Home » ಕೆಲಸ ಮಾಡುತ್ತಿರುವಾಗ ಯಂತ್ರಕ್ಕೆ ಸಿಲುಕಿದ ವ್ಯಕ್ತಿಯ ಗುಪ್ತಾಂಗ | ಜೀವನ್ಮರಣ ಹೋರಾಟದಲ್ಲಿ ವ್ಯಕ್ತಿ

ಕೆಲಸ ಮಾಡುತ್ತಿರುವಾಗ ಯಂತ್ರಕ್ಕೆ ಸಿಲುಕಿದ ವ್ಯಕ್ತಿಯ ಗುಪ್ತಾಂಗ | ಜೀವನ್ಮರಣ ಹೋರಾಟದಲ್ಲಿ ವ್ಯಕ್ತಿ

0 comments

ಯಂತ್ರದ ಸಮೀಪ ನಿಂತುಕ್ಕೊಂಡು ಕೆಲಸ ಮಾಡುವವರು ಸ್ವಲ್ಪ ಯಾಮಾರಿದರೂ ಎಡವಟ್ಟು ಖಂಡಿತ. ಹಾಗೂ ಕೆಲವೊಮ್ಮೆ ಅಲ್ಲೋ ಇಲ್ಲೋ ಯಂತ್ರಕ್ಕೆ ಕೈ ಸಿಲುಕಿ,ಬಟ್ಟೆ ಸಿಲುಕಿ ಸಾವು ಸಂಭವಿಸಿದ ಎಷ್ಟೋ ಸುದ್ದಿಗಳನ್ನು ನಾವು ಓದಿದ್ದೇವೆ. ಈಗ ಅಂತಹುದೇ ಒಂದು ಅನಾಹುತದ ದುರ್ಘಟನೆಯೊಂದು ನಡೆದಿದೆ.

ಕೆಲಸದ ವೇಳೆ ಕೆಲವೊಮ್ಮೆ ಸ್ವಲ್ಪ ಯಾಮಾರಿದರೂ ಜೀವಕ್ಕೇ ಎರವಾಗುವಂತಹ ಅವಘಡ ಸಂಭವಿಸುತ್ತವೆ.

ಅದರಲ್ಲೂ ಯಂತ್ರೋಪಕರಣಗಳೊಂದಿಗೆ ಕೆಲಸ ಮಾಡುವಾಗ ಎಷ್ಟೇ ಜಾಗರೂಕರಾಗಿದ್ದರೂ ಸಾಲದು. ಹೀಗೆ ಕೆಲಸದ ವೇಳೆ ಯಂತ್ರವು ಆಕಸ್ಮಿಕವಾಗಿ ಖಾಸಗಿ ಅಂಗಕ್ಕೆ ತಗುಲಿ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆಯೊಂದು ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯ ಖಾಸಗಿ ಅಂಗದ ಮೇಲ್ಬಾಗ ಯಂತ್ರದಿಂದ ಕತ್ತರಿಸಿ ಹೋಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಯಂತ್ರವೊಂದರ ಸಹಾಯದಿಂದ ಕೆಲಸ ಮಾಡುತ್ತಿರುವಾಗ ಏಕಾಏಕಿ ಗುಪ್ತಾಂಗಕ್ಕೆ ತಾಕಿದೆ. ಆಗ ಅಂಗದ ಮೇಲ್ಬಾಗ ಕತ್ತರಿಸಿಹೋಗಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ನರಳಾಡುತ್ತಿರುವ ವ್ಯಕ್ತಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

You may also like

Leave a Comment