Home » 500 ಪ್ರಕರಣಗಳಲ್ಲಿ ಬೇಕಾಗಿದ್ದ ಮಾವೋವಾದಿ ಸಂಘಟನೆಯ ನಾಯಕ ಶವವಾಗಿ ಪತ್ತೆ!

500 ಪ್ರಕರಣಗಳಲ್ಲಿ ಬೇಕಾಗಿದ್ದ ಮಾವೋವಾದಿ ಸಂಘಟನೆಯ ನಾಯಕ ಶವವಾಗಿ ಪತ್ತೆ!

0 comments

27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಾವೋವಾದಿ ನಾಯಕ ಸಂದೀಪ್ ಯಾದವ್ (55) ಮೃತದೇಹ ಬಿಹಾರ ರಾಜ್ಯದ ಗಯಾ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ನಿನ್ನೆ ಪತ್ತೆಯಾಗಿದೆ.

ನಿನ್ನೆ (ಬುಧವಾರ) ಸಂಜೆ ಗಯಾದ ಲುಡ್ವಾ ಅರಣ್ಯದಲ್ಲಿ ಸಂದೀಪ್ ಅಲಿಯಾಸ್ ವಿಜಯ್ ಯಾದವ್ ಶವವಾಗಿ ಪತ್ತೆಯಾಗಿದೆ. ನಿನ್ನೆ ಈ ಶವವನ್ನು ಸಿಆರ್‌ಪಿಎಫ್ ತಂಡ ಪತ್ತೆ ಮಾಡಿದೆ.

1990 ರ ದಶಕದಿಂದ ಮಾವೋವಾದಿಗಳ ಕೇಂದ್ರ ವಲಯದ ಉಸ್ತುವಾರಿ ವಹಿಸಿದ್ದ, ಈತನ ವಿರುದ್ಧ ಇಪ್ಪತ್ತಕ್ಕೂ ಹೆಚ್ಚು ಪ್ರಕರಣಗಳಿವೆ. ಬಿಹಾರ, ಜಾರ್ಖಂಡ್, ಚತ್ತೀಸ್ ಗಢ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಜಾರ್ಖಂಡ್ ಸೇರಿದಂತೆ 6 ರಾಜ್ಯಗಳಲ್ಲಿ 500 ಪ್ರಕರಣಗಳಲ್ಲಿ ಬೇಕಾಗಿದ್ದ ಈತ. ಈತನ ಮೇಲೆ 84 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿತ್ತು.
ಮಾವೋವಾದಿಗಳ ನಾಯಕನ ಪುತ್ರ ಸೋನು ಕುಮಾರ್ ತಂದೆಯ ಶವವನ್ನು ಗುರುತಿಸಿದ್ದಾನೆ‌.

ಮೃತದೇಹವನ್ನು ಅಟಾಪ್ಪಿಗೆ ಕಳುಹಿಸಲಾಗಿದೆ ಎಂದು ಗಯಾ ಎಸ್ಎಸ್ ಪಿ ಹೇಳಿದ್ದು, ಮರಣೋತ್ತರ ಪರೀಕ್ಷೆ ವರದಿಯ ಮೂಲಕ ಸಾವಿನ ಕಾರಣ ತಿಳಿದುಬರಲಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

You may also like

Leave a Comment