Home » ತರಕಾರಿಗೆನೇ ಮೂತ್ರ ಮಾಡಿ ಜನರಿಗೆ ಮಾರಾಟ | ವ್ಯಾಪಾರಿ ಪೊಲೀಸ್ ವಶಕ್ಕೆ, ವೀಡಿಯೋ ವೈರಲ್

ತರಕಾರಿಗೆನೇ ಮೂತ್ರ ಮಾಡಿ ಜನರಿಗೆ ಮಾರಾಟ | ವ್ಯಾಪಾರಿ ಪೊಲೀಸ್ ವಶಕ್ಕೆ, ವೀಡಿಯೋ ವೈರಲ್

by Mallika
0 comments

ಆಹಾರ ಮನುಷ್ಯನ ಒಂದು ದಿನಚರಿಯ ಕ್ರಮ. ಏಕೆಂದರೆ ನಿದ್ದೆ, ಕೆಲಸ ಹೇಗೆ ಮನುಷ್ಯನಿಗೆ ಮುಖ್ಯವೋ ಹಾಗೆನೇ, ಆಹಾರ ಕೂಡಾ ಬಹಳ ಮುಖ್ಯ. ಕೆಲವರು ಮನೆ ಊಟ ಇಷ್ಟ ಪಟ್ಟರೆ, ಇನ್ನು ಕೆಲವರು ಸ್ಟ್ರೀಟ್ ಫುಡ್ ಇಷ್ಟ ಪಡುತ್ತಾರೆ. ಕೆಲವರು ಹೈಜಿನಿಕ್ ಆಗಿ ಮಾಡಿದರೆ, ಇನ್ನೂ ಕೆಲವರು ಅನ್ ಹೈಜಿನಿಕ್ ಆಗಿ ಆಹಾರ ತಯಾರಿ ಮಾಡೋದನ್ನು ನಾವು ನೋಡಿದ್ದೇವೆ.

ರಸ್ತೆ ಬದಿಯ ವ್ಯಾಪಾರಿಗಳು ಸಾಮಾನ್ಯವಾಗಿ ತಾವು ಯಾವ ಸ್ಥಳದಲ್ಲಿ ಇರುತ್ತಾರೋ ಅದೇ ಸ್ಥಳದಲ್ಲೇ, ಮೂತ್ರ ವಿಸರ್ಜನೆ ಮಾಡಿ ಅದೇ ಕೈಯಲ್ಲಿ ತಿನಿಸು ನೀಡುವ, ಕೊಳಚೆ ನೀರಿನಲ್ಲಿ ತರಕಾರಿ ತೊಳೆಯುವ ಇಂಥಹ ಹಲವಾರು ವೀಡಿಯೋಗಳು ವೈರಲ್ ಆಗಿರುವುದನ್ನು ನಾವು ಅನೇಕ ವೀಡಿಯೋದಲ್ಲಿ ನೋಡಿದ್ದೇವೆ. ಇವರೆಲ್ಲ ಜನರ ಜೀವದ ಜೊತೆ ಆಟ ಆಡುವುದೆಂದೇ ಹೇಳಬಹುದು. ಹಾಗೆನೇ ಇಲ್ಲೊಂದು ಕಡೆ ವ್ಯಕ್ತಿಯೊಬ್ಬ ಆತ ತರಕಾರಿ ವ್ಯಾಪಾರಿಯಾಗಿದ್ದು, ತರಕಾರಿ ಮೇಲೆಯೇ ಮೂತ್ರವಿಸರ್ಜನೆ ಮಾಡಿ ಅದನ್ನು ನೀಡುತ್ತಿರುವ ವೀಡಿಯೋ ಈಗ ಸಾಕಷ್ಟು ವಿವಾದ ಸೃಷ್ಟಿಸಿದೆ.

ಈ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ತರಕಾರಿಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ಷರೀಫ್ ಎಂ ತರಕಾರಿ ವ್ಯಾಪಾರಿ ಹೇಗೋ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದಾನೆ. ಈತನನ್ನು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ದುರ್ಗೇಶ್ ಗುಪ್ತಾ ಅವರು ತಮ್ಮ ಕಾರಿನಲ್ಲಿ ಹೋಗುವಾಗ ಈ ದೃಶ್ಯ ನೋಡಿ ಅದನ್ನು ಚಿತ್ರೀಕರಿಸಿದ್ದಾರೆ. ರಸ್ತೆ ಬದಿಯಲ್ಲಿ ತರಕಾರಿ ಗಾಡಿ ಎಳೆಯುತ್ತಿದ್ದ ಷರೀಫ್, ಅದರ ಮೇಲೆಯೇ ಮೂತ್ರ
ವಿಸರ್ಜನೆ ಮಾಡುತ್ತಿದ್ದುದನ್ನು ಗಮನಿಸಿದ್ದು, ತಕ್ಷಣ ಮೊಬೈಲ್‌ನಲ್ಲಿ ಅದನ್ನು ಚಿತ್ರೀಕರಿಸಿಕೊಂಡಿದ್ದಾರೆ.

ಈ ಅಸಹ್ಯಕರ ವೀಡಿಯೋ ವೈರಲ್ ಆಗುತ್ತಲೇ ಪೊಲೀಸರಲ್ಲಿ ದೂರು ದಾಖಲಾಗಿದೆ. ಸದ್ಯ ಷರೀಫ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆತ ಕೆಳಗೆ ಇಟ್ಟ ತರಕಾರಿಗಳ ಮೇಲೆ ಮೂತ್ರ ಮಾಡಿದ್ದಾಗಿ ವೀಡಿಯೋದಲ್ಲಿ ಕಂಡು ಬಂದಿದ್ದಾಗಿ ಪೊಲೀಸರು ಹೇಳಿದ್ದಾರೆ.

You may also like

Leave a Comment