Home » ಉಡುಪಿ : ಮಾನಸಿಕ ಖಿನ್ನತೆ – ಯುವಕ ಆತ್ಮಹತ್ಯೆ!

ಉಡುಪಿ : ಮಾನಸಿಕ ಖಿನ್ನತೆ – ಯುವಕ ಆತ್ಮಹತ್ಯೆ!

0 comments

ಉಡುಪಿ: ಮಾನಸಿಕ ಖಿನ್ನತೆಗೆ ಒಳಗಾಗಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಉಡುಪಿ ಜಿಲ್ಲೆಯ ಹೆಬ್ರಿ ಶಿವಪುರ ಗ್ರಾಮದ ಪಾಂಡುಕಲ್ಲು ಎಂಬಲ್ಲಿ ನಡೆದಿದೆ.

ಪಾಂಡುಕಲ್ಲು ರಸ್ತೆ ನಿವಾಸಿ ದೀಕ್ಷಿತ್ (27)ಎಂಬುವವನೇ ಮೃತಪಟ್ಟ ಯುವಕ.

ಉಡುಪಿಯಲ್ಲಿ ಒಂದು ತಿಂಗಳಿನಿಂದ ಮೆಡಿಕಲ್ ರೆಪ್ ಆಗಿ ಕೆಲಸ ಮಾಡಿಕೊಂಡಿದ್ದ ಈತ, ಕೆಲವು ದಿನಗಳಿಂದ ಮನೆಯವರೊಂದಿಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ ಎನ್ನಲಾಗಿದೆ.

ಯಾವುದೋ ವಿಚಾರದಲ್ಲಿ ಮನನೊಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಇವರು, ಮಲಗುವ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

You may also like

Leave a Comment