ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮೊಯ್ಲಿ ಅವರು ಎತ್ತಿನ ಹೊಳೆ ಯೋಜನೆಯ ಪ್ರಶ್ನೆಗೆ ಸಿಡಿಮಿಡಿಗೊಂಡ ಘಟನೆಯೊಂದು ನಡೆದಿದೆ.
ಎತ್ತಿನ ಹೊಳೆ ಯೋಜನೆಯನ್ನು ಅವಸರಅವಸರವಾಗಿ ನೀವು ಪ್ರಾರಂಭ ಮಾಡಿದ್ದೀರಿ. ಇದೀಗ ಕರಾವಳಿಗೆ ಬರ ಬಂದಿದೆ, ಈಗಲಾದರೂ ನೀವು ನಿಲ್ಲಿಸಲು ಹೇಳುತ್ತೀರಾ ಎಂಬ ಪ್ರಶ್ನೆಗೆ ಅದೆಲ್ಲ ಹಳೆ ವಿಚಾರ, ಪ್ರಶ್ನೆ ಮಾಡಬೇಡಿ ಅದನ್ನು ಎಂದು ಹೇಳಿದ್ದಾರೆ.
ಸದಾನಂದ ಗೌಡ ಮತ್ತು ನೀವು ಈ ಯೋಜನೆಯನ್ನು ಮಾಡಿದವರು. ನಿಮ್ಮನ್ನು ಯಾಕೆ ಪ್ರಶ್ನೆ ಮಾಡಬಾರದು? ಈ ಯೋಜನೆಗೆಂದೇ 23 ಸಾವಿರ ಕೋಟಿ ಹಣ ಖರ್ಚು ಮಾಡಿದ್ದೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಬಿಜೆಪಿಯವರು ಈ ಯೋಜನೆ ನಿಲ್ಲಿಸಿದ್ದಾರೆಯೇ? ಮತ್ತೆ ನಾವು ಯಾಕೆ ನಿಲ್ಲಿಸಬೇಕು. ಇದಕ್ಕೆಲ್ಲ ಉತ್ತರ ನೀಡಲ್ಲ ಎಂದು ಹೇಳಿದ್ದಾರೆ.
ನೀವು ಕರಾವಳಿ ಜನರಿಗೆ ಉತ್ತರ ಕೊಡಲೇಬೇಕು ಎಂದು ಕೇಳಿದಾಗ, ನಾನು ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಕೊಡುತ್ತೇನೆ ಎಂದಿದ್ದಾರೆ.
ಇಲ್ಲಿ ನೀರಿಲ್ಲ, ಬರಡಾಗಿದೆ ಅಂತ ಹೇಳ್ತೀರ, ನೀರು ಹರಿಸಿಲ್ಲಾಂದ್ರೆ ನೀರು ಖಾಲಿಯಾಗೋದು ಹೇಗಾಗುತ್ತದೆ. ಯೋಜನೆ ಕಾಮಗಾರಿ ಆಗ್ತಾ ಇದೆ. ನಿಮ್ಮಲ್ಲೇ ಪ್ರಶ್ನೆ, ಉತ್ತರ ಎರಡೂ ಇದೆ ಎಂದು ಮೊಯ್ಲಿ ಅವರು ಹೇಳಿದರು.
