಪ್ರಪಂಚದ ಅರಿವೇ ಇರುವುದಿಲ್ಲ. ಕೆಲವರು ರೋಡ್ ಗಳನ್ನೇ ಮನೆಯಾಗಿಸಿರುತ್ತಾರೆ. ಆದರೆ, ಇಲ್ಲಿ ಕೆಲ ಯುವಕರು ರೋಡ್ ಅನ್ನೇ ಮನೆ ಎಂದುಕೊಂಡಿದ್ದಾರೇನೋ ಎಂಬಂತೆ ವರ್ತಿಸಿದ್ದಾರೆ. ನಶೆಯಲ್ಲಿ ಬೆತ್ತಲೆಯಾಗಿ ರೋಡ್ ಡಾನ್ಸ್ (Dance) ಮಾಡಿದ್ದಾರೆ.
ಹೌದು, ಕೆಲ ಯುವಕರು ಎಣ್ಣೆ ಪಾರ್ಟಿ ಮಾಡಿ ನಂತರ ಜೊತೆಗೇ ಇದ್ದ ಸ್ನೇಹಿತನೊಬ್ಬನನ್ನು ಬೆತ್ತಲೆಗೊಳಿಸಿ ರೋಡ್ ನಲ್ಲಿ ಡ್ಯಾನ್ಸ್ ಮಾಡಿರುವ ಘಟನೆ ಹಾಸನದಲ್ಲಿ (Hassan) ನಡೆದಿದೆ. ಯುವಕರನ್ನು ಹಾಸನದ ಅರಕಲಗೂಡು ಪಟ್ಟಣದ ಸಮೀಪದವರು ಎಂದು ಗುರುತಿಸಲಾಗಿದೆ.
ಬಾರ್’ಗೆ (bar) ಎಣ್ಣೆ ಪಾರ್ಟಿ ಮಾಡಲು ಹೋದ ನಾಲ್ವರು ಯುವಕರು ಕೆಲಹೊತ್ತಿನ ನಂತರ ಕಂಠಪೂರ್ತಿ ಕುಡಿದು ಲೋಕ ಜ್ಞಾನವಿಲ್ಲದ ರೀತಿ ಹೊರಬಂದಿದ್ದಾರೆ. ಅಷ್ಟೇ ಅಲ್ಲ, ತಮ್ಮ ಜೊತೆಗೇ ಇದ್ದ ಸ್ನೇಹಿತನ ಬಟ್ಟೆ ಬಿಚ್ಚಿ ಆತನನ್ನು ಬೆತ್ತಲೆಗೊಳಿಸಿದ್ದಾರೆ. ನಂತರ ಆತನನ್ನು ರಸ್ತೆಯಲ್ಲಿ ಅಟ್ಟಾಡಿಸಿ ಓಡಿಸಿಕೊಂಡು ಹುಚ್ಚಾಟ ಮೆರೆದಿದ್ದಾರೆ.
ಕೊನೆಗೆ ಕುಡಿತದ ಅಮಲಿನಲ್ಲಿ ಬೆತ್ತಲೆಯಾಗಿ ರೋಡ್ ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ (Cc Camera) ಸೆರೆಯಾಗಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಘಟನೆ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ: WhatsApp : ಇನ್ಮುಂದೆ ಕಂಪ್ಲೇಂಟ್ ಕೊಡೋದು ಇನ್ನಷ್ಟು ಸುಲಭ ; ವಾಟ್ಸಪ್ ಮೂಲಕ ಪೊಲೀಸರಿಗೆ ದೂರು ನೀಡಿ !
