Home » ಕೋಳಿ ಜೀವಂತ ಇರುವ ಮೊದಲೇ ಕೋಳಿಯನ್ನು 2 ಇಬ್ಬಾಗ ಮಾಡಿದ ಕಟುಕ | ವೀಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿಯ ಬಂಧನ

ಕೋಳಿ ಜೀವಂತ ಇರುವ ಮೊದಲೇ ಕೋಳಿಯನ್ನು 2 ಇಬ್ಬಾಗ ಮಾಡಿದ ಕಟುಕ | ವೀಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿಯ ಬಂಧನ

0 comments

ಪರಸ್ಸಾಲ: ಕೋಳಿ ಜೀವಂತವಾಗಿರುವಾಗಲೇ ಅದರ ರೆಕ್ಕೆ-ಪುಕ್ಕ ಕಿತ್ತು ಅದನ್ನು ಎರಡು ಭಾಗವಾಗಿ ಕತ್ತರಿಸಿ ಕ್ರೌರ್ಯ ತೋರಿದ ಆರೋಪದ ಮೇಲೆ ಕಟುಕನೊಬ್ಬನನ್ನು ಕೇರಳದ ಕೆಲ್ಲೆಂಗೋಡ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಪುಥನ್ವಿತಿಲ್ ಮನು (36) ಎಂದು ಗುರುತಿಸಲಾಗಿದೆ.

ಕಳೆದ ವಾರಾಂತ್ಯದಲ್ಲಿ ಗ್ರಾಹಕರೊಬ್ಬರು ಚಿಕನ್ ತೆಗೆದುಕೊಳ್ಳಲು ಕೆಲ್ಲೆಂಗೋಡ್‌ನಲ್ಲಿರುವ ಆರೋಪಿ ಮನುನ   ಚಿಕನ್ ಸೆಂಟರ್‌ಗೆ ಬಂದಿದ್ದರು. ಈ ವೇಳೆ ಮನು, ಕೋಳಿಯನ್ನು ಮೊದಲು ಸಾಯಿಸದೇ, ಕೋಳಿ ಜೀವಂತವಾಗಿರುವಾಗಲೇ ಅದರ ರೆಕ್ಕೆ-ಪುಕ್ಕ ಕಿತ್ತುಹಾಕಿದ್ದಾನೆ.

ಸಾಮಾನ್ಯವಾಗಿ ಪ್ರಾಣಿಗಳನ್ನು ಆಹಾರಕ್ಕಾಗಿ ಮಾತ್ರಾ ವಧೆ ಮಾಡಬಹುದು. ಹಾಗಂತ ಕಾನೂನೇ ಇದೆ. ಸಹಜವಾಗಿ ಜೀವಂತ ಕೋಳಿಯನ್ನು ಕತ್ತು ಕೊಯ್ದು ಸಾಯಿಸಿದ ನಂತರ ಅದರ ರೆಕ್ಕೆ-ಪುಕ್ಕ ತೆಗೆದು ಮಾಂಸವನ್ನು ಕತ್ತರಿಸಲಾಗುತ್ತದೆ. ಆದರೆ, ಕಟುಕ ಇದ್ಯಾವುದನ್ನು ಮಾಡದೇ ನೇರವಾಗಿಯೇ ಜೀವಂತ ಕೋಳಿಯನ್ನು ಎರಡು ಭಾಗ ಮಾಡಿದ್ದಾನೆ. ಅಲ್ಲಿಗೆ ಮಾಂಸ ಕೊಳ್ಳಲು ಬಂದವರು ಅದರ ವೀಡಿಯೊ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪೊಲೀಸರ ಗಮನಕ್ಕೆ ಬಂದಿತ್ತು. ಕ್ರೌರ್ಯ ಮೆರೆದ ಆರೋಪಿ ಮನುವನ್ನು ಈಗ ಬಂಧಿಸಲಾಗಿದೆ.

You may also like

Leave a Comment