Home » ಮಣಿಪುರ : ಸೇನಾ ಬೆಂಗಾವಲು ವಾಹನದ ಮೇಲೆ ಉಗ್ರರ ದಾಳಿ, ಸೇನಾಧಿಕಾರಿ ಸೇರಿ 7 ಯೋಧರು ಹುತಾತ್ಮ

ಮಣಿಪುರ : ಸೇನಾ ಬೆಂಗಾವಲು ವಾಹನದ ಮೇಲೆ ಉಗ್ರರ ದಾಳಿ, ಸೇನಾಧಿಕಾರಿ ಸೇರಿ 7 ಯೋಧರು ಹುತಾತ್ಮ

0 comments

ಮಣಿಪುರ : ಮಣಿಪುರದ ಚುರಚಂದಾಪುರದಲ್ಲಿ ಉಗ್ರರು ಪೈಶಾಚಿಕ ಕೃತ್ಯ ನಡೆಸಿದ್ದು, ಏಳು ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.

ದಾಳಿಯಲ್ಲಿ ಓರ್ವ ಸೇನಾ ಅಧಿಕಾರಿ, ಅವರ ಪತ್ನಿ ಮತ್ತು ಪುತ್ರ ಮೃತಪಟ್ಟಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡವರನ್ನು ಬೆಹಿಯಾಂಗ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಇದೇ ವೇಳೆ ಘಟನೆಯಲ್ಲಿ ಒಟ್ಟು ಏಳು ಯೋಧರು ಹುತಾತ್ಮರಾಗಿದ್ದರೆ ಎನ್ನಲಾಗಿದೆ.

ಸೇನಾ ಬೆಂಗಾವಲು ವಾಹನದ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ 7 ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಉಗ್ರರ ವಿರುದ್ಧ ಪ್ರತಿ ದಾಳಿ ನಡೆಸಿದ ಸೇನೆ ಮೂವರು ಉಗ್ರರನ್ನು ಹತ್ಯೆ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಣಿಪುರದ ಸಿಂಗಾಂಗಾಟ್ ಪ್ರದೇಶದಲ್ಲಿ ಉಗ್ರರು ಸೇನಾ ಬೆಂಗಾವಲು ವಾಹನದ ಮೇಲೆ ದಾಳಿ ಮಾಡಿದ ಪರಿಣಾಮ 46 ಅಸ್ಸಾಂ ರೈಫಲ್ಸ್ ನ ಕರ್ನಲ್ ವಿಪ್ಲಪ್ ತ್ರಿಪಾಠಿ ಮತ್ತು ಇತರ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ಕರ್ನಲ್ ಅವರ ಪತ್ನಿ, ಮಗ ಮತ್ತು ಚಾಲಕ ಕೂಡ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

You may also like

Leave a Comment