Home » ಮಂಗಳೂರು :ಆಕಾಶಭವನದಲ್ಲಿ ಬ್ಯೂಟೀಶಿಯನ್ ಆಗಿದ್ದ ಯುವತಿ ನೇಣಿಗೆ ಶರಣು|ಆಕೆಯ ಸಾವಿಗೆ ಕಾರಣ!?

ಮಂಗಳೂರು :ಆಕಾಶಭವನದಲ್ಲಿ ಬ್ಯೂಟೀಶಿಯನ್ ಆಗಿದ್ದ ಯುವತಿ ನೇಣಿಗೆ ಶರಣು|ಆಕೆಯ ಸಾವಿಗೆ ಕಾರಣ!?

0 comments

ಮಂಗಳೂರು : ಕಾವೂರು ಬಳಿಯ ಆಕಾಶಭವನ ಎಂಬಲ್ಲಿ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.

ಆಕಾಶಭವನದ ಕಾಪಿಗುಡ್ಡೆನಿವಾಸಿ ಶಿಫಾಲಿ ಮೃತ ಯುವತಿ ಎಂದು ತಿಳಿದು ಬಂದಿದೆ.

ಆಕಾಶಭವನದಲ್ಲಿ ಬ್ಯೂಟೀಶಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಯುವತಿ ಎಂದಿನಂತೆ ಮನೆಗೆ ಮರಳಿದ್ದಳು. ಬಳಿಕ ಕೋಣೆಗೆ ತೆರಳಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಈಕೆಯ ಈ ನಿರ್ಧಾರದ ಹಿಂದಿರುವ ನಿಗೂಢವಾದ ರಹಸ್ಯ ಏನೆಂದು ಯಾರಿಗು ತಿಳಿದಿಲ್ಲ.ಮನೆಯವರು ಕೋಣೆಗೆ ಹೋಗಿ ನೋಡುವಷ್ಟರಲ್ಲಿ ಆಕೆ ಮೃತಪಟ್ಟಿದ್ದಳು ಎಂದು ತಿಳಿದು ಬಂದಿದೆ.ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment