Home » ಮಲ್ಪೆ : ಬಂದರಿನ ದಕ್ಕೆಯ ನೀರಿಗೆ ಬಿದ್ದು ಸಾವು!!!

ಮಲ್ಪೆ : ಬಂದರಿನ ದಕ್ಕೆಯ ನೀರಿಗೆ ಬಿದ್ದು ಸಾವು!!!

0 comments

ಮಲ್ಪೆ ಬಂದರಿನ ದಕ್ಕೆಯ ನೀರಿಗೆ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ.

ಮಹಾರಾಷ್ಟ್ರ ರತ್ನಗಿರಿಯ ನಿವಾಸಿಯಾಗಿರುವ ನಿತಿನ್ ಮಲ್ಪೆ ಬಂದರಿನಲ್ಲಿ ನಾಗಾರ್ಜುನ ಕಂಪನಿಯ ಪೈಪ್ ಲೈನ್ ಕಾಮಗಾರಿಯ ಕೆಲಸ ಮಾಡುತ್ತಿದ್ದ. ಈತ ಇತರ ಇಬ್ಬರು ಕಾರ್ಮಿಕರೊಂದಿಗೆ ಸೇರಿ ಈ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಕಣ್ಮರೆಯಾಗಿದ್ದನು.

ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು, ನಿನ್ನೆ ತಡರಾತ್ರಿ 12 ಗಂಟೆಯವರೆಗೆ ಶೋಧಕಾರ್ಯ ಮಾಡಿದ್ದಾರೆ. ಆದರೆ ಮೃತದೇಹ ಪತ್ತೆಯಾಗಿಲ್ಲ.

ಹೀಗಾಗಿ ಇಂದು ಬೆಳಿಗ್ಗೆ ಮತ್ತೆ ಶೋಧ ಕಾರ್ಯ ಮುಂದುವರಿಸಲಾಗಿತ್ತು. ವ್ಯಕ್ತಿ ಬಿದ್ದು ಜಾಗದಿಂದ ಸ್ವಲ್ಪ ದೂರದಲ್ಲಿ ಮೃತದೇಹ ಪತ್ತೆಯಾಗಿದೆ ಒಂದು ತಿಳಿದುಬಂದಿದೆ.

You may also like

Leave a Comment